ರಿಲಯನ್ಸ್ ಜಿಯೋದಿಂದ ಹೊಸದಾಗಿ ತಿಂಗಳ ರೀಚಾರ್ಜ್ ಪ್ಲಾನ್ ಅನ್ನು ಪ್ರೀಪೇಯ್ಡ್ ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. 499 ರೂಪಾಯಿಯ ಈ ಪ್ಲಾನ್ ಅಡಿಯಲ್ಲಿ ದಿನಕ್ಕೆ ಎರಡು ಜಿಬಿ ಡೇಟಾ ಒದಗಿಸಲಾಗುತ್ತದೆ. ಇನ್ನು ಈ 499 ರೂಪಾಯಿಯ ಪ್ಲಾನ್ನಲ್ಲಿ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಕೂಡ ದೊರೆಯುತ್ತದೆ. ಮೈಜಿಯೋ ಆ್ಯಪ್ ಹಾಗೂ ಜಿಯೋ.ಕಾಮ್ ವೆಬ್ಸೈಟ್ ಎರಡರಲ್ಲೂ ಈ ಪ್ಲಾನ್ ಲಭ್ಯ ಇದೆ. ಮೊದಲೇ ಹೇಳಿದ ಹಾಗೆ 499 ರೂಪಾಯಿಯ ಪ್ಲಾನ್ಗೆ 28 ದಿನಗಳ ವ್ಯಾಲಿಡಿಟಿ ಇದೆ. ಗ್ರಾಹಕರಿಗೆ ದಿನಕ್ಕೆ 2 ಜಿಬಿಯಂತೆ 56 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಒಂದು ಸಲ ಎರಡು ಜಿಬಿ ಡೇಟಾ ಮುಗಿದ ಮೇಲೆ ಇಂಟರ್ನೆಟ್ ವೇಗ 64 ಕೆಬಿಪಿಎಸ್ಗೆ ಇಳಿಯುತ್ತದೆ.
ಈ ಪ್ಲಾನ್ನಲ್ಲಿ ಅನಿಯಮಿತ ಧ್ವನಿ ಕರೆ, 100 ಎಸ್ಸೆಮ್ಮೆಸ್ ಕೂಡ ಸಿಗುತ್ತದೆ. ಹೆಚ್ಚುವರಿ ಬೆನಿಫಿಟ್ ಆಗಿ ಜಿಯೋ ಆ್ಯಪ್ಗಳಿಗೆ ಸಂಪರ್ಕ ಕೂಡ ಸಿಗುತ್ತದೆ. ಹೊಸ ಬಳಕೆದಾರರಿಗೆ ಹೊಸ ಪ್ಲಾನ್ ಜತೆಗೆ ಪ್ರೈಮ್ ಸಬ್ಸ್ಕ್ರಿಪ್ಷನ್ ದೊರೆಯುತ್ತದೆ. ಕಾಂಪ್ಲಿಮೆಂಟರಿಯಾಗಿ ಡಿಸ್ನಿ+ ಹಾಟ್ಸ್ಟಾರ್ ಮೊಬೈಲ್ ವಾರ್ಷಿಕ ಸಬ್ಸ್ಕ್ರಿಪ್ಷನ್ ಲಭ್ಯ ಇದೆ. ಇನ್ನು ಏರ್ಟೆಲ್ನ 359 ರೂಪಾಯಿಯ ಪ್ಲಾನ್ನೊಂದಿಗೆ ರಿಲಯನ್ಸ್ ಜಿಯೋದ 499 ರೂಪಾಯಿ ಪ್ಲಾನ್ ಸ್ಪರ್ಧಿಸುತ್ತಿದೆ. ಏರ್ಟೆಲ್ನಲ್ಲಿ ಕೂಡ ವ್ಯಾಲಿಡಿಟಿ 28 ದಿನವೇ ಇದೆ. ಜಿಯೋದ ಹೊಸ ಪ್ಲಾನ್ನಂತೆ ಏರ್ಟೆಲ್ನ 359ರ ಪ್ಲಾನ್ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ, ದಿನಕ್ಕೆ ನೂರು ಎಸ್ಸೆಮ್ಮೆಸ್ ಒದಗಿಸುತ್ತದೆ.
ಏರ್ಟೆಲ್ನ ಗ್ರಾಹಕರಿಗೆ 28 ದಿನಗಳ ಕಾಲ Xstream ಆ್ಯಪ್ನಲ್ಲಿ ಒಂದು Xstream ಚಾನೆಲ್ಗೆ ಉಚಿತ ಸಂಪರ್ಕ ಸಿಗುತ್ತದೆ. ಅನಿಯಮಿತವಾದ ಧ್ವನಿ ಕರೆ ಸೌಲಭ್ಯ ಇದೆ. 28 ದಿನಗಳಿಗ ಪ್ರೈಮ್ ವಿಡಿತೋ ಮೊಬೈಲ್ ಎಡಿಷನ್ ಜತೆಗೆ ಇತರ ಬೆನಿಫಿಟ್ಗಳಿವೆ.
ವೊಡಾಫೋನ್ ಐಡಿಯಾದಲ್ಲೂ 359 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಇದ್ದು, ದಿನಕ್ಕೆ 2 ಜಿಬಿ ಡೇಟಾದೊಂದಿಗೆ ಬರುತ್ತದೆ. ಅನಿಯಮಿತ ವಾಯ್ಸ್ ಕಾಲಿಂಗ್, ದಿನಕ್ಕೆ 100 ಎಸ್ಸೆಮ್ಮೆಸ್ 28 ದಿನಗಳ ಅವಧಿಗೆ ದೊರೆಯುತ್ತದೆ. ವಾರಾಂತ್ಯದ ಡೇಟಾ ರೋಲ್ ಓವರ್ ಜತೆಗೆ Vi ಮೂವೀಸ್ ಮತ್ತು ಟೀವಿಗೆ ಸಂಪರ್ಕ ಸಿಗುತ್ತದೆ.
ಇದನ್ನೂ ಓದಿ: Jio Recharge Plans: ರಿಲಯನ್ಸ್ ಜಿಯೋ ಪ್ರಿಪೇಯ್ಡ್ನ ವಿವಿಧ ರೀಚಾರ್ಜ್ ಯೋಜನೆಗಳು, ಅದರ ಬೆನಿಫಿಟ್ಗಳು