ಭಾರತದಲ್ಲಿ ವಿಡಿಯೋ ಮಾರುಕಟ್ಟೆ ಅಗಾಧ, ವಿಶ್ವದಲ್ಲೇ 3ನೇ ಸ್ಥಾನ: ವಿಡಿಯೋಗಳಿಂದಲೇ ಸಿಗೋ ಆದಾಯ ಎಷ್ಟು ಗೊತ್ತೇ?

ಏಷ್ಯಾ ಪೆಸಿಫಿಕ್ ವಿಡಿಯೋ ಉದ್ಯಮವು 2023ರಲ್ಲಿ ಶೇ 5.5ರಷ್ಟು ಬೆಳವಣಿಗೆ ಹೊಂದಿದ್ದು, ಒಟ್ಟು 145 ಶತಕೋಟಿ ಆದಾಯ ಗಳಿಸಿತ್ತು. ಆನ್​ಲೈನ್ ವಿಡಿಯೋ ಮಾರಾಟವು ಶೇ 13ರ ಬೆಳವಣಿಗೆ ಕಂಡಿದ್ದು, ಟಿವಿ ವಿಡಿಯೋ ಆದಾಯದಲ್ಲಿ ಶೇ 1ರ ಬೆಳವಣಿಗೆ ದಾಖಲಾಗಿದೆ ಎಂದು ಎಂಪಿಎ ತಿಳಿಸಿದೆ.

ಭಾರತದಲ್ಲಿ ವಿಡಿಯೋ ಮಾರುಕಟ್ಟೆ ಅಗಾಧ, ವಿಶ್ವದಲ್ಲೇ 3ನೇ ಸ್ಥಾನ: ವಿಡಿಯೋಗಳಿಂದಲೇ ಸಿಗೋ ಆದಾಯ ಎಷ್ಟು ಗೊತ್ತೇ?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Jan 06, 2024 | 5:17 PM

ನವದೆಹಲಿ, ಜನವರಿ 6: ಭಾರತವು (India) ವಿಶ್ವದಲ್ಲೇ ಮೂರನೇ ಅತಿದೊಡ್ಡ ವಿಡಿಯೋ ಮಾರುಕಟ್ಟೆ ಹೊಂದಿರುವ ದೇಶ ಎಂಬುದು ಮೀಡಿಯಾ ಪಾರ್ಟನರ್ಸ್ ಏಷ್ಯಾ (MPA) ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ. ದೇಶದಲ್ಲಿ ವಿಡಿಯೋ ಮಾರುಕಟ್ಟೆಯಿಂದಲೇ ಬರೋಬ್ಬರಿ 13 ಶತಕೋಟಿ ಡಾಲರ್ ಆದಾಯ ಸಂಗ್ರಹವಾಗುತ್ತಿದೆ ಎಂದೂ ವರದಿ ತಿಳಿಸಿದೆ. ಏಷ್ಯಾ ಪೆಸಿಫಿಕ್ ವಿಡಿಯೋ ಆ್ಯಂಡ್ ಬ್ರಾಡ್​​ಬ್ಯಾಂಡ್ ರಿಪೋರ್ಟ್ 2024 ಪ್ರಕಾರ, ಜಗತ್ತಿನ ಎರಡು ಅತಿದೊಡ್ಡ ವಿಡಿಯೋ ಮಾರುಕಟ್ಟೆಗಳಿರುವ ದೇಶ ಚೀನಾ ಮತ್ತು ಜಪಾನ್ ಆಗಿವೆ. ಈ ಎರಡೂ ದೇಶಗಳಲ್ಲಿ ವಿಡಿಯೋಗಳಿಂದ ಸಂಗ್ರಹವಾಗುವ ಆದಾಯ ಕ್ರಮವಾಗಿ 64 ಶತಕೋಟಿ ಡಾಲರ್ ಮತ್ತು 32 ಶತಕೋಟಿ ಡಾಲರ್. ನಂತರದ ಸ್ಥಾನದಲ್ಲಿ ಭಾರತ ಇದೆ.

ಕೊರಿಯಾವು 12 ಶತಕೋಟಿ ಡಾಲರ್ ಆದಾಯದೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 9.5 ಶತಕೋಟಿ ಡಾಲರ್​​​ ಆದಾಯದೊಂದಿಗೆ ಐದನೇ ಸ್ಥಾನದಲ್ಲಿದೆ. ತೈವಾನ್ ಮತ್ತು ಇಂಡೋನೇಷ್ಯಾ ತಲಾ 3 ಶತಕೋಟಿ ಡಾಲರ್ ಆದಾಯ ಹೊಂದಿವೆ.

ಏಷ್ಯಾ ಪೆಸಿಫಿಕ್ ವಿಡಿಯೋ ಉದ್ಯಮವು 2023ರಲ್ಲಿ ಶೇ 5.5ರಷ್ಟು ಬೆಳವಣಿಗೆ ಹೊಂದಿದ್ದು, ಒಟ್ಟು 145 ಶತಕೋಟಿ ಆದಾಯ ಗಳಿಸಿತ್ತು. ಆನ್​ಲೈನ್ ವಿಡಿಯೋ ಮಾರಾಟವು ಶೇ 13ರ ಬೆಳವಣಿಗೆ ಕಂಡಿದ್ದು, ಟಿವಿ ವಿಡಿಯೋ ಆದಾಯದಲ್ಲಿ ಶೇ 1ರ ಬೆಳವಣಿಗೆ ದಾಖಲಾಗಿದೆ ಎಂದು ಎಂಪಿಎ ತಿಳಿಸಿದೆ.

14 ಮಾರುಕಟ್ಟೆಗಳ ಫ್ರೀ ಟಿವಿ, ಪೇ-ಟಿವಿ, ಎಸ್​​ವಿಒಡಿ, ಪ್ರೀಮಿಯಂ ಎವೊವಿಡಿ, ಯುಜಿಸಿ / ಸೋಷಿಯಲ್ ವಿಡಿಯೋ ಬಳಕೆದಾರರು, ಸಬ್​ಸ್ಕ್ರೈಬ್ ಮಾಡಿರುವವರು, ಗ್ರಾಹಕರು ಮತ್ತು ಜಾಹೀರಾತು ವೆಚ್ಚವನ್ನು ಪರಿಗಣಿಸಿ ಲೆಕ್ಕಾಚಾರ ಹಾಕಲಾಗಿದೆ. ಇದರಲ್ಲಿ ಏಷ್ಯಾ ಪೆಸಿಫಿಕ್ ವಿಡಿಯೋ ಉದ್ಯಮವು 2023 ರಿಂದ 2028ರ ಅವಧಿಯಲ್ಲಿ ಶೇ 2.6ರ ಒಟ್ಟಾರೆ ಬೆಳವಣಿಗೆ ಕಾಣಲಿದ್ದು, 2028ರ ವೇಳೆಗೆ 165 ಶತಕೋಟಿ ಡಾಲರ್ ತಲುಪಲಿದೆ ಎಂದು ವರದಿ ತಿಳಿಸಿದೆ.

ಏಷ್ಯಾ ಪೆಸಿಫಿಕ್ ಆನ್​ಲೈನ್ ವಿಡಿಯೋ ಉದ್ಯಮವು ಶೇ 6.7ರ ಬೆಳವಣಿಗೆ ದಾಖಲಿಸಿ 78.5 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Economy: ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷವೂ ಇತರ ದೇಶಗಳಿಗಿಂತ ಮುಂದು: 2024ರಲ್ಲಿ ಶೇ. 6.2ರಷ್ಟು ಬೆಳೆಯುವ ಸಾಧ್ಯತೆ ವಿಶ್ವಸಂಸ್ಥೆ ಅಂದಾಜು

2028ರ ವೇಳೆಗೆ ವಿಡಿಯೋ ಉದ್ಯಮಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಬಲ್ಲ ದೇಶಗಳಾಗಿ ಚೀನಾ, ಜಪಾನ್, ಭಾರತ, ಕೊರಿಯಾ, ಆಸ್ಟ್ರೇಲಿಯಾ ಹಾಗೂ ಇಂಡೋನೇಷ್ಯಾ ಹೊರಹೊಮ್ಮಲಿವೆ. ಈ ದೇಶಗಳು ಏಷ್ಯಾ ಪೆಸಿಫಿಕ್​ನ ಒಟ್ಟಾರೆ ವಿಡಿಯೋ ಉದ್ಯಮಕ್ಕೆ ಶೇ 90ರಷ್ಟು ಕೊಡುಗೆ ನೀಡಲಿವೆ ಎಂದು ಎಂಪಿಎ ವರದಿ ಉಲ್ಲೇಖಿಸಿದೆ.

ವರದಿಯ ಪ್ರಕಾರ ಅಮೆಜಾನ್ ಪ್ರೈಮ್ ವಿಡಿಯೋ, ಬೈಟ್​ಡ್ಯಾನ್ಸ್ (ಟಿಕ್​ಟಾಕ್ ಸೇರಿದಂತೆ), ಡಿಸ್ನಿ, ಗೂಗಲ್ ಒಡೆತನದ ಯೂಟ್ಯೂಬ್, ಐಕ್ಯುಐವೈಐ, ಮೆಟಾ (ವಿಡಿಯೋ), ನೆಟ್​ಫ್ಲಿಕ್ಸ್ ಹಾಗೂ ಟೆನ್ಸೆಂಟ್ ಕಂಪನಿಗಳು ವಿಡಿಯೋ ಆದಾಯದಲ್ಲಿ ಶೇ 65ರ ಪಾಲು ಹೊಂದಿವೆ. ಜಿಯೋ ಸಿನಿಮಾ, ಝೀ-ಸೋನಿ ಕೂಡ ವಿಡಿಯೋ ಉದ್ಯಮಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ