AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Life Insurance Corporation: ಜೀವ ವಿಮಾ ನಿಗಮದ ಡಿಸೆಂಬರ್​ ತ್ರೈಮಾಸಿಕದ ಲಾಭ 235 ಕೋಟಿ ರೂಪಾಯಿ

ಭಾರತೀಯ ಜೀವ ವಿಮಾ ನಿಗಮದ ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಬಂದಿದ್ದು 235 ಕೋಟಿ ರೂಪಾಯಿ ಲಾಭ ಗಳಿಸಿದೆ.

Life Insurance Corporation: ಜೀವ ವಿಮಾ ನಿಗಮದ ಡಿಸೆಂಬರ್​ ತ್ರೈಮಾಸಿಕದ ಲಾಭ 235 ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 11, 2022 | 2:41 PM

ಸರ್ಕಾರಿ ಸ್ವಾಮ್ಯದ ಲೈಫ್​ ಇನ್ಷೂರೆನ್ಸ್ ಕಾರ್ಪೊರೇಷನ್ (Life Insurance Corporation) ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕಕ್ಕೆ ತೆರಿಗೆ ನಂತರದ ಲಾಭವು ರೂ. 234.91 ಕೋಟಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 0.91 ಕೋಟಿ ಇತ್ತು. ಆ ಮಟ್ಟದಿಂದ ಇಲ್ಲಿಗೆ ಹೆಚ್ಚಾಗಿದೆ ಎಂದು ಎಲ್​ಐಸಿ ವೆಬ್‌ಸೈಟ್ ತಿಳಿಸಿದೆ. ಡಿಸೆಂಬರ್‌ಗೆ ಕೊನೆಗೊಂಡ ಒಂಬತ್ತು ತಿಂಗಳ ಲಾಭವು 1,642.78 ಕೋಟಿ ರೂಪಾಯಿಗೆ ಏರಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ 7.08 ಕೋಟಿ ರೂಪಾಯಿ ಇತ್ತು. ಎಲ್​ಐಸಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಹೂಡಿಕೆಗಳ ಮಾರಾಟದಿಂದ 29,102 ಕೋಟಿ ರೂಪಾಯಿ ಮೌಲ್ಯದ ಲಾಭವನ್ನು ಕಾಯ್ದಿರಿಸಿದೆ. ಎಲ್​ಐಸಿಯು ಫೆಬ್ರವರಿ 13ರಂದು ಐಪಿಒಗಾಗಿ ತನ್ನ ಕರಡು ಪತ್ರಗಳನ್ನು ಸಲ್ಲಿಸಿದೆ. ಐಪಿಒ ಮೂಲಕ ಜೀವ ವಿಮಾ ನಿಗಮದಲ್ಲಿ ಶೇ 5ರಷ್ಟು ಪಾಲನ್ನು ಮಾರಾಟ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈಕ್ವಿಟಿ ಸ್ವತ್ತುಗಳು ಮಾರಾಟದಿಂದ ಲಾಭ ಬಂದಿರುವುದೇ ಹೆಚ್ಚಾಗಿ, ಮಾರ್ಚ್ 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಎಲ್​ಐಸಿ 46,187 ಕೋಟಿ ರೂಪಾಯಿ ದಾಖಲಿಸಿದೆ. ಅದಾಗಲೇ ದಾಖಲೆಯ ಶೇ 63ರಷ್ಟು ಲಾಭ ಮಾಡಿತ್ತು.

ಅದಕ್ಕೂ ಮೊದಲು, ಜನವರಿ 25ರಂದು ಎಲ್​ಐಸಿಯು 2021-22ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 1,437 ಕೋಟಿ ರೂಪಾಯಿಗಳ ತೆರಿಗೆಯ ನಂತರದ ಲಾಭವನ್ನು ವರದಿ ಮಾಡಿತ್ತು. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 6.14 ಕೋಟಿ ರೂಪಾಯಿಗಳಷ್ಟು ದಾಖಲಿಸಿತ್ತು. ಅದರ ಹೊಸ ವ್ಯಾಪಾರ ಪ್ರೀಮಿಯಂ ಬೆಳವಣಿಗೆ ದರವು H1FY22ನಲ್ಲಿ ಶೇ 554.1ರಷ್ಟು ಇದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 394.76ರಷ್ಟಿತ್ತು, ಎಂದು LIC ಹೇಳಿದೆ. 2021ರ ಏಪ್ರಿಲ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಅದರ ಒಟ್ಟಾರೆ ನಿವ್ವಳ ಪ್ರೀಮಿಯಂಗಳು 1,679 ಕೋಟಿ ರೂಪಾಯಿ ಜಾಸ್ತಿಯಾಗಿ, 1.86 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ 1.84 ಲಕ್ಷ ಕೋಟಿ ರೂಪಾಯಿ ಇತ್ತು.

ರಷ್ಯಾ-ಉಕ್ರೇನ್ ಮಧ್ಯೆ ಯುದ್ಧದ ಕಾರಣದಿಂದ ಸರ್ಕಾರವು ಸಮಯ ಮರುಪರಿಶೀಲಿಸಲು ಸಭೆಯನ್ನು ನಡೆಸುವ ಸಾಧ್ಯತೆ ಇರುವುದರಿಂದ ಎಲ್​ಐಸಿ ಐಪಿಒ ಅನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಬಹುದು ಎಂದು ಮೂಲಗಳು ಮಾರ್ಚ್ 1 ರಂದು ಸಿಎನ್​ಬಿಸಿ ಟಿವಿ18ಗೆ ತಿಳಿಸಿವೆ. ಎಲ್ಐಸಿ ಲಿಸ್ಟಿಂಗ್​ ಸಂಭವನೀಯ ಮರುಮೌಲ್ಯಮಾಪನಕ್ಕಾಗಿ “ಈ ವಾರ” ಸಭೆ ನಡೆಸಲಾಗುವುದು ಎಂದು ಬೆಳವಣಿಗೆ ಬಗ್ಗೆ ಮಾಹಿತಿ ಇರುವ, ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯದ ಬಗ್ಗೆ “ಸರ್ಕಾರದ ನಿಲುವನ್ನು” ಹೇಳಿದ್ದಾರೆ. ಹಿಂದೂ ಬಿಜಿನೆಸ್​ ಲೈನ್‌ಗೆ ಇತ್ತೀಚಿನ ಸಂದರ್ಶನದಲ್ಲಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಜಾಗತಿಕ ಪರಿಸ್ಥಿತಿಯ ಕಾರಣಕ್ಕೆ ಐಪಿಒ ಸಮಯವನ್ನು ಮರುಪರಿಶೀಲಿಸುವಂತೆ ಆಗಬಹುದು ಎಂದಿದ್ದಾರೆ. “ಸದ್ಯಕ್ಕೆ, ನಾನು ಅದರೊಂದಿಗೆ ಮುಂದುವರಿಯಲು ಬಯಸುತ್ತೇನೆ. ಏಕೆಂದರೆ ನಾವು ಅದನ್ನು ಸಂಪೂರ್ಣವಾಗಿ ಭಾರತೀಯ ಸನ್ನಿವೇಶ ಆಧಾರದ ಮೇಲೆ ಸ್ವಲ್ಪ ಸಮಯದವರೆಗೆ ಯೋಜಿಸಿದ್ದೇವೆ,” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. “ಮತ್ತೊಮ್ಮೆ ಜಾಗತಿಕ ಸನ್ನಿವೇಶವನ್ನು ಗಮನಿಸಬೇಕು ಎಂಬಂಥ ಸ್ಥಿತಿ ಏರ್ಪಟ್ಟಲ್ಲಿ ಹಾಗೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ,” ಎಂದಿದ್ದಾರೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಬಿಡುಗಡೆ ದಿನಾಂಕ ಮರುನಿಗದಿ ಸಾಧ್ಯತೆ: ನಿರ್ಮಲಾ ಸೀತಾರಾಮನ್ ಸುಳಿವು