ರಸ್ತೆ ಸಂಪರ್ಕದಲ್ಲಿ ಚೀನಾಗಿಂತ ಭಾರತ ಮುಂದು; ಉದ್ಯಮಿ ಆನಂದ್ ಮಹೀಂದ್ರ ಅಚ್ಚರಿ; ಇಲ್ಲಿದೆ ಟಾಪ್-9 ದೇಶಗಳ ಪಟ್ಟಿ
Anand Mahindra Reacts: ವಿಶ್ವದ ಅತಿದೊಡ್ಡ ರಸ್ತೆ ಜಾಲಗಳ ಪಟ್ಟಿಯಲ್ಲಿ ಚೀನಾಗಿಂತ ಮೇಲಿರುವ ಭಾರತ 2ನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ. ರಸ್ತೆ ಜಾಲದಲ್ಲಿ ಚೀನಾಗಿಂತ ಭಾರತ ಮುಂದಿರುವುದು ಕಂಡು ತನಗೆ ಸಖೇದಾಶ್ಚರ್ಯ ಆಗಿದೆ ಎಂದು ಉದ್ಯಮಿ ಆನಂದ್ ಮಹೀಂದ್ರ ಅಭಿಪ್ರಾಯಪಟ್ಟಿದ್ದಾರೆ. ಅತಿಶೀಘ್ರದಲ್ಲೇ ರಸ್ತೆ ಜಾಲದಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕುವಂತೆ ನಿತಿನ್ ಗಡ್ಕರಿ ಗುರಿ ಇಡಬಲ್ಲುರು ಎಂದೂ ಮಹೀಂದ್ರ ಹೇಳಿದ್ದಾರೆ.
ಬೆಂಗಳೂರು, ಜನವರಿ 7: ಭಾರತದ ರಸ್ತೆ ಸಂಪರ್ಕ ಜಾಲ ಚೀನಾಗಿಂತ ಮುಂದಿರುವ ವಿಚಾರದ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ (anand mahindra) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಗತ್ತಿನ ವಿವಿಧ ಸಂಗತಿಗಳಲ್ಲಿ ಅಗ್ರಜರ ಪಟ್ಟಿಗಳನ್ನು (rankings list) ಆಗಾಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸುವ ದಿ ವರ್ಲ್ಡ್ ರ್ಯಾಂಕಿಂಗ್ನ (The world ranking) ಇತ್ತೀಚಿನ ಒಂದು ಪೋಸ್ಟ್ಗೆ ಆನಂದ್ ಮಹೀಂದ್ರ ಪ್ರತಿಕ್ರಿಯಿಸುತ್ತಾ, ಭಾರತದ ರಸ್ತೆ ಸಂಪರ್ಕ ಜಾಲದ ಬಗ್ಗೆ ಅಭಿಮಾನ ಪಟ್ಟಿದ್ದಾರೆ. ದಿ ವರ್ಲ್ಡ್ ರ್ಯಾಂಕಿಂಗ್ನ ಎಕ್ಸ್ ಪೋಸ್ಟ್ನಲ್ಲಿ ರಸ್ತೆ ಸಂಪರ್ಕ ಜಾಲದಲ್ಲಿ ವಿಶ್ವದ 9 ಅಗ್ರ ದೇಶಗಳ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ ಚೀನಾಗಿಂತ ಒಂದು ಸ್ಥಾನ ಮೇಲಿರುವ ಭಾರತ ಎರಡನೇ ಸ್ಥಾನದಲ್ಲಿದೆ.
‘ನಾವು ಚೀನಾಗಿಂತ ಮುಂದಿರುವ ವಿಷಯ ತಿಳಿದು ಸಖೇದಾಶ್ಚರ್ಯ ಆಗಿದೆ. ಚೀನಾದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ವಸತಿ ಪ್ರದೇಶಗಳು ಇಲ್ಲದಿರುವುದು ಇದಕ್ಕೆ ಕಾರಣ ಇರಬಹುದು. ಆದರೆ, ಹೆಚ್ಚಿನ ಕುತೂಹಲದ ಸಂಗತಿ ಎಂದರೆ ನಾವು ರಸ್ತೆ ಸಂಪರ್ಕ ಜಾಲದಲ್ಲಿ ಅಮೆರಿಕಕ್ಕೆ ಬಹಳ ಅಗುದಿ ಸಮೀಪ ಇದ್ದೇವೆ. ಅಮೆರಿಕವನ್ನೂ ನಾವು ಬಹಳ ಬೇಗ ಹಿಂದಿಕ್ಕುವಂತೆ ನಿತಿನ್ ಗಡ್ಕರಿ ಗುರಿ ಇಡಬಲ್ಲುರು’ ಎಂದು ಆನಂದ್ ಮಹೀಂದ್ರ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಇತ್ತೀಚೆಗೆ (ಜ. 4ರಂದು) ತಿಳಿಸಿದ್ದಾರೆ.
ಇದನ್ನೂ ಓದಿ: Forex: ಭಾರತದ ಫಾರೆಕ್ಸ್ ರಿಸರ್ವ್ಸ್ 623 ಬಿಲಿಯನ್ ಡಾಲರ್ಗೆ ಹೆಚ್ಚಳ; ಸತತ 7ನೇ ವಾರ ಏರಿಕೆ; 22 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ
ವರ್ಲ್ಡ್ ರ್ಯಾಂಕಿಂಗ್ ಮಾಹಿತಿ ಪ್ರಕಾರ ವಿಶ್ವದ ಅತಿದೊಡ್ಡ ರಸ್ತೆ ಜಾಲ ಇರುವ ದೇಶಗಳು
- ಅಮೆರಿಕ: 68.32 ಲಕ್ಷ ಕಿಮೀ
- ಭಾರತ: 67 ಲಕ್ಷ ಕಿಮೀ
- ಚೀನಾ: 52 ಲಕ್ಷ ಕಿಮೀ
- ಬ್ರಜಿಲ್: 20 ಲಕ್ಷ ಕಿಮೀ
- ರಷ್ಯಾ: 15.39 ಲಕ್ಷ ಕಿಮೀ
- ಜಪಾನ್: 12.19 ಲಕ್ಷ ಕಿಮೀ
- ಫ್ರಾನ್ಸ್: 10.53 ಲಕ್ಷ ಕಿಮೀ
- ಕೆನಡಾ: 10.42 ಲಕ್ಷ ಕಿಮೀ
- ಆಸ್ಟ್ರೇಲಿಯಾ: 8.74 ಲಕ್ಷ ಕಿಮೀ
ಭಾರತ ಮತ್ತು ಅಮೆರಿಕ ನಡುವೆ ರಸ್ತೆ ಜಾಲದ ಅಂತರ 2 ಲಕ್ಷ ಕಿಮೀಗಿಂತಲೂ ಕಡಿಮೆ ಇದೆ. ಈಗ ಸರ್ಕಾರ ರಸ್ತೆ ಸಂಪರ್ಕ ಸೇರಿದಂತೆ ಇನ್ಫ್ರಾಸ್ಟ್ರಕ್ಚರ್ಗೆ ಬಹಳ ಒತ್ತು ಕೊಡುತ್ತಿದೆ. ಆನಂದ್ ಮಹೀಂದ್ರ ನಿರೀಕ್ಷೆಯಂತೆ ಮುಂದಿನ ದಿನಗಳಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಿದರೆ ಅಚ್ಚರಿ ಇಲ್ಲ.
I was happily surprised to see that we are ahead of China. That must be because the western half of China is sparsely inhabited. More interesting is that we’re within striking distance of the U.S.A. I’m sure @nitin_gadkari ji can set a goal to overtake the U.S not too long from… https://t.co/nxUgYDk0Gy
— anand mahindra (@anandmahindra) January 4, 2024
ಇದನ್ನೂ ಓದಿ: ಭಾರತದಲ್ಲಿ ವಿಡಿಯೋ ಮಾರುಕಟ್ಟೆ ಅಗಾಧ, ವಿಶ್ವದಲ್ಲೇ 3ನೇ ಸ್ಥಾನ: ವಿಡಿಯೋಗಳಿಂದಲೇ ಸಿಗೋ ಆದಾಯ ಎಷ್ಟು ಗೊತ್ತೇ?
ಚೀನಾ, ಕೆನಡಾ, ಬ್ರೆಜಿಲ್ ದೇಶಗಳು ಭಾರತಕ್ಕಿಂತ ಬಹಳ ದೊಡ್ಡವಾದರೂ ರಸ್ತೆ ಸಂಪರ್ಕ ಜಾಲದಲ್ಲಿ ಕೆಳಗೆ ಇರಲು ಕಾರಣ ಇದೆ. ಚೀನಾದ ಹೆಚ್ಚಿನ ನಗರಗಳು ಪೂರ್ವ ಭಾಗದಲ್ಲೇ ಸಂಯೋಜಿತಗೊಂಡಿವೆ. ಪಶ್ಚಿಮ ಚೀನಾದ ಬಹುಭಾಗವು ನಿರ್ಜನ ಪ್ರದೇಶಗಳಾಗಿವೆ. ಇನ್ನು, ಕೆನಡಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಅವುಗಳ ಗಾತ್ರಕ್ಕೆ ಹೋಲಿಸಿದರೆ ಜನಸಂಖ್ಯೆ ಬಹಳ ಕಡಿಮೆ. ಇದೂ ಕೂಡ ರಸ್ತೆ ಸಂಪರ್ಕ ಜಾಲ ಕಡಿಮೆ ಇರಲು ಕಾರಣ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ