ಅಮೆರಿಕದಲ್ಲಿ ನಾಲ್ಕು ಫ್ಯಾಕ್ಟರಿ ಮುಚುತ್ತಿರುವ ಪೆಪ್ಸಿಕೋ; ನೂರಾರು ಮಂದಿಗೆ ಉದ್ಯೋಗನಷ್ಟ

PepsiCo to close down its 4 bottling units in USA: ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿರುವ ತನ್ನ ನಾಲ್ಕು ಬಾಟ್ಲಿಂಗ್ ಯೂನಿಟ್​ಗಳನ್ನು ಮುಚ್ಚಲು ನಿರ್ಧರಿಸಿದೆ. ಚಿಕಾಗೊ, ಸಿನ್ಸಿನಾಟಿ, ಪೆನ್​ಸಿಲ್ವೇನಿಯಾ ಮತ್ತು ಅಟ್ಲಾಂಟಾದಲ್ಲಿರುವ ತನ್ನ ಬಾಟ್ಲಿಂಗ್ ಫ್ಯಾಕ್ಟರಿ ಬಂದ್ ಮಾಡುತ್ತಿದೆ. ತನ್ನ ಉತ್ಪನ್ನಗಳ ಮಾರಾಟ ಪ್ರಮಾಣ ಕಡಿಮೆ ಆಗಿರುವುದರಿಂದ ಈ ನಿರ್ಧಾರ ಮಾಡಿರುವುದು ತಿಳಿದುಬಂದಿದೆ.

ಅಮೆರಿಕದಲ್ಲಿ ನಾಲ್ಕು ಫ್ಯಾಕ್ಟರಿ ಮುಚುತ್ತಿರುವ ಪೆಪ್ಸಿಕೋ; ನೂರಾರು ಮಂದಿಗೆ ಉದ್ಯೋಗನಷ್ಟ
ಪೆಪ್ಸಿ
Follow us
|

Updated on: Oct 31, 2024 | 2:35 PM

ನ್ಯೂಯಾರ್ಕ್, ಅಕ್ಟೋಬರ್ 31: ವಿಶ್ವದ ಪ್ರಮುಖ ಪಾನೀಯ ಕಂಪನಿಗಳಲ್ಲಿ ಒಂದಾದ ಪೆಪ್ಸಿಕೋ ಅಮೆರಿಕದಲ್ಲಿರುವ ತನ್ನ ಕೆಲ ಬಾಟ್ಲಿಂಗ್ ಘಟಕಗಳನ್ನು ಮುಚ್ಚಲು ನಿರ್ಧರಿಸಿದೆ. ವೆಚ್ಚ ಕಡಿತ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ನಾಲ್ಕು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತಿದೆ. ಹತ್ತಿರಹತ್ತಿರ 400 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್​ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್​ಗಳು ಮುಚ್ಚಲ್ಪಡುತ್ತಿವೆ. ಸಿನ್ಸಿನಾಟಿಯಲ್ಲಿ 136 ಮಂದಿ, ಚಿಕಾಗೋದಲ್ಲಿ 131 ಮಂದಿ, ಪೆನ್​ಸಿಲ್ವೇನಿಯಾದ ಹ್ಯಾರಿಸ್​ಬರ್ಗ್​ನಲ್ಲಿ 127 ಮಂದಿ ಹಾಗೂ ಅಟ್ಲಾಂಟಾದಲ್ಲಿ 45-50 ಮಂದಿಗೆ ಕೆಲಸ ಹೋಗಲಿದೆ.

ಮುಚ್ಚಲಾಗುತ್ತಿರುವ ನಾಲ್ಕು ಘಟಕಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗುತ್ತದೆ. ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ವೇರ್​ಹೌಸ್, ಸೇಲ್ಸ್, ಡೆಲಿವರಿ ಸೇವೆಗಳು ಈ ಮೂರು ಕಡೆ ಮುಂದುವರಿಯಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಹಣ ನೋಡುವ ದೃಷ್ಟಿ ಜಪಾನೀಯರದ್ದು ವಿಭಿನ್ನ; ಎರಿಗಾಟು ಸೂತ್ರ ತಿಳಿದಿರಿ

ಅಮೆರಿಕದ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿ 75ಕ್ಕೂ ಹೆಚ್ಚು ಬಾಟ್ಲಿಂಗ್ ಘಟಕಗಳನ್ನು ಹೊಂದಿದೆ. ಹೀಗಾಗಿ, ನಾಲ್ಕು ಘಟಕಗಳನ್ನು ಮುಚ್ಚುತ್ತಿರುವುದು ಕಂಪನಿಗೆ ಆಘಾತಕಾರಿ ಸಂಗತಿಯಲ್ಲ. ಅದರ ಬಿಸಿನೆಸ್ ಕಡಿಮೆ ಆಗುತ್ತಿರುವ ಕಾರಣ, ಅದನ್ನು ಸರಿಹೊಂದಿಸಲು ಹಾಗೂ ಅನಗತ್ಯ ವೆಚ್ಚ ಕಡಿಮೆ ಮಾಡಲು ಬಾಟ್ಲಿಂಗ್ ಪ್ಲಾಂಟ್ಸ್ ಮುಚ್ಚುತ್ತಿದೆ.

ಪೆಪ್ಸಿಕೋಗೆ ಅತಿಹೆಚ್ಚು ಆದಾಯ ಅಮೆರಿಕದಿಂದಲೇ ಬರುತ್ತದೆ. ಇಲ್ಲಿಯೇ ಅದರ ಬಿಸಿನೆಸ್ ಕಡಿಮೆ ಆಗುತ್ತಿದೆ. ಚೀನಾದಲ್ಲೂ ಪೆಪ್ಸಿ ಡ್ರಿಂಕ್ಸ್​ನ ಮಾರಾಟ ಕಡಿಮೆ ಆಗುತ್ತಿದೆ. ಈ ವರ್ಷ ಈ ಎರಡು ದೇಶಗಳಲ್ಲಿ ತನಗೆ ಕಡಿಮೆ ಬ್ಯುಸಿನೆಸ್ ಆಗಬಹುದು ಎಂದು ಸ್ವತಃ ಪೆಪ್ಸಿಕೋ ಅಂದಾಜು ಮಾಡಿದೆ. ಎರಡನೇ ಹಾಗೂ ಮೂರನೇ ಕ್ವಾರ್ಟರ್​ನಲ್ಲಿ ಯುಎಸ್​ಎನಲ್ಲಿ ಪೆಪ್ಸಿಕೋ ಸೇಲ್ಸ್ ಶೇ. 3ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಡಿಜಿಟಲ್ ಗೋಲ್ಡ್ ಸೇರಿ ವಿವಿಧ ರೀತಿಯ ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಷ್ಟಿದೆ, ವಿವರ ಇಲ್ಲಿದೆ

ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಕಂಪನಿಯ ನಿವ್ವಳ ಆದಾಯ ಶೇ. 5ರಷ್ಟು ಕಡಿಮೆ ಆಗಿ 2.9 ಬಿಲಿಯನ್ ಡಾಲರ್ ತಲುಪಿದೆ. ಹೀಗಾಗಿ, ಬಾಟ್ಲಿಂಗ್ ಫ್ಯಾಕ್ಟರಿ ಮುಚ್ಚಲು ಮತ್ತು ಉದ್ಯೋಗಿಗಳನ್ನು ಲೇ ಆಫ್ ಮಾಡಲು ಕಂಪನಿ ನಿರ್ಧರಿಸಿದೆ. ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ 60 ದಿನಗಳ ಕಾಂಪೆನ್ಸೇಶನ್ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ
ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ