ಮಾಸ್ಕೋ, ಅಕ್ಟೋಬರ್ 31: ರಷ್ಯನ್ ಟಿವಿ ಚಾನಲ್ಗಳು ಯೂಟ್ಯೂಬ್ನಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿಸಿದ ಗೂಗಲ್ಗೆ ರಷ್ಯಾದ ನ್ಯಾಯಾಲಯವೊಂದು ಭಾರೀ ಭಾರೀ ಮೊತ್ತದ ದಂಡ ವಿಧಿಸಿದೆ. ಈ ದಂಡದ ಮೊತ್ತ ನಾವು ನೀವು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ರಷ್ಯಾದ ಟಿವಿ ಚಾಲನ್ ಆರ್ಬಿಸಿ ನ್ಯೂಸ್ನ ವರದಿಯೊಂದರ ಪ್ರಕಾರ ಗೂಗಲ್ ಸಂಸ್ಥೆಗೆ ರಷ್ಯನ್ ಕೋರ್ಟ್ವೊಂದು ಎರಡು ಉನ್ಡೆಸಿಲಿಯನ್ ರುಬಲ್ಸ್ನಷ್ಟು ದಂಡ ಹೇರಿದೆ. ಇಡೀ ವಿಶ್ವದ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿದ್ದನ್ನು ಕಂಡು ಕೇಳಿದ್ದಿಲ್ಲ. ಇಡೀ ವಿಶ್ವವೇ ಗೂಗಲ್ ಬೆನ್ನಿಗೆ ನಿಂತರೂ ಇಷ್ಟು ದಂಡದ ಮೊತ್ತ ಪಾವತಿಸಲು ಸಾಧ್ಯವಾಗುವುದಿಲ್ಲ.
ಒಂದು ಸಂಖ್ಯೆಯ ಪಕ್ಕ 7 ಸೊನ್ನೆ ಹಾಕಿದರೆ ಒಂದು ಕೋಟಿ ಆಗುತ್ತದೆ. ಬಿಲಿಯನ್ಗೆ 9 ಸೊನ್ನೆ ಬೇಕು. ಟ್ರಿಲಿಯನ್ಗೆ 12 ಸೊನ್ನೆ ಬೇಕು. ಒಂದು ಡೆಸಿಲಿಯನ್ಗೆ 33 ಸೊನ್ನೆ ಬೇಕು. ಉನ್ ಡೆಸಿಲಿಯನ್ಗೆ 36 ಸೊನ್ನೆ ಬೇಕು. ಎರಡು ಉನ್ಡೆಸಿಲಿಯನ್ ರುಬಲ್ಸ್ ಮೊತ್ತದ ದಂಡ ಅಂದರೆ ಹೇಗಿದ್ದೀತು ಊಹಿಸಿ ನೋಡಿ… ಒಂದು ರುಬಲ್ಸ್ ಮೌಲ್ಯ 85 ಪೈಸೆ ಇದೆ. ನೂರು ರುಬಲ್ಸ್ ಹಾಕಿದರೆ 1 ಡಾಲರ್ ಆಗುತ್ತದೆ.
ಇದನ್ನೂ ಓದಿ: ಅಮೆರಿಕದಲ್ಲಿ ನಾಲ್ಕು ಫ್ಯಾಕ್ಟರಿ ಮುಚುತ್ತಿರುವ ಪೆಪ್ಸಿಕೋ; ನೂರಾರು ಮಂದಿಗೆ ಉದ್ಯೋಗನಷ್ಟ
ಇಡೀ ವಿಶ್ವದ ಎಲ್ಲಾ ದೇಶಗಳ ಜಿಡಿಪಿಯನ್ನು ಒಟ್ಟಿಗೆ ಸೇರಿಸಿದರೆ ಸುಮಾರು ಒಂದು ಸಾವಿರ ಟ್ರಿಲಿಯನ್ ಡಾಲರ್ ಕೂಡ ಆಗುವುದಿಲ್ಲ. ಜಾಗತಿಕ ಜಿಡಿಪಿಯ ಎರಡು ಪಟ್ಟು ಹಣವನ್ನು ಗೂಗಲ್ ಸಂಸ್ಥೆ ಎಲ್ಲಿಂದ ತರುತ್ತದೆ?
ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡಿದ ಕಾರಣ ಹಲವು ರಷ್ಯನ್ ಸುದ್ದಿ ವಾಹಿನಿಗಳನ್ನು ಯೂಟ್ಯೂಬ್ ಪ್ಲಾಟ್ಫಾರ್ಮ್ನಲ್ಲಿ ನಿಷೇಧಿಸಲಾಗಿದೆ. ರಷ್ಯಾ ಪರವಾಗಿರುವ ಮತ್ತು ಸರ್ಕಾರಿ ಪ್ರಾಯೋಜಿತವಾಗಿರುವ ಚಾನಲ್ ಒನ್ ಮೊದಲಾದ ಹಲವು ಮಾಧ್ಯಮಗಳನ್ನು ಯೂಟ್ಯೂಬ್ನಲ್ಲಿ ಸ್ಟ್ರೀಮ್ ಮಾಡದಂತೆ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಚೀನಾಗೆ ಹಬ್ಬದ ಶಾಕ್..! ದೀಪಾವಳಿ ಸಂಬಂಧಿತ ಚೀನೀ ಉತ್ಪನ್ನಗಳ ಮಾರಾಟ ಇಳಿಮುಖ; ಚೀನಾಗೆ 1.25 ಲಕ್ಷ ಕೋಟಿ ರೂ ನಷ್ಟ?
17 ರಷ್ಯನ್ ಮಾಧ್ಯಮ ಸಂಸ್ಥೆಗಳು ಗೂಗಲ್ ಕ್ರಮವನ್ನು ಪ್ರಶ್ನಿಸಿ ರಷ್ಯನ್ ಕೋರ್ಟ್ ಮೆಟ್ಟಿಲೇರಿದ್ದವು. ಕುತೂಹಲವೆಂದರೆ 2020ರಲ್ಲಿ ರಷ್ಯಾದ ಒಂದೆರಡು ವಾಹಿನಿಗಳನ್ನು ಯೂಟ್ಯೂಬ್ ಬ್ಲಾಕ್ ಮಾಡಿತ್ತು. ಮಾಸ್ಕೋ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಗೂಗಲ್ಗೆ ನಿರ್ದೇಶಿಸಿತ್ತು. ಆದರೆ, 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಸ್ಟುಟ್ನಿಕ್, ಆರ್ಟಿ ಇತ್ಯಾದಿ ಪ್ರಮುಖ ರಷ್ಯನ್ ಮೀಡಿಯಾ ಸೇರಿದಂತೆ ಹಲವು ಚಾನಲ್ಗಳನ್ನು ಯೂಟ್ಯೂಬ್ ನಿಷೇಧಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ