AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RERA Rule: ಮನೆ ಖರೀದಿಸುವವರಿಗೆ ಸಮಾಧಾನಕರ ಸುದ್ದಿ; ಬುಕಿಂಗ್ ರದ್ದುಗೊಳಿಸಿದರೆ ವಿಧಿಸುವ ಶುಲ್ಕದ ಹೊರೆ ತಗ್ಗಿಸಿದ ರೇರಾ

Home Booking: ಮನೆ ಮತ್ತು ನಿವೇಶನ ಖರೀದಿಸಲು ಬಿಲ್ಡರ್​ಗೆ ಮುಂಗಡ ಹಣ ಪಾವತಿಸಿದ್ದು, ಬುಕಿಂಗ್ ರದ್ದುಗೊಳಿಸಿದರೆ ಶೇ. 2ಕ್ಕಿಂತ ಹೆಚ್ಚು ಕ್ಯಾನ್ಸಲೇಶನ್ ಚಾರ್ಜ್ ಇರುವುದಿಲ್ಲ. ಶೇ. 10ರಷ್ಟಿದ್ದ ಕ್ಯಾನ್ಸಲೇಶನ್ ಚಾರ್ಜ್ ಪ್ರಮಾಣವನ್ನು ರೇರಾ ಸಂಸ್ಥೆ ಶೇ. 2ಕ್ಕೆ ಇಳಿಸಿದೆ. ಇದರಿಂದ ಗ್ರಾಹಕರ ಹೊರೆ ತಗ್ಗಲಿದೆ. 2022ರ ಡಿಸೆಂಬರ್​ನಲ್ಲಿ ಮಾಡಿದ್ದ ಕಾನೂನು ಬದಲಾವಣೆ ಪ್ರಕಾರ ಬುಕಿಂಗ್ ರದ್ದುಗೊಂಡರೆ ಗ್ರಾಹಕರು ಜಿಎಸ್​ಟಿ ಹಣದ ರೀಫಂಡ್ ಪಡೆಯಬಹುದು.

RERA Rule: ಮನೆ ಖರೀದಿಸುವವರಿಗೆ ಸಮಾಧಾನಕರ ಸುದ್ದಿ; ಬುಕಿಂಗ್ ರದ್ದುಗೊಳಿಸಿದರೆ ವಿಧಿಸುವ ಶುಲ್ಕದ ಹೊರೆ ತಗ್ಗಿಸಿದ ರೇರಾ
ಮನೆ ಖರೀದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 07, 2024 | 3:05 PM

Share

ನವದೆಹಲಿ, ಜನವರಿ 7: ಮನೆ, ನಿವೇಶನ ಖರೀದಿಸಲು ಮುಂದಾದಾಗ ಕಾರಣಾಂತರಗಳಿಂದ ಬುಕಿಂಗ್ ರದ್ದು ಮಾಡಬೇಕಾಗಬಹುದು. ಈ ಸಂದರ್ಭದಲ್ಲಿ ಬಿಲ್ಡರ್​ಗಳು ಕ್ಯಾನ್ಸಲೇಶನ್ ಚಾರ್ಜ್ (cancellation charges) ಎಂದು ಭಾರೀ ಮೊತ್ತದ ಶುಲ್ಕ ವಸೂಲಿ ಮಾಡುತ್ತಾರೆ. ಇದರಿಂದ ಗ್ರಾಹಕರಿಗೆ ಭಾರೀ ನಷ್ಟವಾಗುತ್ತದೆ. ಈ ಶುಲ್ಕದ ಹೊರೆ ತಗ್ಗಿಸಲು ರೇರಾ ಕ್ರಮ ಕೈಗೊಂಡಿದೆ. ರಿಯಲ್ ಎಸ್ಟೇಟ್ ನಿಯಮ ಪ್ರಾಧಿಕಾರ (RERA- Real Estate Regulatory Authority) ಸಂಸ್ಥೆ ಶೇ. 10ರಷ್ಟಿದ್ದ ಶುಲ್ಕ ಹಣವನ್ನು ಶೇ. 2ಕ್ಕೆ ಇಳಿಸಿ ಕಾನೂನು ರೂಪಿಸಿದೆ.

ಬ್ಯುಲ್ಡರ್​ರಿಂದ ಮನೆ ಅಥವಾ ನಿವೇಶನ ಖರೀದಿಸುವ ಮುನ್ನ ಗ್ರಾಹಕರು ಅಡ್ವಾನ್ಸ್ ಬುಕಿಂಗ್ ಮಾಡಿ ಮುಂಗಡ ಹಣ ಪಾವತಿಸಿರುತ್ತಾರೆ. ಜೊತೆಗೆ ಒಪ್ಪಂದವೂ ಆಗಿರುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಬುಕಿಂಗ್ ರದ್ದುಗೊಳಿಸಬೇಕಾಗಿ ಬರಬಹುದು. ಆಗ ಬಿಲ್ಡರ್​ಗಳು ಒಪ್ಪಂದದ ಪ್ರಕಾರವಾಗಿ ಆಸ್ತಿ ಮೌಲ್ಯದ ಶೇ. 10ರಷ್ಟು ಹಣವನ್ನು ಕ್ಯಾನ್ಸಲೇಶನ್ ಚಾರ್ಜ್ ಆಗಿ ವಿಧಿಸಬಹುದು. ಈಗ ರೇರಾ ಹೊಸ ನಿಯಮ ತಂದಿದ್ದು, ಕ್ಯಾನ್ಸಲೇಶನ್ ಚಾರ್ಜ್ ಆಗಿ ಶೇ. 2ಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುವಂತಿಲ್ಲ.

ಇದನ್ನೂ ಓದಿ: EV Factory: ವಿಯೆಟ್ನಾಂನ ವಿನ್​ಫಾಸ್ಟ್​ನಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಘಟಕ; 16 ಸಾವಿರ ಕೋಟಿ ರೂ ಹೂಡಿಕೆ

2022ರಲ್ಲೂ ಒಂದು ಮಹತ್ವದ ನಿಯಮ ಬದಲಾಣೆ ಮಾಡಲಾಗಿತ್ತು. ಗ್ರಾಹಕರು ಮನೆ ಖರೀದಿಗೆ ಮಾಡಿದ್ದ ಬುಕಿಂಗ್ ಮಾಡಿದ್ದಾಗ ಜಿಎಸ್​ಟಿ ಪಾವತಿಸಿರಬಹುದು. ಬುಕಿಂಗ್ ರದ್ದು ಮಾಡಿದಾಗ ಗ್ರಾಹಕರು ತಾವು ಪಾವತಿಸಿದ ಜಿಎಸ್​ಟಿ ಹಣವನ್ನು ಹಿಂಪಡೆಯಲು ಅವಕಾಶ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಬಿಲ್ಡರ್​ಗಳು ಜಿಎಸ್​ಟಿ ಹಣವನ್ನು ಮುರಿದುಕೊಳ್ಳುವಂತಿಲ್ಲ ಎಂದು ರೇರಾ ಕಾನೂನು ಮಾಡಿತ್ತು. ಖರೀದಿ ಒಪ್ಪಂದ ರದ್ದುಗೊಳಿಸಿ ಎರಡು ವರ್ಷದವರೆಗೂ ಯಾವುದೇ ಸಮಯದಲ್ಲೂ ಜಿಎಸ್​ಟಿ ಹಣವನ್ನು ರೀಫಂಡ್ ಪಡೆಯಲು ಗ್ರಾಹಕರಿಗೆ ಸಮಯಾವಕಾಶ ಇರುತ್ತದೆ.

ಇನ್ನೊಂದು ಗಮನಾರ್ಹ ರೇರಾ ನಿಯಮವೊಂದನ್ನು ಗ್ರಾಹಕರು ತಿಳಿದಿರಬೇಕು. ಮನೆ ಖರೀದಿಗೆಂದು ಬಿಲ್ಡರ್ ಜೊತೆ ಒಪ್ಪಂದ ಮಾಡಿಕೊಂಡು ಮುಂಗಡ ಕೊಟ್ಟಿರುವ ಸಂದರ್ಭದಲ್ಲಿ ನಿಗದಿತ ವೇಳೆಗೆ ಮನೆಯನ್ನು ಬಿಲ್ಡರ್ ನಿಮ್ಮ ಕೈಗೆ ಒಪ್ಪಿಸದಿದ್ದರೆ ಆಗ ನೀವು ಬುಕಿಂಗ್ ರದ್ದು ಮಾಡಿದಾಗ ಪೂರ್ಣ ಹಣವನ್ನು ಬಿಲ್ಡರ್ ನಿಮಗೆ ಹಿಂದಿರುಗಿಸಬೇಕು. ಯಾವುದೇ ಕ್ಯಾನ್ಸಲೇಶನ್ ಚಾರ್ಜ್ ವಿಧಿಸುವ ಅಧಿಕಾರ ಬಿಲ್ಡರ್​ಗೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ