ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ; ಆದರೆ, ಚೀನಾದ ಆ್ಯಪಲ್ ಹಿಡಿತ ಈಗಲೂ ಬಲಿಷ್ಠ

Made-in-India iPhones exported to world: ಆ್ಯಪಲ್ ಸಂಸ್ಥೆ 2024ರ ಏಪ್ರಿಲ್​ನಿಂದ ಸೆಪ್ಟೆಂಬರ್​​ವರೆಗಿನ ಅವಧಿಯಲ್ಲಿ 6 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನು ರಫ್ತು ಮಾಡಿದೆ. ಈ ಹಣಕಾಸು ವರ್ಷದಲ್ಲಿ ಭಾರತದಿಂದ ರಫ್ತಾಗುವ ಐಫೋನ್​ಗಳ ಮೌಲ್ಯ 10 ಬಿಲಿಯನ್ ಡಾಲರ್ ಗಡಿದಾಟುವ ನಿರೀಕ್ಷೆ ಇದೆ. ಶೇ 90ಕ್ಕಿಂತಲೂ ಹೆಚ್ಚು ಐಫೋನ್​ಗಳು ಈಗಲೂ ಚೀನಾದಲ್ಲೇ ಉತ್ಪಾದನೆ ಆಗುತ್ತವೆ.

ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ; ಆದರೆ, ಚೀನಾದ ಆ್ಯಪಲ್ ಹಿಡಿತ ಈಗಲೂ ಬಲಿಷ್ಠ
ಆ್ಯಪಲ್ ಐಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2024 | 11:52 AM

ನವದೆಹಲಿ, ಅಕ್ಟೋಬರ್ 29: ಅಮೆರಿಕದ ಆ್ಯಪಲ್ ಸಂಸ್ಥೆ ಭಾರತದಲ್ಲಿ ತನ್ನ ಉತ್ಪನ್ನಗಳ ತಯಾರಿಕೆಯ ಕೆಲಸವನ್ನು ತೀವ್ರಗೊಳಿಸಿದೆ. ಪರಿಣಾಮವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಆ್ಯಪಲ್ ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ. ವರದಿ ಪ್ರಕಾರ, ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅರ್ಧ ವರ್ಷದಲ್ಲಿ 6 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನು ಆ್ಯಪಲ್ ಸಂಸ್ಥೆ ರಫ್ತು ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚಾಗಿದೆ. ಅಂದರೆ, ಭಾರತದಲ್ಲಿ ಐಫೋನ್ ತಯಾರಿಕೆ ಹೆಚ್ಚುತ್ತಿರುವ ವೇಗ ಬಹಳ ಹೆಚ್ಚಿದೆ. ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ಐಫೋನ್​ ಗಳ ರಫ್ತು 10 ಬಿಲಿಯನ್ ಡಾಲರ್ ದಾಟಬಹುದು ಎನ್ನಲಾಗಿದೆ.

ಆ್ಯಪಲ್ ಸಂಸ್ಥೆಯ ಉತ್ಪನ್ನಗಳನ್ನು ಭಾರತದಲ್ಲಿ ಮೂರು ಕಂಪನಿಗಳು ತಯಾರಿಸಿಕೊಡುತ್ತವೆ. ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿಂದ ಐಫೋನ್​ಗಳ ಅಂತಿಮ ಅಸೆಂಬ್ಲಿಂಗ್ ನಡೆಯುತ್ತದೆ. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ 6 ಬಿಲಿಯನ್ ಡಾಲರ್ ಮೊತ್ತದ ಐಫೋನ್​ಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಉತ್ಪಾದನೆಯನ್ನು ಫಾಕ್ಸ್​ಕಾನ್ ಸಂಸ್ಥೆ ಮಾಡುತ್ತದೆ.

ಇದನ್ನೂ ಓದಿ: ಈ ಹಣಕಾಸು ವರ್ಷದ ಮೊದಲ ಆರು ತಿಂಗಳ ಆರ್ಥಿಕ ಬೆಳವಣಿಗೆ ಬಗ್ಗೆ ಹಣಕಾಸು ಸಚಿವಾಲಯ ತೃಪ್ತಿ

ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದ 1.7 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ರಫ್ತಾಗಿದೆ. ಟಾಟಾ ವೈಶಿಷ್ಟ್ಯತೆ ಎಂದರೆ, ಐಫೋನ್ ಅನ್ನು ತಯಾರಿಸುತ್ತಿರುವ ಮೊದಲ ಹಾಗೂ ಏಕೈಕ ಭಾರತೀಯ ಕಂಪನಿ ಎನಿಸಿದೆ. ಫಾಕ್ಸ್​ಕಾನ್, ಪೆಗಾಟ್ರಾನ್ ಕಂಪನಿಗಳು ತೈವಾನ್ ದೇಶದ ಮೂಲದವಾಗಿವೆ.

ಚೀನಾದಲ್ಲಿ ಈಗಲೂ ಅತಿಹೆಚ್ಚು ಐಫೋನ್ ತಯಾರಿಕೆ

ಚೀನಾ ದೇಶ ಕಳೆದ ನಾಲ್ಕೈದು ದಶಕಗಳಿಂದ ಅಭಿವೃದ್ಧಿಪಡಿಸಿದ ಮ್ಯಾನುಫ್ಯಾಕ್ಚರಿಂಗ್ ಮೂಲಸೌಕರ್ಯ ಕಾರಣದಿಂದ ಅಲ್ಲಿ ಬಹಳಷ್ಟು ಅಮೆರಿಕನ್ ಕಂಪನಿಗಳು ತಮ್ಮ ಉತ್ಪನ್ನಗಳನ್ನು ತಯಾರಿಸುತ್ತವೆ. ಕೋವಿಡ್ ಬಂದ ಬಳಿಕ ಚೀನಾದಲ್ಲಿ ವಿಪರೀತ ಲಾಕ್​ಡೌನ್ ಇತ್ಯಾದಿ ಪ್ರತಿಬಂಧಗಳಿಂದಾಗಿ ಹಲವು ಕಂಪನಿಗಳ ಬಿಸಿನೆಸ್ ನಿಂತು ಹೋಗಿತ್ತು. ಸರಬರಾಜು ಸರಪಳಿ ದುರ್ಬಲಗೊಂಡಿತ್ತು. ಈ ಕಾರಣಕ್ಕೆ ಬಹಳಷ್ಟು ವಿದೇಶೀ ಕಂಪನಿಗಳು ಚೀನಾ ಮೇಲೆ ಪೂರ್ಣ ಅವಲಂಬನೆಯಾಗುವುದನ್ನು ತಪ್ಪಿಸಿ ಪರ್ಯಾಯ ಮಾರುಕಟ್ಟೆಗಳತ್ತ ಹೋಗುತ್ತಿವೆ. ಭಾರತ, ವಿಯೆಟ್ನಾಂ, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ ಮೊದಲಾದ ದೇಶಗಳಲ್ಲಿ ಉತ್ಪಾದನೆ ಹೆಚ್ಚುತ್ತಿದೆ.

ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಆದರೆ, ಚೀನಾದಲ್ಲಿ ಐಫೋನ್ ತಯಾರಿಕೆ ಈಗಲೂ ಅತಿಹೆಚ್ಚು ಇದೆ. ಶೇ. 90ಕ್ಕಿಂತಲೂ ಹೆಚ್ಚು ಆ್ಯಪಲ್ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತವೆ. ಆ್ಯಪಲ್ ಕಂಪನಿಯ ಒಟ್ಟಾರೆ ಆದಾಯದಲ್ಲಿ ಚೀನಾದಿಂದ ಬರುವ ಆದಾಯದ ಪಾಲು ಶೇ. 19ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ