AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆಗೆ ಸಜ್ಜಾಗಿದೆ ಭರ್ಜರಿ ಮೈಲೇಜ್ ನೀಡುವ ರೆನಾಲ್ಟ್ ಇವಿ 5 ಕಾರು

ರೆನಾಲ್ಟ್ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಇವಿ 5 ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಜಿನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಲಿದೆ. ಹೊಸ ಇವಿ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಮಾದರಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಬಿಡುಗಡೆಗೆ ಸಜ್ಜಾಗಿದೆ ಭರ್ಜರಿ ಮೈಲೇಜ್ ನೀಡುವ ರೆನಾಲ್ಟ್ ಇವಿ 5 ಕಾರು
ರೆನಾಲ್ಟ್ ಇವಿ 5 ಕಾರು
TV9 Web
| Edited By: |

Updated on:Oct 08, 2026 | 12:17 PM

Share

ಜಾಗತಿಕ ಮಾರುಕಟ್ಟೆಗಾಗಿ ಹೊಸ ತಲೆಮಾರಿನ ವಿವಿಧ ಕಾರು ಮಾದರಿಗಳನ್ನು ಅನಾವರಣಗೊಳಿಸುತ್ತಿರುವ ರೆನಾಲ್ಟ್ (Renault)  ಕಂಪನಿಯು ಶೀಘ್ರದಲ್ಲಿಯೇ ಇವಿ 5 ಎಲೆಕ್ಟ್ರಿಕ್ ಹ್ಯಾಕ್ ಬ್ಯಾಕ್ ಕಾರು ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಹೊಸ ಇವಿ ಕಾರು ಮಾದರಿಯು ವಿನೂತನ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ. ಹೊಸ ಇವಿ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಮಾದರಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಇದು 2024ರ ಫೆಬ್ರವರಿ 26ರಂದು ನಡೆಯಲಿರುವ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ.

ಹೊಸ ಇವಿ 5 ಎಲೆಕ್ಟ್ರಿಕ್ ಕಾರು ಮಾದರಿಯು ರೆನಾಲ್ಟ್ ಕಂಪನಿಯ ಎಎಂಪಿಆರ್ ಸಣ್ಣ ಕಾರುಗಳ ಉತ್ಪಾದನಾ ಪ್ಲ್ಯಾಟ್ ಫಾರ್ಮ ಆಧರಿಸಿ ಅಭಿವೃದ್ದಿಗೊಳ್ಳುತ್ತಿದ್ದು, ಇದು 52 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿನ ಹಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಪ್ರತಿ ಚಾರ್ಜ್ ಗೆ 380ರಿಂದ 400 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಇದರೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರುಗಳಂತೆ ಪವರ್ ಟ್ರೈನ್ ಪಡೆದುಕೊಳ್ಳಲಿರುವ ಹೊಸ ಇವಿ5 ಕಾರು ಮಾದರಿಯು 135 ಹಾರ್ಸ್ ಪವರ್ ಉತ್ಪದನೆಯೊಂದಿಗೆ ರೆಟ್ರೋ ವಿನ್ಯಾಸ ಹೊಂದಿದೆ. ಇದರಲ್ಲಿರುವ ವಿನೂತನ ಫೀಚರ್ಸ್ ಗಳೊಂದಿಗೆ ರೌಂಡ್ ಹೆಡ್ ಲ್ಯಾಂಪ್ಸ್, ಎಲ್ಇಡಿ ಪ್ರೊಜೆಕ್ಟರ್, ಬಾನೆಟ್ ಮೇಲಿರುವ ಚಾರ್ಜಿಂಗ್ ಪಾಯಿಂಟ್ ಮತ್ತು ಹಿಂಬದಿಯಲ್ಲಿ ಪೂರ್ತಿಯಾಗಿ ಹರಡಿಕೊಂಡಿರುವ ಲೈಟ್ ಬಾರ್ ಜೋಡಿಸಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಬಿ ಸೆಗ್ಮೆಂಟ್ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಹಲವು ಪ್ರಿಮಿಯಂ ಫೀಚರ್ಸ್ ನೀಡುತ್ತಿದ್ದು, ಇದು ಸಣ್ಣ ಗಾತ್ರದಲ್ಲೂ ಆರಾಮದಾಯಕ ಡ್ರೈವಿಂಗ್ ಒದಗಿಸುವ ಮೂಲಕ ದೂರದ ಪ್ರಯಾಣದ ಆಯಾಸವನ್ನು ಕಡಿಮೆ ಮಾಡಲಿದೆ. ಹಾಗೆಯೇ ಸುರಕ್ಷತೆಯಲ್ಲೂ ಗಮನಸೆಳೆಯಲಿರುವ ಹೊಸ ಇವಿ ಕಾರು ಮಾದರಿಯು ಕಡಿಮೆ ಬೆಲೆಯೊಂದಿಗೆ ಪೆಟ್ರೋಲ್ ಕಾರು ಮಾದರಿಗಳಿಗೆ ಅತ್ಯುತ್ತಮ ಪರ್ಯಾಯ ಆಯ್ಕೆಯಾಗಲಿದೆ.

ಭಾರತದಲ್ಲಿ ಬಿಡುಗಡೆ ಯಾವಾಗ?

ಭಾರತದಲ್ಲಿ ಸದ್ಯ ಹೊಸ ಹೂಡಿಕೆಯೊಂದಿಗೆ ಸಣ್ಣ ಗಾತ್ರದ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸಿರುವ ರೆನಾಲ್ಟ್ ಕಂಪನಿಯು ಶೀಘ್ರದಲ್ಲಿ ಹೊಸ ತಲೆಮಾರಿನ ಡಸ್ಟರ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಡಸ್ಟರ್ ಎಸ್ ಯುವಿ ಬಿಡುಗಡೆಯ ನಂತರವಷ್ಟೇ ಇವಿ 5 ಕಾರು ಮಾದರಿಯನ್ನು ಬಿಡುಗಡೆ ಮಾಡುವ ನೀರಿಕ್ಷೆಗಳಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳು ಈಗಾಗಲೇ ಹಲವಾರು ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ರೆನಾಲ್ಟ್ ಹೊಸ ಇವಿ 5 ಕಾರುಗಳು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.

Published On - 2:19 pm, Tue, 12 December 23

Follow Us
TV9 Web
TV9 Web

TV9 Kannada

Read More
ಹಬ್ಬ ಮುಗಿಸಿ ಬೆಂಗಳೂರಿನತ್ತ ಜನ: ಫುಲ್ ಟ್ರಾಫಿಕ್ ಜಾಮ್
ಹಬ್ಬ ಮುಗಿಸಿ ಬೆಂಗಳೂರಿನತ್ತ ಜನ: ಫುಲ್ ಟ್ರಾಫಿಕ್ ಜಾಮ್
ಜಂಬೂಸವಾರಿ ಯಶಸ್ವಿ: ಚಾಮುಂಡಿಯನ್ನು ಹೊತ್ತು ಮೆರೆಸಿದ ಪ್ರಶಾಂತ
ಜಂಬೂಸವಾರಿ ಯಶಸ್ವಿ: ಚಾಮುಂಡಿಯನ್ನು ಹೊತ್ತು ಮೆರೆಸಿದ ಪ್ರಶಾಂತ
ಜಾತ್ರೆ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಜಾತ್ರೆ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು