BEML Sale: ಬೆಮೆಲ್ ಮಾರಾಟಕ್ಕೆ ಸರ್ಕಾರದಿಂದ ಇನ್ನೊಂದು ಹೆಜ್ಜೆ?; ಶೇ. 26ರಷ್ಟು ಪಾಲು ಮಾರಲು ಶೀಘ್ರದಲ್ಲೇ ಬಿಡ್​ಗಳಿಗೆ ಆಹ್ವಾನ

Financial Bids To Get 26% Stake In BEML: ಬೆಮೆಲ್ ಸಂಸ್ಥೆಯ ಖಾಸಗೀಕರಣ ಮಾಡಹೊರಟಿರುವ ಸರ್ಕಾರ ತನ್ನ ಶೇ. 54.03 ಪಾಲಿನಲ್ಲಿ ಶೇ 26ರಷ್ಟನ್ನು ಮಾರಲು ಹಣಕಾಸು ಬಿಡ್ ಕರೆಯುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆ ಕರೆಯಲಾಗಿದ್ದ ಪೂರ್ವಭಾವಿ ಬಿಡ್​ನಲ್ಲಿ ಹಲವರು ಆಸಕ್ತಿ ತೋರಿದ್ದರು.

BEML Sale: ಬೆಮೆಲ್ ಮಾರಾಟಕ್ಕೆ ಸರ್ಕಾರದಿಂದ ಇನ್ನೊಂದು ಹೆಜ್ಜೆ?; ಶೇ. 26ರಷ್ಟು ಪಾಲು ಮಾರಲು ಶೀಘ್ರದಲ್ಲೇ ಬಿಡ್​ಗಳಿಗೆ ಆಹ್ವಾನ
ಬೆಮೆಲ್
Follow us
|

Updated on: May 07, 2023 | 4:51 PM

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬೆಮೆಲ್ ಸಂಸ್ಥೆಯನ್ನು ಖಾಸಗಿಕರಣಗೊಳಿಸುವ (BEML Privatisation) ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಪ್ರಿಲಿಮಿನರಿ ಬಿಡ್ ಕರೆದಿದ್ದ ಕೇಂದ್ರ ಸರ್ಕಾರ ಇದೀಗ ಶೀಘ್ರದಲ್ಲೇ ಹಣಕಾಸು ಬಿಡ್​ಗಳನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ರಕ್ಷಣಾ ವಲಯದ ಬೆಮೆಲ್ ಸಂಸ್ಥೆಯ ಶೇ. 26ರಷ್ಟು ಪಾಲನ್ನು (26% Stake) ಸರ್ಕಾರ ಮಾರಲು ಹೊರಟಿದೆ. ಕೇವಲ ಪಾಲು ಮಾತ್ರವಲ್ಲ ಸಂಸ್ಥೆಯ ಆಡಳಿತವೂ ಕೂಡ ಖಾಸಗಿಯವರ ಕೈ ಸೇರಲಿದೆ. ಏಷ್ಯಾದ ಎರಡನೇ ಅತಿದೊಡ್ಡ ಅರ್ಥ್ ಮೂವಿಂಗ್ ಉಪಕರಣಗಳ ತಯಾರಕ ಸಂಸ್ಥೆ ಎನಿಸಿರುವ ಬೆಮೆಲ್ ಅನ್ನು ಖಾಸಗೀಕರಣಗೊಳಿಸುವ ಪ್ರಸ್ತಾವ 2016ರಿಂದಲೇ ಇತ್ತು. ಈ ನಿಟ್ಟಿನಲ್ಲಿ ಬೆಮೆಲ್​ನಿಂದ ಮುಖ್ಯ ಭಾಗವಲ್ಲದ ವ್ಯವಹಾರಗಳನ್ನು ಪ್ರತ್ಯೇಕರಿಸಿ ಬೆಮೆಲ್ ಲ್ಯಾಂಡ್ ಅಸೆಟ್ಸ್ ಲಿ (BLAL) ಎಂಬ ಹೊಸ ಕಂಪನಿಯನ್ನು ಸ್ಥಾಪಿಸಲಾಗಿದೆ. ಇದು ಬೆಮೆಲ್ ಖಾಸಗೀಕರಣದ ಭಾಗವಾಗಿ ಮಾಡಲಾದ ಪ್ರಕ್ರಿಯೆ. ಈ ಹೊಸ ಕಂಪನಿ ಷೇರುಮಾರುಕಟ್ಟೆಗಳಲ್ಲಿ 2023 ಏಪ್ರಿಲ್ ತಿಂಗಳಲ್ಲಿ ಲಿಸ್ಟ್ ಕೂಡ ಆಗಿದೆ. ಇದರ ಬೆನ್ನಲ್ಲೇ ಈಗ ಬೆಮೆಲ್​ನ ಖಾಸಗೀಕರಣಕ್ಕೆ ಸರ್ಕಾರ ಗಟ್ಟಿ ಹೆಜ್ಜೆಗಳನ್ನು ಇಡುವ ನಿರೀಕ್ಷೆ ಇದೆ.

2021 ಜನವರಿಯಲ್ಲಿ ಬೆಮೆಲ್​ನ ಶೇ. 26ರಷ್ಟು ಪಾಲು ಮಾರಾಟಕ್ಕೆ ಸರ್ಕಾರ ಪ್ರಿಲಿಮಿನರಿ ಬಿಡ್ ಆಹ್ವಾನಿಸಿದಾಗ ಹಲವು ಕಡೆಗಳಿಂದ ಆಸಕ್ತಿ (EoI- Expression of Interest) ವ್ಯಕ್ತವಾಗಿವೆಯಂತೆ. ಇದೀಗ ಫೈನಾನ್ಷಿಯಲ್ ಬಿಡ್ ಆಹ್ವಾನಿಸಲು ಸರ್ಕಾರ ನಿರ್ಧರಿಸಿರುವುದು ತಿಳಿದುಬಂದಿದೆ. ಫೈನಾನ್ಷಿಯಲ್ ಬಿಡ್​ನಲ್ಲಿ ಎಷ್ಟು ಹಣಕ್ಕೆ ಶೇ. 26ರಷ್ಟು ಪಾಲು ಖರೀದಿಸಲಾಗುವುದು ಎಂಬ ಮಾಹಿತಿ ಇರುತ್ತದೆ. ಅತಿಹೆಚ್ಚು ಹಣಕ್ಕೆ ಬಿಡ್ ಮಾಡಿರುವವರಿಗೆ ಬೆಮೆಲ್ ಆಡಳಿತವು ಕೈಸೇರುತ್ತದೆ.

ಇದನ್ನೂ ಓದಿPMEGP; ಸ್ವಂತ ಉದ್ಯೋಗದ ಕನಸು ಸಾಕಾರಗೊಳಿಸಲು 50 ಲಕ್ಷ ರೂವರೆಗೂ ಸಹಾಯಧನ; ಪಿಎಂಇಜಿಪಿ ಸಬ್ಸಿಡಿ, ಬಡ್ಡಿ ದರ ಇತ್ಯಾದಿ ವಿವರ ತಿಳಿದಿರಿ

ಬೆಮೆಲ್ ಉತ್ಪನ್ನಗಳು ಯಾವುವು?

ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಭಾರತ್ ಅರ್ಥ್ ಮೂವರ್ಸ್ ಲಿ ಸಂಸ್ಥೆ ಬೆಂಗಳೂರು, ಕೆಜಿಎಫ್, ಮೈಸೂರು ಮತ್ತು ಪಾಲಕ್ಕಾಡ್​ನಲ್ಲಿ (ಕೇರಳ) ತಯಾರಿಕಾ ಘಟಕಗಳನ್ನು ಹೊಂದಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಅರ್ಥ್ ಮೂವಿಂಗ್ ಉಪಕರಣಗಳ ತಯಾರಕ ಸಂಸ್ಥೆ ಎನಿಸಿದೆ. ಬುಲ್​ಡೋಜರ್, ಎಕ್ಸ್​ಕವೇಟರ್, ರೈಲ್​ಕೋಚ್, ಡಂಪ್ ಟ್ರಕ್, ವೀಲ್ ಲೋಡರ್ಸ್, ರೋಪ್ ಶೋವಲ್, ಸ್ಕ್ರೇಪರ್, ಮೋಟಾರ್ ಗ್ರೇಡರ್, ಭಾರೀ ತೂಕದ ಟ್ರಕ್​ಗಳು, ಟ್ರೈಲರ್​ಗಳು ಇತ್ಯಾದಿಯನ್ನು ತಯಾರಿಸುತ್ತದೆ. ಭಾರತದ ಡಿಫೆನ್ಸ್ ಇಲಾಖೆಗೆ ಬೇಕಾದ ವಾಹನಗಳನ್ನು ಬೆಮೆಲ್ ತಯಾರಿಸಿಕೊಡುತ್ತದೆ. ಭಾರತೀಯ ರೈಲ್ವೆ ಇಲಾಖೆಯೂ ಬೆಮೆಲ್​ನ ದೊಡ್ಡ ಗ್ರಾಹಕರ ಪೈಕಿ ಇದೆ.

1964ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಸಹಾಯದಿಂದ ಬೆಂಗಳೂರಿನಲ್ಲಿ ಸ್ಥಾಪನೆಯಾದ ಬೆಮೆಲ್ 1992ರವರೆಗೂ ಭಾರತ ಸರ್ಕಾರದ ಏಕೈಕ ಸ್ವಾಮ್ಯತೆಯಲ್ಲಿ ಇತ್ತು. 1992ರಲ್ಲಿ ಸರ್ಕಾರ ತನ್ನ ಶೇ. 25ರಷ್ಟು ಪಾಲನ್ನು ಖಾಸಗಿಗೆ ಮಾರಿತು. ಷೇರುಪೇಟೆಯಲ್ಲೂ ಇದು ಲಿಸ್ಟ್ ಆಗಿದೆ.

ಇದನ್ನೂ ಓದಿChina vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?

ಬೆಮೆಲ್​ನಲ್ಲಿ ಸರ್ಕಾರದ ಪಾಲು ಈಗ ಎಷ್ಟಿದೆ?

ಸದ್ಯ ಬಿಇಎಂಎಲ್​ನಲ್ಲಿ ಸರ್ಕಾರದ ಪಾಲು ಶೇ. 54.03ರಷ್ಟಿದೆ. ಅದರಲ್ಲಿ ಶೇ. 26ರಷ್ಟು ಪಾಲನ್ನು ಸರ್ಕಾರ ಮಾರಲು ಹೊರಟಿದೆ. ಇದು ನೆರವೇರಿದರೆ ಬೆಮೆಲ್​ನಲ್ಲಿ ಸರ್ಕಾರಕ್ಕಿರುವ ಪಾಲು ಶೇ. 28.03ಕ್ಕೆ ಇಳಿಕೆ ಆಗುತ್ತದೆ. ಹಾಗೆಯೇ, ಬೆಮೆಲ್ ಆಡಳಿತದ ಚುಕ್ಕಾಣಿಯೂ ಖಾಸಗಿಯವರ ಕೈಗೆ ಸೇರಲಿದೆ.

ಬೆಮೆಲ್ ಲ್ಯಾಂಡ್ ಅಸೆಟ್ಸ್ ಕಂಪನಿ ಷೇರುಗಳು ಪ್ರಪಾತಕ್ಕೆ

ಬೆಮೆಲ್​ನ ಮುಖ್ಯ ವ್ಯವಹಾರದಿಂದ ಪ್ರತ್ಯೇಕವಾಗಿ ಇತರ ವ್ಯವಹಾರಗಳನ್ನು ಬೆಮೆಲ್ ಲ್ಯಾಂಡ್ ಅಸೆಟ್ಸ್ ಕಂಪನಿಗೆ ಜೋಡಿಸಲಾಗಿದೆ. ಇದು 2023 ಏಪ್ರಿಲ್ 19ರಂದು ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಲಿಸ್ಟ್ ಆಗಿತ್ತು. ಬಿಎಸ್​ಇನಲ್ಲಿ 290.2 ಮತ್ತು ಎನ್​ಎಸ್​ಇನಲ್ಲಿ 287 ರೂ ಷೇರುಬೆಲೆಗೆ ಇದು ಲಿಸ್ಟ್ ಆಗಿತ್ತು. ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಈ ಸಂಸ್ಥೆಯ ಷೇರು ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಕೆಲ ಮಾರುಕಟ್ಟೆ ತಜ್ಞರು ಇದರ ಷೇರು ಬೆಲೆ 600 ರೂವರೆಗೂ ಏರಬಹುದು ಎಂದು ಅಂದಾಜಿಸಿದ್ದರು. ಇದೀಗ ಅದರ ಬೆಲೆ 200ರೂಗಿಂತಲೂ ಕಡಿಮೆಗೆ ಕುಸಿದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು