Paytm Payments Bank: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್​ಬಿಐ ಸೂಚನೆ

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆಯನ್ನು ನೀಡಿದೆ. ಆ ಬಗ್ಗೆ ವಿವರ ಇಲ್ಲಿದೆ.

Paytm Payments Bank: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್​ಬಿಐ ಸೂಚನೆ
ಸಾಂದರ್ಭಿಕ ಚಿತ್ರ
Edited By:

Updated on: Mar 11, 2022 | 6:33 PM

ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವುದನ್ನು ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (Reserve Bank Of India) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನಿರ್ದೇಶಿಸಿದ್ದು, “ಬ್ಯಾಂಕ್‌ನಲ್ಲಿ ಗಮನಿಸಲಾದ ವಾಸ್ತವ ಮೇಲ್ವಿಚಾರಣಾ ಆತಂಕಗಳನ್ನು” ಉಲ್ಲೇಖಿಸಿದೆ. ತನ್ನ ಐಟಿ (ಮಾಹಿತಿ ತಂತ್ರಜ್ಞಾನ) ವ್ಯವಸ್ಥೆಯ ಸಮಗ್ರ ಲೆಕ್ಕಪರಿಶೋಧನೆ ನಡೆಸಲು ಲೆಕ್ಕಪರಿಶೋಧನಾ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವಂತೆ, “ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 35A ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆರ್‌ಬಿಐ ಇಂದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 35A ಅಡಿಯಲ್ಲಿ ತನ್ನ ಅಧಿಕಾರಗಳನ್ನು ಬಳಸಿ ಈ ರೀತಿ ನಿರ್ದೇಶಿಸಿದೆ. ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಗ್ರಾಹಕರ ಸೇರ್ಪಡೆಯನ್ನು ನಿಲ್ಲಿಸಬೇಕು,” ಎಂದು ಹೇಳಲಾಗಿದೆ.

“ತನ್ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸಮಗ್ರ ಸಿಸ್ಟಮ್ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ ಹೊಸ ಗ್ರಾಹಕರ ಸೇರ್ಪಡೆಯು ವರದಿಯನ್ನು ಐಟಿ ಲೆಕ್ಕಪರಿಶೋಧಕರು ಪರಿಶೀಲಿಸಿದ ನಂತರ ಆರ್‌ಬಿಐ ನೀಡುವ ನಿರ್ದಿಷ್ಟ ಅನುಮತಿಗೆ ಒಳಪಟ್ಟಿರುತ್ತದೆ. ಈ ಕ್ರಮವು ಬ್ಯಾಂಕ್​ನಲ್ಲಿ ಗಮನಿಸಲಾದ ಕೆಲವು ವಾಸ್ತವ ಮೇಲ್ವಿಚಾರಣಾ ಆತಂಕಗಳನ್ನು ಆಧರಿಸಿದೆ,” ಎಂದು ಪತ್ರಿಕಾ ಟಿಪ್ಪಣಿ ಸೇರಿಸಲಾಗಿದೆ.

ಇದನ್ನೂ ಓದಿ: UPI For Feature Phones: ಫೀಚರ್​ ಫೋನ್​ ಯುಪಿಐಗೆ ಚಾಲನೆ ನೀಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್