Bloodbath In Stock Market: ಉಕ್ರೇನ್ ಮೇಲೆ ರಷ್ಯಾ ದಾಳಿ; ಸೆನ್ಸೆಕ್ಸ್ 1800 ಪಾಯಿಂಟ್ಸ್, ನಿಫ್ಟಿ 500 ಪಾಯಿಂಟ್ಸ್ ಕುಸಿತ

| Updated By: Srinivas Mata

Updated on: Feb 24, 2022 | 10:42 AM

ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಮಟ್ಟದಲ್ಲಿ ಕುಸಿತ ಕಂಡಿದೆ.

Bloodbath In Stock Market: ಉಕ್ರೇನ್ ಮೇಲೆ ರಷ್ಯಾ ದಾಳಿ; ಸೆನ್ಸೆಕ್ಸ್ 1800 ಪಾಯಿಂಟ್ಸ್, ನಿಫ್ಟಿ 500 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Follow us on

ಉಕ್ರೇನ್​ ಮೇಲೆ ರಷ್ಯಾ ದಾಳಿ (Russia- Ukraine Conflict) ಹಿನ್ನೆಲೆಯಲ್ಲಿ ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭಾರೀ ಕುಸಿತ ಆಗಿದೆ. ಸೆನ್ಸೆಕ್ಸ್ 1800 ಪಾಯಿಂಟ್ಸ್​ ನೆಲ ಕಚ್ಚಿದರೆ, ನಿಫ್ಟಿ 550 ಪಾಯಿಂಟ್ಸ್ ಕುಸಿತವಾಯಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1759.14 ಪಾಯಿಂಟ್ಸ್ ಅಥವಾ ಶೇ 3.07ರಷ್ಟು ಹಾಗೂ ನಿಫ್ಟಿ 517.50 ಅಥವಾ ಶೇ 3.03ರಷ್ಟು ಕೆಳಗೆ ಇಳಿದಿತ್ತು. ಇನ್ನು ನಿಫ್ಟಿ ಬ್ಯಾಂಕ್ 1298.75 ಪಾಯಿಂಟ್ಸ್ ಅಥವಾ ಶೇ 3.47ರಷ್ಟು ಕುಸಿತಗೊಂಡಿತು. ರಷ್ಯಾವು ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಣೆ ಮಾಡಿದ ಬೆನ್ನಿಗೇ ಕಚ್ಚಾ ತೈಲ ದರ ಬೆಲೆಯು 100 ಯುಎಸ್​ಡಿ ದಾಟಿದ್ದು, ಅದೇ ವೇಳೆ ಚಿನ್ನದ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಚಿನ್ನದ ಬೆಲೆಯು ಗುರುವಾರದಂದು ಶೇ 2ರಷ್ಟು ಮೇಲೇರಿತು. ಆ ಮೂಲಕ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿನ ಗರಿಷ್ಠ ಮಟ್ಟವನ್ನು ಮುಟ್ಟಿತು. ರಷ್ಯಾವು ಉಕ್ರೇನ್​ ಮೇಲೆ ದಾಳಿ ಆರಂಭಿಸಿದ್ದು, ಇದು ಯುರೋಪ್​ನಲ್ಲಿ ಯುದ್ಧಾರಂಭ ಮಾಡಿದೆ. ಸ್ಪಾಟ್​ ಗೋಲ್ಡ್ ಶೇ 1.9ರಷ್ಟು ಮೇಲೇರಿ ಪ್ರತಿ ಔನ್ಸ್​ಗೆ (28.3495 ಗ್ರಾಮ್) 1943.86 ಯುಎಸ್​ಡಿಗೆ ಜಿಗಿಯಿತು. 2021ರ ಜನವರಿಯಿಂದ ಈಚೆಗೆ ಇದು ಗರಿಷ್ಠ ಮಟ್ಟವಾಗಿದೆ. ಯು.ಎಸ್​. ಗೋಲ್ಡ್ ಫ್ಯೂಚರ್ಸ್ ಶೇ 2ರಷ್ಟು ಜಾಸ್ತಿ ಆಗಿ, 1949.20 ಡಾಲರ್ ಮುಟ್ಟಿದೆ. ರಷ್ಯಾದ ಸೇನಾ ಪಡೆ ಉಕ್ರೇನ್​ನ ಹಲವು ನಗರಗಳ ಕ್ಷಿಪಣಿ ದಾಳಿ ನಡೆಸಿದ್ದು, ದಕ್ಷಿಣದ ಕಡಲ ತೀರದಲ್ಲಿ ತುಕಡಿಯನ್ನು ಇಳಿಸಿದೆ ಎಂದು ಅಧಿಕಾರಿಗಳು ಹಾಗೂ ಮಾಧ್ಯಮಗಳು ತಿಳಿಸಿವೆ. ಇದಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ಕಾರ್ಯಾಚರಣೆಗೆ ಅನುಮತಿ ನೀಡಿದರು.

ಇನ್ನು ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ವಿರುದ್ಧ ಭಾರೀ ಇಳಿಕೆ ದಾಖಲಿಸಿದೆ. ಆರಂಭದ ವಹಿವಾಟಿನಲ್ಲಿ 55 ಪೈಸೆ ಕುಸಿತವನ್ನು ಕಂಡ, ಪ್ರತಿ ಡಾಲರ್​ಗೆ 75.16ರಂತೆ ವ್ಯವಹಾರ ಮಾಡಿದೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಟಾಟಾ ಮೋಟಾರ್ಸ್ ಶೇ -6.01

ಇಂಡಸ್​ಇಂಡ್ ಬ್ಯಾಂಕ್ ಶೇ -4.75

ಮಹೀಂದ್ರಾ ಅಂಡ್ ಮಹೀಂದ್ರಾ ಶೇ -4.27

ಟೆಕ್ ಮಹೀಂದ್ರಾ ಶೇ -4.02

ಅದಾನಿ ಪೋರ್ಟ್ಸ್ ಶೇ -4.13

ಇದನ್ನೂ ಓದಿ: Stock Market Investors Wealth: 5 ದಿನದಲ್ಲಿ ಷೇರು ಪೇಟೇಲಿ ಕರಗಿದ್ದು ಹೂಡಿಕೆದಾರರ 9.1 ಲಕ್ಷ ಕೋಟಿ ರೂ. ಸಂಪತ್ತು

Published On - 10:28 am, Thu, 24 February 22