Tenant Rights: ಮನೆ ಓನರ್ ಕಿರಿಕ್ ಮಾಡುತ್ತಾರಾ? ಬಾಡಿಗೆದಾರರಿಗಿರುವ 10 ಹಕ್ಕುಗಳ ಬಗ್ಗೆ ತಿಳಿದಿರಿ

|

Updated on: May 08, 2023 | 11:55 AM

Rent Control Act: ರೆಂಟ್ ಕಂಟ್ರೋಲ್ ಕಾಯ್ದೆಯಲ್ಲಿ ಮನೆ ಮಾಲೀಕರಿಗೆ ಹಲವು ಹಕ್ಕುಗಳನ್ನು ಕೊಡಲಾಗಿದೆ. ಹಾಗೆಯೇ, ಬಾಡಿಗೆದಾರರಿಗೂ ಪ್ರಮುಖ ಹಕ್ಕುಗಳನ್ನು ಕೊಡಲಾಗಿದೆ. ಮುಂಜಾಗ್ರತೆಯ ದೃಷ್ಟಿಯಿಂದಲಾದರೂ ಬಾಡಿಗೆದಾರರು ತಮ್ಮ ಹಕ್ಕುಗಳನ್ನು ತಿಳಿದಿರುವುದು ಒಳಿತು.

Tenant Rights: ಮನೆ ಓನರ್ ಕಿರಿಕ್ ಮಾಡುತ್ತಾರಾ? ಬಾಡಿಗೆದಾರರಿಗಿರುವ 10 ಹಕ್ಕುಗಳ ಬಗ್ಗೆ ತಿಳಿದಿರಿ
ಮನೆ ಬಾಡಿಗೆ
Follow us on

ಬೆಂಗಳೂರು: ಈಗ ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ದೊಡ್ಡ ನಗರಗಳಲ್ಲೇ ಹೆಚ್ಚು ನೆಲಸಿರುವುದರಿಂದ ಹಳ್ಳಿಗಳಿಂದ ಹಿಡಿದು ಸಣ್ಣ ನಗರಗಳವರೆಗೆ ಜನರು ದೊಡ್ಡ ನಗರಗಳಿಗೆ ಕೆಲಸಕ್ಕೆ ಹೋಗುವುದು ಅನಿವಾರ್ಯ. ಹೀಗಾಗಿ, ದೊಡ್ಡ ನಗರಗಳಲ್ಲಿ ಮನೆ ಬಾಡಿಗೆ ಹಿಡಿದು ಬದುಕಬೇಕಾಗುತ್ತದೆ. ಇದು ಹಲವೊಮ್ಮೆ ಮನೆ ಮಾಲೀಕರು (Landlord) ಮತ್ತು ಬಾಡಿಗೆದಾರರ (Tenant) ಮಧ್ಯೆ ಬೇರೆ ಬೇರೆ ಕಾರಣಗಳಿಗೆ ವ್ಯಾಜ್ಯಗಳಾಗುವುದುಂಟು. ಮನೆ ಮಾಲೀಕರು ಹಾಕುವ ಷರತ್ತುಗಳಿಗೆ ಬಾಡಿಗೆದಾರ ಬದ್ಧತೆ ತೋರಲು ಸಾಧ್ಯವಾಗದೇ ಹೋಗಬಹುದು. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಬಾಡಿಗೆದಾರರನ್ನು ಮನೆಯಿಂದ ತೆರವುಗೊಳಿಸಲು ಯತ್ನಿಸಬಹುದು. ದಿಢೀರನೇ ಬಾಡಿಗೆ ದರ ವಿಪರೀತ ಹೆಚ್ಚಿಸುವುದು, ನೀರಿನ ದರ ಹೆಚ್ಚಿಸುವುದು, ಮನೆಗೆ ಬರುವ ಸಮಯ ಹೋಗುವ ಸಮಯ ಇತ್ಯಾದಿಗೆಲ್ಲಾ ವಿಪರೀತ ನಿರ್ಬಂಧಗಳನ್ನು ಹಾಕುವುದು ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಬಾಡಿಗೆದಾರರು ಎದುರಿಸುತ್ತಾರೆ.

ಮನೆ ಮಾಲೀಕರು ಸ್ಥಳೀಯರಾಗಿರುವುದರಿಂದ ಅವರನ್ನು ಪ್ರಶ್ನಿಸಲು ಬಾಡಿಗೆದಾರರಿಗೆ ಸಾಮಾನ್ಯವಾಗಿ ಆಗುವುದಿಲ್ಲ. ಮನೆ ಬಾಡಿಗೆಗೆಂದು ಮಾಲೀಕರ ಬಳಿ ಭದ್ರತಾ ಠೇವಣಿಯಾಗಿ ಇರಿಸುವ ಹಣ ವಾಪಸ್ ಬರದೇ ಹೋಗಬಹುದು ಎಂಬ ಭಯದಲ್ಲಿ ಬಾಡಿಗೆದಾರರು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡು ಓನರ್ ಹೇಳಿದಂತೆ ಕೇಳಬೇಕಾಗುತ್ತದೆ. ರೆಂಟ್ ಕಂಟ್ರೋಲ್ ಕಾಯ್ದೆಯಲ್ಲಿ (Rent Control Act) ಮನೆ ಮಾಲೀಕರಿಗೆ ಹಲವು ಹಕ್ಕುಗಳನ್ನು ಕೊಡಲಾಗಿದೆ. ಹಾಗೆಯೇ, ಬಾಡಿಗೆದಾರರಿಗೂ ಪ್ರಮುಖ ಹಕ್ಕುಗಳನ್ನು ಕೊಡಲಾಗಿದೆ. ಮುಂಜಾಗ್ರತೆಯ ದೃಷ್ಟಿಯಿಂದಲಾದರೂ ಬಾಡಿಗೆದಾರರು ತಮ್ಮ ಹಕ್ಕುಗಳನ್ನು ತಿಳಿದಿರುವುದು ಒಳಿತು.

ಇದನ್ನೂ ಓದಿBank Deposits: ಅಧಿಕ ಬಡ್ಡಿ ಕೊಡುವ ಬ್ಯಾಂಕ್​ಗಳಲ್ಲಿ ಹಣ ಇರಿಸಲು ಭಯವೇ? ಆರ್​ಬಿಐ ನಿಯಮ ತಿಳಿದಿರಿ; ಅಪಾಯ ತಪ್ಪಿಸಲು ಈ ಉಪಾಯ ಮಾಡಿ

ರೆಂಟ್ ಕಂಟ್ರೋಲ್ ಆ್ಯಕ್ಟ್ ಪ್ರಕಾರ ಮನೆ ಬಾಡಿಗೆದಾರರ ಹಕ್ಕುಗಳು:

  1. ಮನೆ ವಾಸಯೋಗ್ಯವಾಗಿರಬೇಕು
  2. ಮನೆಯ ಮಾಲೀಕರ ಪರಿಚಯ ತಿಳಿಯುವ ಹಕ್ಕು
  3. ತೊಂದರೆ ಇಲ್ಲದೇ ಮನೆಯಲ್ಲಿ ಇರುವ ಹಕ್ಕು
  4. ಮನೆಯ ಎನರ್ಜಿ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ (EPC) ನೋಡುವ ಹಕ್ಕು
  5. ಬಾಡಿಗೆಯ ದರ ಏರಿಕೆ ನ್ಯಾಯಯುತವಾಗಿಲ್ಲದಿದ್ದರೆ ಅದನ್ನು ಪ್ರತಿಭಟಿಸುವ ಹಕ್ಕು
  6. ಮನೆಯಿಂದ ಬಲವಂತವಾಗಿ ತೆರವುಗೊಳಿಸುವುದನ್ನು ಪ್ರತಿರೋಧಿಸುವ ಹಕ್ಕು
  7. ಬಾಡಿಗೆ ಅವಧಿ ಮುಗಿದ ಬಳಿಕ ತಮ್ಮ ಭದ್ರತಾ ಠೇವಣಿ ಹಣವನ್ನು ಮರಳಿ ಪಡೆಯುವ ಹಕ್ಕು
  8. ಬಾಡಿಗೆ ಕರಾರು ಅಂತ್ಯಗೊಳಿಸಬೇಕೆಂದು ಮನೆ ಮಾಲೀಕ ಏಕಾಏಕಿ ಹೇಳಿದರೆ, ನೋಟೀಸ್ ಪೀರಿಯಡ್ ನೀಡಬೇಕೆಂದು ಕೇಳುವ ಹಕ್ಕು
  9. ಕರಾರಿನಲ್ಲಿರುವ ಬಾಡಿಗೆದಾರರ ವಾರಸುದಾರರೂ ಬಾಡಿಗೆದಾರರೇ. ಬಾಡಿಗೆ ನಿಯಂತ್ರಣ ಕಾಯ್ದೆ ಅಡಿ ಈ ವಾರಸುದಾರರಿಗೂ ಬಾಡಿಗೆದಾರರ ಎಲ್ಲಾ ಹಕ್ಕುಗಳು ಇರುತ್ತವೆ.
  10. ಮನೆ ಬಾಡಿಗೆ ವಿಚಾರದಲ್ಲಿ ಯಾವುದಾದರೂ ವ್ಯಾಜ್ಯ ಬಂದರೆ ರೆಂಟ್ ಕಂಟ್ರೋಲ್ ನ್ಯಾಯಾಲಯಕ್ಕೆ ಹೋಗುವ ಹಕ್ಕು.

ಇದನ್ನೂ ಓದಿBEML Sale: ಬೆಮೆಲ್ ಮಾರಾಟಕ್ಕೆ ಸರ್ಕಾರದಿಂದ ಇನ್ನೊಂದು ಹೆಜ್ಜೆ?; ಶೇ. 26ರಷ್ಟು ಪಾಲು ಮಾರಲು ಶೀಘ್ರದಲ್ಲೇ ಬಿಡ್​ಗಳಿಗೆ ಆಹ್ವಾನ

ಬಾಡಿಗೆ ಕರಾರು ಪತ್ರ ಇದ್ದರೆ ಮಾತ್ರ ಈ ಹಕ್ಕುಗಳು

ಅನೇಕ ಸಂದರ್ಭಗಳಲ್ಲಿ ಯಾವುದೇ ಕರಾರು ಪತ್ರ ಅಥವಾ ಒಪ್ಪಂದ ಮಾಡಿಕೊಳ್ಳದೆಯೇ ಮನೆ ಬಾಡಿಗೆಗೆ ಹೋಗುವುದಿದೆ, ಅಥವಾ ಬಾಡಿಗೆಗೆ ಕೊಡುವುದಿದೆ. ಬಹಳ ಕಡೆ ಇಂಥದ್ದು ನಡೆಯುತ್ತದೆ. ಇಲ್ಲಿ ವ್ಯಾಜ್ಯ ಉಂಟಾದಾಗ ಯಾರಿಗೂ ಕೂಡ ಕಾನೂನಾತ್ಮಕ ಬೆಂಬಲ ಸಿಗುವುದಿಲ್ಲ. ಆದ್ದರಿಂದ ಮನೆ ಮಾಲೀಕ ಮತ್ತು ಬಾಡಿಗೆದಾರರ ಮಧ್ಯೆ ಕರಾರು ಒಪ್ಪಂದವಾಗಿ ಸಹಿ ಆಗಿರಬೇಕು. ಆಗ ಮನೆ ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರಿಗೂ ಹಕ್ಕುಗಳು ಸಿಂಧುವಾಗಿರುತ್ತವೆ.

11 ತಿಂಗಳಿಗೆ ಬಾಡಿಗೆ ಕರಾರು ಮಾಡಿಸುವುದೇಕೆ?

ಈಗ ಬಾಡಿಗೆ ಕರಾರುಗಳು 11 ತಿಂಗಳಿಗೆ ಸೀಮಿತಗೊಂಡಿರುವುದನ್ನು ಗಮನಿಸಿರಬಹುದು. 11 ತಿಂಗಳ ಬಳಿಕ ಬಾಡಿಗೆ ಮುಂದುವರಿಸುವುದಿದ್ದರೆ ಅದನ್ನು ನವೀಕರಿಸಿಕೊಂಡು ಹೋಗಲಾಗುತ್ತದೆ. 11 ತಿಂಗಳಿಗೆ ಕರಾರು ಸೀಮಿತಗೊಳಿಸಲು ಕಾರಣ ಇದೆ. ಬಾಡಿಗೆ ಕರಾರು ಒಂದು ವರ್ಷ ಹಾಗೂ ಹೆಚ್ಚಿನ ಅವಧಿಯದ್ದಾದರೆ ಅದನ್ನು ನೊಂದಣಿ ಮಾಡಿಸಬೇಕು ಎಂಬ ನಿಯಮ ಇದೆ. ಇದನ್ನು ತಪ್ಪಿಸಲು ಕೆಲವು ಮನೆ ಮಾಲೀಕರು 11 ತಿಂಗಳ ಅವಧಿಗೆ ಬಾಡಿಗೆ ಕರಾರು ಮಾಡಿಕೊಳ್ಳುತ್ತಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ