AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?

Elcid Investments share price: ಎಲ್ಸಿಡ್ ಇನ್ವೆಸ್ಟ್​ಮೆಂಟ್ ಷೇರುಬೆಲೆ ಏಕ್​ದಂ ಹೈಜಂಪ್ ಮಾಡಿದೆ. 3.53 ರೂ ಇದ್ದ ಅದರ ಷೇರುಬೆಲೆ ನಿನ್ನೆ ಮಂಗಳವಾರ 2,36,250 ರೂ ತಲುಪಿದೆ. ಈ ಪರಿ ಬೆಲೆ ಏರಲು ಕಾರಣವಾಗಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.

ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2024 | 11:17 AM

Share

ನವದೆಹಲಿ, ಅಕ್ಟೋಬರ್ 30: ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ನಿನ್ನೆ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. 3.53 ರೂ ಇದ್ದ ಇದರ ಷೇರುಬೆಲೆ 2,36,250 ರೂಗೆ ಏರಿದೆ. ಬರೋಬ್ಬರಿ 66,92,535 ಪ್ರತಿಶತದಷ್ಟು ಬೆಲೆ ಏರಿಕೆ ಕಂಡಿದೆ. ಈ ಮೂಲಕ ಭಾರತದ ಅತಿದುಬಾರಿ ಸ್ಟಾಕ್ ಎನಿಸಿದ್ದ ಎಂಆರ್​ಎಫ್​ನ ದಾಖಲೆಯನ್ನು ಎಲ್ಸಿಡ್ ಇನ್ವೆಸ್ಟ್​ಮೆಂಟ್ ಅಳಿಸಿಹಾಕಿದೆ. ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಈ ಪರಿ ರಾಕೆಟ್ ವೇಗದ ಬೆಲೆ ಹೆಚ್ಚಳ ಕಂಡಿದ್ದಿಲ್ಲ.

ಎಲ್ಸಿಡ್ ಷೇರುಬೆಲೆ ಇಷ್ಟು ಹೆಚ್ಚಲು ಏನು ಕಾರಣ?

ಎಲ್ಸಿಡ್ ಇನ್ವೆಸ್ಟ್​ಮೆಂಟ್ ಸಂಸ್ಥೆ 2011ರಿಂದಲೂ ಕೇವಲ 3 ರೂ ಆಸುಪಾಸಿನ ಷೇರುಬೆಲೆ ಹೊಂದಿತ್ತು. ಹದಿಮೂರು ವರ್ಷಗಳಿಂದಲೂ ಇದರ ಷೇರುಗಳ ಟ್ರೇಡಿಂಗ್ ಬಹುತೇಕ ನಡೆದೇ ಇಲ್ಲ. ಅಚ್ಚರಿ ಎನಿಸಬಹುದಾದರೂ ಇದಕ್ಕೆ ಕಾರಣವಾಗಿದ್ದು ಎಲ್ಸಿಡ್​ನ ಅಪಾರ ಪ್ರಮಾಣದ ಬುಕ್ ವ್ಯಾಲ್ಯು. ಎಲ್ಸಿಡ್ ಸಂಸ್ಥೆಯ ಬುಕ್ ವ್ಯಾಲ್ಯೂ ಬರೋಬ್ಬರಿ 5,85,225 ರೂ ಇದೆ. ಈ ಕಾರಣಕ್ಕೆ ಯಾವ ಷೇರುದಾರರೂ ತಮ್ಮ ಷೇರನ್ನು ಮಾರಲು ಮುಂದಾಗಿರಲಿಲ್ಲ. ಯಾವತ್ತಾದರೂ ಒಂದು ದಿನ ಷೇರು ಬೆಲೆ ಊಹೆಗೂ ನಿಲುಕದ ರೀತಿಯಲ್ಲಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಷೇರುದಾರರದ್ದಾಗಿತ್ತು.

ಇದನ್ನೂ ಓದಿ: World Savings Day 2024: ಭಾರತದಲ್ಲಿ ವಿಶ್ವ ಉಳಿತಾಯ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಬುಕ್ ವ್ಯಾಲ್ಯೂ ಮಹತ್ವ ಏನು?

ಒಂದು ಕಂಪನಿ ಹೊಂದಿರುವ ಸಾಲ ಮತ್ತಿತರ ಬಾಧ್ಯತೆಗಳನ್ನು ಕಳೆದು ಉಳಿಯುವ ಆಸ್ತಿ ಎಷ್ಟು ಎಂಬುದನ್ನು ಬುಕ್ ವ್ಯಾಲ್ಯೂ ತೋರಿಸುತ್ತದೆ. ಎಲ್ಸಿಡ್ ಕಂಪನಿಯ ಬುಕ್ ವ್ಯಾಲ್ಯೂ ಪ್ರತೀ ಷೇರಿಗೆ 5,85,225 ರೂ ಇತ್ತು. ಈ ಷೇರು ಎಷ್ಟು ಅಂಡರ್​ವ್ಯಾಲ್ಯೂ ಆಗಿದೆ ಎನ್ನುವುದು ಬಹಳ ಸ್ಪಷ್ಟವಾಗಿತ್ತು. ಹೀಗಾಗಿ, ಯಾವ ಷೇರುದಾರರೂ ಕೂಡ ತಮ್ಮ ಷೇರುಗಳನ್ನು ಮಾರಲು ಮುಂದಾಗಲಿಲ್ಲ.

ಎಲ್ಸಿಡ್ ಇನ್ವೆಸ್ಟ್​ಮೆಂಟ್​ನ ಕಾಲ್ ಆಕ್ಷನ್

ಒಂದು ಷೇರಿನ ವಹಿವಾಟು ನಿಯಮಿತವಾಗಿ ನಡೆಯದೇ ಹೋದರೆ ಅದರ ನೈಜ ಮಾರುಕಟ್ಟೆ ಮೌಲ್ಯ ಹೊರಬರುವುದಿಲ್ಲ. ಈ ಕಾರಣಕ್ಕೆ ಕೆಲ ಷೇರುಗಳು ಮಿತಿಮೀರಿದ ಮೌಲ್ಯ ಹೊಂದಿರುತ್ತವೆ. ಕೆಲ ಷೇರುಗಳು ಅಂಡರ್​ವ್ಯಾಲ್ಯೂಡ್ ಆಗಿರುತ್ತವೆ. ನಿಯಮಿತವಾಗಿ ಟ್ರೇಡಿಂಗ್ ಆಗದ ಇನ್ವೆಸ್ಟ್​ಮೆಂಟ್ ಕಂಪನಿಗಳು ಮತ್ತು ಇನ್ವೆಸ್ಟ್​ಮೆಂಟ್ ಹೋಲ್ಡಿಂಗ್ ಕಂಪನಿಗಳ ಷೇರುಗಳ ನೈಜ ಬೆಲೆ ಕಂಡುಕೊಳ್ಳಲು (Price discovery) ಸಹಾಯವಾಗುವಂತ ಸೆಬಿ ವಿಶೇಷ ಹರಾಜು ನಡೆಸಲು ತೀರ್ಮಾನಿಸಿತು.

ಇದನ್ನೂ ಓದಿ: ಜಿಯೋಭಾರತ್ ಫೋನ್​ಗೆ ಭರ್ಜರಿ ಡಿಸ್ಕೌಂಟ್; ಕೇವಲ 699 ರೂ; ದೀಪಾವಳಿ ಆಫರ್

ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್, ನಾಲ್ವಾ ಸನ್ಸ್, ಟಿವಿಎಸ್ ಹೋಲ್ಡಿಂಗ್ಸ್, ಜಿಎಫ್​ಎಲ್ ಸೇರಿದಂತೆ ಕೆಲ ಆಯ್ದ ಕಂಪನಿಗಳ ಷೇರುಗಳ ಕಾಲ್ ಆಕ್ಷನ್ ಅನ್ನು ಕೈಗೊಳ್ಳಲಾಗಿದೆ. ಈ ವಿಶೇಷ ಹರಾಜಿನಲ್ಲಿ ಒಂದು ಷೇರಿಗೆ ಎಷ್ಟು ಬೇಡಿಕೆ ಇದೆ ಎಂಬುದು ಗೊತ್ತಾಗುತ್ತದೆ. ಹೆಚ್ಚೂಕಡಿಮೆ 6 ಲಕ್ಷ ರೂನಷ್ಟು ಬುಕ್ ವ್ಯಾಲ್ಯೂ ಹೊಂದಿರುವ ಎಲ್ಸಿಡ್ ಹೋಲ್ಡಿಂಗ್ಸ್ ಸಂಸ್ಥೆಯ ಷೇರು ಬೆಲೆ 2 ಲಕ್ಷ ರೂಗಿಂತಲೂ ಹೆಚ್ಚಾಗಿದ್ದು ಅಸಹಜವೆನಿಸುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ