
ಉಡುಪಿ, ಜನವರಿ 21: ಸಣ್ಣ ಪಟ್ಟಣಗಳಲ್ಲಿ ಓದಿದವರು ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿರುತ್ತಾರೆ. ಅವರ ಮನೆಯವರೂ ಕೂಡ ತನ್ನ ಮಗ ಅಥವಾ ಮಗಳು ಬೆಂಗಳೂರಿನಂತಹ ನಗರಗಳಲ್ಲಿ ದೊಡ್ಡ ಬ್ಯುಲ್ಡಿಂಗ್ಗಳಲ್ಲಿ ಕೆಲಸಕ್ಕೆ ಹೋಗಲಿ ಎಂದು ಬಯಸುತ್ತಾರೆ. ಸಣ್ಣ ಪಟ್ಟಣಗಳಲ್ಲಿ ಒಳ್ಳೆಯ ಸಂಬಳ ಕೊಟ್ಟರೂ ಜನರು ಕೆಲಸಕ್ಕೆ ಹೋಗಲು ಹಿಂಜರಿಯುತ್ತಾರೆ. ರೋಬೋಸಾಫ್ಟ್ (Robosoft) ಎನ್ನುವ ಐಟಿ ಸರ್ವಿಸ್ ಕಂಪನಿಯ ಸಂಸ್ಥಾಪಕ ರೋಹಿತ್ ಭಟ್ (Rohith Bhat) ಅವರು ತಮ್ಮ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ವಸಂತ್ ಶೆಟ್ಟಿ ಅವರ ‘ಮುಂದೆ ಬನ್ನಿ’ ಪೋಡ್ಕ್ಯಾಸ್ಟ್ನಲ್ಲಿ ಮಾತನಾಡುತ್ತಿದ್ದ ರೋಹಿತ್ ಭಟ್ ಅವರು, ಉದ್ಯೋಗಿಗಳನ್ನು ತಮ್ಮ ಕಂಪನಿಯ ಕೆಲಸಕ್ಕೆ ಸೆಳೆಯಲು ಮಾಡಿದ ತಂತ್ರಗಳನ್ನು ವಿವರಿಸಿದ್ದಾರೆ.
ರೋಬೋಸಾಫ್ಟ್ ಕಂಪನಿ ಈಗ ಉಡುಪಿಯ ಹೆದ್ದಾರಿಯಲ್ಲೇ ಭವ್ಯವಾದ ಕಟ್ಟಡ ಹೊಂದಿದೆ. ಆರಂಭದಲ್ಲಿ ಸಣ್ಣ ಬ್ಯುಲ್ಡಿಂಗ್ನಲ್ಲಿ ಕಚೇರಿ ಹೊಂದಿತ್ತು. ಕಂಪನಿಯಲ್ಲಿ ಉತ್ತಮ ಸಂಬಳ ಕೊಟ್ಟರೂ ಪ್ರತಿಭಾನ್ವಿತರೆನಿಸಿದ ಉದ್ಯೋಗಿಗಳು ಕೆಲಸ ಬಿಟ್ಟು ಹೋಗುತ್ತಿದ್ದರಂತೆ. ಅವರನ್ನು ರಿಟೆನ್ಷನ್ ಮಾಡುವುದು ಬಹಳ ಕಷ್ಟವಾಗಿತ್ತಂತೆ.
‘ಒಂದು ಹುಡುಗಿ ತಾನು ಕೆಲಸಕ್ಕೆ ಬರುವುದಿಲ್ಲ ಎಂದು ಒಂದು ದಿನ ಹೇಳಿತು. ಯಾಕೆ ಅಂತ ಕೇಳಿದೆ. ಮನೆಯವರಿಗೆ ಈ ಕೆಲಸದ ಸ್ಥಳ ಇಷ್ಟವಾಗಿಲ್ಲ. ಗ್ಲಾಸ್ ಬ್ಯುಲ್ಡಿಂಗ್ ಇಲ್ಲ. ಅಲ್ಲಿ ಮಾಡೋದು ಬೇಡ ಅಂತಾರೆ ಅಂತ ಆ ಹುಡುಗಿ ಹೇಳಿತು’ ಎಂದು ರೋಹಿತ್ ಭಟ್ ಹೇಳುತ್ತಾರೆ.
ಬಹಳ ಜನರು ಇದೇ ಕಾರಣಕ್ಕೆ ಕೆಲಸ ಬಿಟ್ಟು ಹೋಗುತ್ತಿದ್ದರಂತೆ. ರೋಹಿತ್ ಭಟ್ ಆಗಲೇ ಒಂದು ನಿರ್ಧಾರಕ್ಕೆ ಬಂದರಂತೆ. ಉಡುಪಿಯಲ್ಲಿ ಎದ್ದು ಕಾಣುವ ರೀತಿಯ ಬ್ಯುಲ್ಡಿಂಗ್ ಕಟ್ಟಲು ನಿರ್ಧರಿಸುತ್ತಾರೆ. ಹೆದ್ದಾರಿಯಲ್ಲೇ ಆಗಬೇಕು, ಒರೇಕಲ್ ರೀತಿಯ ಗ್ಲಾಸ್ ಬ್ಯುಲ್ಡಿಂಗೇ ಆಗಬೇಕು ಎಂದು ಹೇಳಿ ಪಕ್ಕಾ ಎಂಎನ್ಸಿ ಐಟಿ ಕಂಪನಿಯ ಬ್ಯುಲ್ಡಿಂಗ್ ರೀತಿಯದ್ದೇ ಕಟ್ಟಡ ಕಟ್ಟಲಾಯಿತು.
ರೋಹಿತ್ ಭಟ್ ತಮ್ಮ ಕಂಪನಿಯ ಬ್ರ್ಯಾಂಡ್ ಬೆಳೆಸಲು ಬೇರೆ ರೀತಿಯ ಪ್ರಯೋಗಗಳನ್ನು ಮಾಡಿದರು. ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬೇರೆ ದೇಶಗಳಿಗೆ ಕೆಲಸದ ಮೇಲೆ ಹೋದಾಗ ಪತ್ರಿಕೆಗಳಲ್ಲಿ ಶುಭ ಹಾರೈಕೆಯ ಮೆಸೇಜ್ಗಳನ್ನು ಹಾಕಿಸುವುದು ಇತ್ಯಾದಿ ಮಾಡಿದರು. ಆಗ ಜನರಿಗೆ ರೋಬೋಸಾಫ್ಟ್ನಲ್ಲಿ ಕೆಲಸ ಮಾಡಿದರೆ ವಿದೇಶಕ್ಕೆ ಹೋಗಬಹುದು ಎನ್ನುವ ಇಮೇಜ್ ಮೂಡುತ್ತಿತ್ತು.
ಗ್ಲಾಸ್ ಬ್ಯುಲ್ಡಿಂಗ್ ಕಟ್ಟಿದ್ದು ರೋಬೋಸಾಫ್ಟ್ ಕಂಪನಿಗೆ ಹಲವು ರೀತಿಯ ಪ್ರಯೋಜನಗಳಾಗಿವೆ. ಉದ್ಯೋಗಿಗಳನ್ನು ಸೆಳಯಲು ಸಾಧ್ಯವಾಗಿದೆ. ಕ್ಲೈಂಟ್ಗಳನ್ನು ಆಕರ್ಷಿಸಲು ಸಾಧ್ಯವಾಗಿದೆ. ವಸಂತ್ ಶೆಟ್ಟಿ ಅವರ ಪೋಡ್ಕ್ಯಾಸ್ಟ್ನಲ್ಲಿ ಇಂಥ ಕೆಲ ವಿಚಾರಗಳನ್ನು ರೋಬೋಸಾಫ್ಟ್ನ ರೋಹಿತ್ ಭಟ್ ಹಂಚಿಕೊಂಡಿದ್ದಾರೆ. ಈ ಸಣ್ಣ ತುಣುಕಿನ ವಿಡಿಯೋ ಲಿಂಕ್ ಈ ಕೆಳಕಂಡಂತಿದೆ.
When asked about the retention problem for a company like Robosoft building from Udupi, @rohithbhat shared an interesting insight.
Retention was definitely a challenge. Many people working there, even with fairly decent salaries, felt they needed to work from Bengaluru. The pull… pic.twitter.com/0QV5pjLyka
— Vasant Shetty | Building Mundhe Banni (@vasantshetty81) January 20, 2026
ಪೋಡ್ಕ್ಯಾಸ್ಟ್ನ ಪೂರ್ಣ ವಿಡಿಯೋ ಇಲ್ಲಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ