ಚೀನಾಗೆ ಹಬ್ಬದ ಶಾಕ್..! ದೀಪಾವಳಿ ಸಂಬಂಧಿತ ಚೀನೀ ಉತ್ಪನ್ನಗಳ ಮಾರಾಟ ಇಳಿಮುಖ; ಚೀನಾಗೆ 1.25 ಲಕ್ಷ ಕೋಟಿ ರೂ ನಷ್ಟ?
Deepavali festival sales: ದೀಪಾವಳಿ ಹಬ್ಬದ ಸೀಸನ್ನಲ್ಲಿ ಭಾರತದಲ್ಲಿ ವ್ಯಾಪಾರ ವಹಿವಾಟು ಬಹಳ ಉತ್ತಮವಾಗಿ ಆಗುವ ನಿರೀಕ್ಷೆ ಇದೆ. ಧನತ್ರಯೋದಶಿಯಾದ ನಿನ್ನೆ 60,000 ಕೋಟಿ ರೂ ಮೊತ್ತದ ವ್ಯಾಪಾರವಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಿನ್ನ, ಬೆಳ್ಳಿಗಳ ಮಾರಾಟವೇ ಗಣನೀಯವಾಗಿ ಆಗಿದೆ. ಮೇಡ್ ಇನ್ ಚೀನಾ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗಿದೆ.
ನವದೆಹಲಿ, ಅಕ್ಟೋಬರ್ 30: ನಿನ್ನೆ ಧನತ್ರಯೋದಶಿ ಮೂಲಕ ದೀಪಾವಳಿ ಹಬ್ಬದ ಋತು ಆರಂಭವಾಗಿದೆ. ರೀಟೇಲ್ ಉದ್ಯಮ ಗರಿಗೆದರಿ ನಿಂತಿದೆ. ಧನತ್ರಯೋದಶಿ ದಿನದಂದೇ ರೀಟೇಲ್ ವ್ಯವಹಾರ 60,000 ಕೋಟಿ ರೂ ಆಗಿರುವ ಸಾಧ್ಯತೆ ಇದೆ ಎಂಬುದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟದ ಅಂದಾಜು. ವೋಕಲ್ ಫಾರ್ ಲೋಕಲ್ ಅಭಿಯಾನದ ಪರಿಣಾಮವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೇಡಿಕೆ ಮುಂದುವರಿಯುತ್ತಲೇ ಇದೆ. ಚೀನಾ ಮೂಲದ ಉತ್ಪನ್ನಗಳ ಮಾರಾಟ ತಗ್ಗುತ್ತಿದೆ. ಈ ಹಬ್ಬದ ಋತುವಿನಲ್ಲಿ ಚೀನೀ ನಿರ್ಮಿತ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇರುವ ಪರಿಣಾಮ ಆದೇಶಕ್ಕೆ ಒಂದೂಕಾಲು ಲಕ್ಷ ಕೋಟಿ ರೂನಷ್ಟು ನಷ್ಟವಾಗಬಹುದು ಎನ್ನುವ ಅಂದಾಜಿದೆ.
ಸರ್ಕಾರದ ವತಿಯಿಂದ ಸ್ಥಳೀಯ ಕುಶಲಕರ್ಮಿಗಳಿಗ ಉತ್ತೇಜನ ಸಿಗುತ್ತಿದೆ. ಸ್ಥಳೀಯ ಮಹಿಳಾ ಕುಶಲಕರ್ಮಿಗಳು, ಕುಂಬಾರರು, ಕರಕುಶಲಕರ್ಮಿಗಳ ಉತ್ಪನ್ನಗಳ ಮಾರಾಟಕ್ಕೆ ಒತ್ತುಕೊಡುವಂತೆ ಟ್ರೇಡ್ ಅಸೋಸಿಯೇಶನ್ಗಳಿಗೆ ಸರ್ಕಾರ ಉತ್ತೇಜನ ನೀಡಿದೆ.
ಇದನ್ನೂ ಓದಿ: ಗಿಟ್ಹಬ್ನಲ್ಲಿ ಎಐ ಪ್ರಾಜೆಕ್ಟ್; ಅತಿವೇಗದಲ್ಲಿ ಹೆಚ್ಚುತ್ತಿರುವ ಭಾರತೀಯರ ಸಂಖ್ಯೆ
ನಿಮ್ಮ ಅಭಿಪ್ರಾಯ ತಿಳಿಸಿ
ಧನತ್ರಯೋದಶಿಯಂದು ಚಿನ್ನ, ಬೆಳ್ಳಿ ಭರ್ಜರಿ ಮಾರಾಟ
ಧನತ್ರಯೋದಶಿಯಾದ ಅಕ್ಟೋಬರ್ 29ರಂದು 20,000 ಕೋಟಿ ರೂ ಮೊತ್ತದ ಚಿನ್ನ ಮಾರಾಟವಾಗಿದೆ. ಬೆಳ್ಳಿ ಮಾರಾಟವಾಗಿರುವುದು 2,500 ರೂ ಮೌಲ್ಯದಷ್ಟು. ಸಿಎಐಟಿ ಸಂಘಟನೆಯ ಅಖಿಲ ಭಾರತ ಆಭರಣ ಮತ್ತು ಅಕ್ಕಸಾಲಿಗ ಒಕ್ಕೂಟದ ಅಧ್ಯಕ್ಷ ಪಂಕಜ್ ಅರೋರಾ ಈ ಮಾಹಿತಿ ನೀಡಿದ್ದಾರೆ.
ಮಂಗಳವಾರ ಒಂದೇ ದಿನ 25 ಟನ್ಗಳಷ್ಟು ಚಿನ್ನ, 250 ಟನ್ಗಳಷ್ಟು ಬೆಳ್ಳಿಯ ಮಾರಾಟವಾಗಿದೆ. ಹಳೆಯ ಬೆಳ್ಳಿ ನಾಣ್ಯಗಳಿಗೂ ಬೇಡಿಕೆ ಇದ್ದು, ಪ್ರತೀ ನಾಣ್ಯವೂ 1,200 ರೂನಿಂದ 1,300 ರೂಗೆ ಮಾರಾಟವಾಗಿದೆ.
ಇದನ್ನೂ ಓದಿ: ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?
ಧನ್ವಂತರಿ ಅವತಾರವಾದ ದಿನವಾದ ಧನತ್ರಯೋದಶಿಯು ಆರೋಗ್ಯದ ಸಂಕೇತವಾಗಿ ಪರಿಗಣಿತವಾಗಿದೆ. ಹಿತ್ತಾಳೆಯ ವಸ್ತುಗಳನ್ನು ಖರೀದಿಸುವ ಪರಿಪಾಟ ಇದೆ. ಈ ದಿನದಂದು ಗಣಪತಿ ಲಕ್ಷ್ಮೀ ಮತ್ತು ಕುಬೇರನ ಪೂಜೆ ನಡೆಸಲಾಗುತ್ತದೆ. ಹೊಸ ವಸ್ತುಗಳನ್ನು ಈ ದಿನ ಖರೀದಿಸುವುದರಿಂದ ಜೀವನದಲ್ಲಿ ಸಮೃದ್ಧತೆ ನೆಲಸುತ್ತದೆ ಎನ್ನುವ ನಂಬಿಕೆ. ಅದರಲ್ಲೂ ಚಿನ್ನ, ಬೆಳ್ಳಿ ಆಭರಣ, ಪಾತ್ರೆ ಪಗಡೆಗಳು, ವಾಹನ, ಎಲೆಕ್ಟ್ರಾನಿಕ್ಸ್, ಗೃಹೋಪಕರಣ ವಸ್ತು ಹೀಗೆ ಹೊಸವನ್ನು ಖರೀದಿಸಬಹುದು ಎನ್ನಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ