AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋಭಾರತ್ ಫೋನ್​ಗೆ ಭರ್ಜರಿ ಡಿಸ್ಕೌಂಟ್; ಕೇವಲ 699 ರೂ; ದೀಪಾವಳಿ ಆಫರ್

JioBharat phone discount sales during Deepavali: 999 ರೂ ಬೆಲೆಯ ಜಿಯೋಭಾರತ್ 4ಜಿ ಫೋನ್ ಅನ್ನು 699 ರೂಗೆ ಮಾರಲಾಗುತ್ತಿದೆ. ಇದು ದೀಪಾವಳಿ ಹಬ್ಬಕ್ಕೆ ರಿಲಾಯನ್ಸ್ ಕೊಟ್ಟಿರುವ ಆಫರ್ ಆಗಿದ್ದು, ಸೀಮಿತ ಅವಧಿವರೆಗೆ ಲಭ್ಯ ಇದೆ. 4ಜಿ ಸ್ಮಾರ್ಟ್​ಫೋನ್​ನ ಪ್ರಮುಖ ಫೀಚರ್​ಗಳು ಈ ಫೀಚರ್ ಫೋನ್​ನಲ್ಲಿದ್ದು, ಮಾಸಿಕ ರೀಚಾರ್ಜ್ ದರವೂ ಕೇವಲ 123 ರೂ ಇದೆ.

ಜಿಯೋಭಾರತ್ ಫೋನ್​ಗೆ ಭರ್ಜರಿ ಡಿಸ್ಕೌಂಟ್; ಕೇವಲ 699 ರೂ; ದೀಪಾವಳಿ ಆಫರ್
ಜಿಯೋ ಭಾರತ್ ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2024 | 5:50 PM

Share

ನವದೆಹಲಿ, ಅಕ್ಟೋಬರ್ 29: ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಹೊಸ ಜಿಯೋಭಾರತ್ 4ಜಿ ಫೋನ್ ಮೇಲೆ ಭರ್ಜರಿ ದೀಪಾವಳಿ ಆಫರ್ ಕೊಟ್ಟಿದೆ. 999 ರೂ ಬೆಲೆ ಅದರ ಈ ಫೋನ್ ಅನ್ನು ಕೇವಲ 699 ರೂಗೆ ಮಾರುತ್ತಿದೆ. ಸೀಮಿತ ಅವಧಿಯವರೆಗೆ ಮಾತ್ರ ಈ ಡಿಸ್ಕೌಂಟ್ ಸೇಲ್ ಇದೆ. ಫೋನ್ ಮಾತ್ರವಲ್ಲ, ಇದರ ರೀಚಾರ್ಜ್ ದರಗಳೂ ಕೂಡ ಕೈಗೆಟುವಷ್ಟು ಇದೆ.

ಜಿಯೋ ಭಾರತ್ ಬಹುತೇಕ ಫೀಚರ್ ಫೋನ್ ಆಗಿದ್ದರೂ ಸ್ಮಾರ್ಟ್​ಫೋನ್​ನ ಪ್ರಮುಖ ಕಾರ್ಯಗಳಿಗೆ ಇದು ಅವಕಾಶ ಕೊಡುತ್ತದೆ. ಇಂಟರ್ನೆಟ್ ಬಳಕೆಯಿಂದ ಹಿಡಿದು ಲೈವ್ ಟಿವಿ ವೀಕ್ಷಣೆವರೆಗೆ ಹಲವು ಸೌಲಭ್ಯಗಳು ಲಭ್ಯ ಇವೆ. 4ಜಿ ಫೀಚರ್​ಗಳು ಈ ಫೋನ್​ನಲ್ಲಿವೆ. ಯುಪಿಐ ಪೇಮೆಂಟ್ ಮಾಡಬಹುದು.

ಜಿಯೋಭಾರತ್​ನ ಮಾಸಿಕ ರೀಚಾರ್ಜ್ ದರ ಕೇವಲ 123 ರೂನಿಂದ ಆರಂಭವಾಗುತ್ತದೆ. 123 ರೂಗೆ 14ಜಿಬಿ ಡಾಟಾ ಸಿಗುತ್ತದೆ. ಧ್ವನಿ ಕರೆ ಎಷ್ಟು ಬೇಕಾದರೂ ಮಾಡಬಹುದು. ಸಿನಿಮಾ, ವಿಡಿಯೋ, ಲೈವ್ ಸ್ಪೋರ್ಟ್ಸ್, ಆಟದ ಹೈಲೈಟ್ಸ್ ಇತ್ಯಾದಿಯನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಇದು ಕ್ರೆಡಿಟ್ ಕಾರ್ಡ್ ಟ್ರಿಕ್ಸ್; 3 ಲಕ್ಷ ರೂ ರೆಸಾರ್ಟ್ ಸ್ಟೇ ಉಚಿತವಾಗಿ ಅನುಭವಿಸಿದ ಮಹಿಳೆಯ ಕಥೆ

ಜಿಯೋ ಪೇ ಆ್ಯಪ್ ಲಭ್ಯ ಇದ್ದು, ಯುಪಿಐ ಪೇಮೆಂಟ್ ಮಾಡಬಹುದು. ಹಣವನ್ನೂ ಸ್ವೀಕರಿಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಫೀಚರ್ ಇದೆ. ಪೇಮೆಂಟ್ ಸ್ವೀಕರಿಸಿದಾಗ ಧ್ವನಿ ಸಂದೇಶವೂ ಬರುತ್ತದೆ.

ಜಿಯೋ ಚ್ಯಾಟ್ ಎನ್ನುವ ಫೀಚರ್ ಇದ್ದು, ಈ ಪ್ಲಾಟ್​ಫಾರ್ಮ್​ನಲ್ಲಿ ಬೇರೆಯವರಿಗೆ ವಾಟ್ಸಾಪ್ ರೀತಿಯಲ್ಲಿ ವಿಡಿಯೋ, ಫೋಟೋ, ಮೆಸೇಜ್ ಕಳುಹಿಸಬಹುದು.

ಈಗಿರುವ ಹೆಚ್ಚಿನ ಫೀಚರ್ ಫೋನ್​ಗಳು 2ಜಿಯಾಗಿವೆ. ಕೇವಲ ಟೆಕ್ಸ್ಟ್ ಮೆಸೇಜ್ ಕಳುಹಿಸಲು, ಸ್ವೀಕರಿಸಲು, ಧ್ವನಿ ಕರೆ ಮಾಡಲು, ಸ್ವೀಕರಿಸಲು ಇವನ್ನು ಬಳಸಲಾಗುತ್ತಿದೆ. ಆದರೆ, ಜಿಯೋ ಫೋನ್​ಗಳು ಸ್ಮಾರ್ಟ್​ಫೋನ್ ರೀತಿ 3ಜಿ, 4ಜಿ ಸೇವೆಗಳನ್ನು ಒದಗಿಸುತ್ತಿವೆ. ಜಿಯೋಭಾರತ್ 4ಜಿ ಫೋನ್​ನಲ್ಲಿ ಹಲವು ಸ್ಮಾರ್ಟ್​ಫೋನ್ ಫೀಚರ್​ಗಳಿವೆ.

ಇದನ್ನೂ ಓದಿ: ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ; ಆದರೆ, ಚೀನಾದ ಆ್ಯಪಲ್ ಹಿಡಿತ ಈಗಲೂ ಬಲಿಷ್ಠ

ಈಗಲೂ ಕೂಡ ಭಾರತದಲ್ಲಿ 20 ಕೋಟಿಗೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದಾರೆ. ಇವರನ್ನು 4ಜಿಗೆ ಕರೆತರಲು ಜಿಯೋಭಾರತ್ ಫೋನ್ ಪರಿಣಾಮಕಾರಿ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು