AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಗೋಲ್ಡ್ ಸೇರಿ ವಿವಿಧ ರೀತಿಯ ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಷ್ಟಿದೆ, ವಿವರ ಇಲ್ಲಿದೆ

Taxes on Gold: ಅಪರಂಜಿ ಚಿನ್ನ, ಚಿನ್ನಾಭರಣ, ಡಿಜಿಟಲ್ ಗೋಲ್ಡ್ ಇವುಗಳಿಗೆ ಜಿಎಸ್​ಟಿ ಜೊತೆಗೆ ಲಾಭದ ಮೇಲೆಯೂ ತೆರಿಗೆ ಹಾಕಲಾಗುತ್ತದೆ. ಗೋಲ್ಡ್ ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್​ಗಳಿಗೂ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಜುಲೈ 23ರಿಂದ ಇದು ಜಾರಿಗೆ ಬಂದಿದೆ.

ಡಿಜಿಟಲ್ ಗೋಲ್ಡ್ ಸೇರಿ ವಿವಿಧ ರೀತಿಯ ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಷ್ಟಿದೆ, ವಿವರ ಇಲ್ಲಿದೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2024 | 4:40 PM

Share

ನವದೆಹಲಿ, ಅಕ್ಟೋಬರ್ 30: ಸರ್ಕಾರ ಇತ್ತೀಚೆಗೆ ಎಲ್ಲಾ ರೀತಿಯ ಆಸ್ತಿಗಳ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆ ನಿಯಮಗಳಲ್ಲಿ ಬದಲಾವಣೆ ತಂದಿದೆ. ಚಿನ್ನ, ಷೇರು, ರಿಯಲ್ ಎಸ್ಟೇಟ್ ಇತ್ಯಾದಿ ಹೂಡಿಕೆಗಳಿಗೆ ಈ ಲಾಭ ಹೆಚ್ಚಳ ತೆರಿಗೆ ಅನ್ವಯ ಆಗುತ್ತದೆ. ಚಿನ್ನ ಎಂದರೆ ಭೌತಿಕ ಚಿನ್ನ, ಆಭರಣ ಚಿನ್ನ, ಚಿನ್ನದ ನಾಣ್ಯ ಒಳಗೊಂಡಿವೆ. ಹಾಗೆಯೇ, ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್ ಮೊದಲಾದವೂ ಇದರಲ್ಲಿ ಸೇರುತ್ತವೆ. ಜುಲೈ 23ರಿಂದಲೇ ಹೊಸ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ನಿಯಮ ಜಾರಿಗೆ ಬಂದಿದೆ.

ಭೌತಿಕ ಚಿನ್ನ ಮತ್ತು ಡಿಜಿಟಲ್ ಚಿನ್ನ ಖರೀದಿಸುವಾಗ ಶೇ. 3ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ. ಆಭರಣವಾದರೆ ಜಿಎಸ್​ಟಿ ಜೊತೆಗೆ ಮೇಕಿಂಗ್ ಚಾರ್ಜಸ್ ಇರುತ್ತದೆ. ಆದರೆ, ಚಿನ್ನ ಖರೀದಿಸುವಾಗ ಆದಾಯ ತೆರಿಗೆ ಕಟ್ಟಬೇಕಿಲ್ಲ.

ನೀವು ಚಿನ್ನವನ್ನು ಮಾರುವಾಗ ಶೇ. 3ರಷ್ಟು ಜಿಎಸ್​ಟಿ ಕಟ್ಟಬೇಕು. ಜೊತೆಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಕೂಡ ಅನ್ವಯ ಆಗುತ್ತದೆ. ಚಿನ್ನ ಖರೀದಿಸಿ ಎರಡು ವರ್ಷದೊಳಗೆ ಅದನ್ನು ಮಾರಿದರೆ ಶೇ. 20ರಷ್ಟು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಎರಡು ವರ್ಷದ ಬಳಿಕ ಮಾರಿದರೆ ಶೇ. 12.5ರಷ್ಟು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ: ಎಸ್​ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ

ಹಳೆಯ ಚಿನ್ನಾಭರಣವನ್ನು ಎಕ್ಸ್​ಚೇಂಜ್ ಮಾಡಿ ಹೊಸ ಆಭರಣ ಮಾಡಿಸುತ್ತಿದ್ದರೆ ಆಗ ಆಭರಣ ವಿನಿಮಯವನ್ನು ಮಾರಾಟವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಪೇಟಿಎಂ, ಫೋನ್​ಪೆ, ಗೂಗಲ್ ಪೆ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಮಾರಾಟವಾಗುವ ಡಿಜಿಟಲ್ ಗೋಲ್ಡ್ ವಿಚಾರದಲ್ಲೂ ಈ ನಿಯಮಗಳು ಜಾರಿಯಲ್ಲಿರುತ್ತವೆ.

ಗೋಲ್ಡ್ ಮ್ಯುಚುವಲ್ ಫಂಡ್, ಗೋಲ್ಡ್ ಇಟಿಎಫ್

ಗೋಲ್ಡ್ ಮ್ಯುಚುವಲ್ ಫಂಡ್​ನಲ್ಲಿ ಎರಡು ವರ್ಷದೊಳಗೆ ಮಾರಿ ಗಳಿಸಿದ ಲಾಭಕ್ಕೆ ಎಸ್​ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ. ಎರಡು ವರ್ಷದ ಬಳಿಕವಾದರೆ ಎಲ್​ಟಿಸಿಜಿ ಅನ್ವಯ ಆಗುತ್ತದೆ.

ಗೋಲ್ಡ್ ಇಟಿಎಫ್​ನಲ್ಲಿ ಒಂದು ವರ್ಷದ ಅವಧಿಗೆ ಎಸ್​ಟಿಸಿಜಿ ಇರುತ್ತದೆ. ನಿಮ್ಮ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ದರ ಅನ್ವಯ ಆಗುತ್ತದೆ. ನಂತರದ ಅವಧಿಗೆ ಶೇ. 12.50ಯಷ್ಟು ಎಲ್​ಟಿಸಿಜಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಕ್ಯಾಪಿಟಲ್ ಗೇನ್ ಎಂದರೆ ನೀವು ಆಸ್ತಿ ಮಾರಿದಾಗ ಗಳಿಸುವ ಲಾಭವಾಗಿರುತ್ತದೆ. ಈ ಲಾಭದ ಹಣಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹಾಕಲಾಗುತ್ತದೆ. ಉದಾಹರಣೆಗೆ, ನೀವು ಗ್ರಾಮ್​ಗೆ 8,000 ರೂ ಬೆಲೆ ಇರುವಾಗ 100 ಗ್ರಾಮ್ ಚಿನ್ನ ಖರೀದಿಸುತ್ತೀರಿ. ಅಂದರೆ, ಶೇ. 3 ಜಿಎಸ್​ಟಿ ಸೇರಿ 8,16,000 ರೂ ಹೂಡಿಕೆ ಮಾಡುತ್ತೀರಿ. 3 ವರ್ಷದ ಬಳಿಕ ಗ್ರಾಮ್ ಚಿನ್ನದ ಬೆಲೆ 12,000 ರೂ ಆಗುತ್ತದೆ ಎಂದಿಟ್ಟುಕೊಳ್ಳಿ. ಆಗ ಶೇ. 3ರಷ್ಟು ಜಿಎಸ್​ಟಿ ಪಾವತಿಸಿದರೆ 11,64,000 ರೂ ನಿಮಗೆ ಸಿಗುತ್ತದೆ. ನಿಮಗೆ ಸಿಕ್ಕ ಲಾಭ 3,64,000 ರೂ. ಇದಕ್ಕೆ ನೀವು ಶೇ. 12.5ರಷ್ಟು ಎಲ್​ಟಿಸಿಜಿ ತೆರಿಗೆ ಕಟ್ಟಬೇಕಾಗುತ್ತದೆ. ಅಂದರೆ, 45,500 ರೂನಷ್ಟು ತೆರಿಗೆ ಬಾಧ್ಯತೆ ನಿಮಗಿರುತ್ತದೆ.

ನೀವು ಈ ಚಿನ್ನವನ್ನು ಮಾರುವಾಗಲೇ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಿಲ್ಲ. ಐಟಿ ರಿಟರ್ನ್ ಫೈಲ್ ಮಾಡುವಾಗ ಅದನ್ನು ಪಾವತಿಸಬಹುದಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ