AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್​ಗಳ ಮೈಲಿಗಲ್ಲು; ಷೇರುಮಾರುಕಟ್ಟೆಗೊಂದು ಹೊಸ ಗರಿ

NSE client accounts milestone: ಭಾರತದ ಷೇರು ಮಾರುಕಟ್ಟೆ ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಎನ್​ಎಸ್​ಇನಲ್ಲಿ ಇರುವ ಒಟ್ಟು ಕ್ಲೈಂಟ್ ಅಕೌಂಟ್​ಗಳ ಸಂಖ್ಯೆ 20 ಕೋಟಿ ದಾಟಿದೆ. ಕೆಲ ತಿಂಗಳ ಹಿಂದಷ್ಟೇ ನೊಂದಾಯಿತ ಯೂನಿಕ್ ಇನ್ವೆಸ್ಟರ್​ಗಳ ಸಂಖ್ಯೆ 10.50 ಕೋಟಿ ದಾಟಿತ್ತು. ಕಳೆದ ಎಂಟು ತಿಂಗಳಲ್ಲಿ ಮೂರು ಕೋಟಿಗೂ ಅಧಿಕ ಕ್ಲೈಂಟ್ ಅಕೌಂಟ್​ಗಳು ಸ್ಥಾಪನೆ ಆಗಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್​ಗಳ ಮೈಲಿಗಲ್ಲು; ಷೇರುಮಾರುಕಟ್ಟೆಗೊಂದು ಹೊಸ ಗರಿ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2024 | 4:19 PM

Share

ಮುಂಬೈ, ಅಕ್ಟೋಬರ್ 31: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಹೊಸ ಮೈಲಿಗಲ್ಲು ಮುಟ್ಟಿದೆ. ಎನ್​ಎಸ್​ಇನ ಒಟ್ಟು ಕ್ಲೈಂಟ್ ಅಕೌಂಟ್​ಗಳ ಸಂಖ್ಯೆ 20 ಕೋಟಿ ಮುಟ್ಟಿದೆ. ಕೇವಲ ಎಂಟು ತಿಂಗಳಲ್ಲಿ ಮೂರು ಕೋಟಿಗೂ ಅಧಿಕ ಖಾತೆಗಳು ಸ್ಥಾಪನೆಯಾಗಿವೆ. ಶೇ. 18ರಷ್ಟು ಎಸ್​ಎಸ್​ಇ ಡೀಮ್ಯಾಟ್ ಅಕೌಂಟ್​ಗಳು ಮಹಾರಾಷ್ಟ್ರದಿಂದಲೇ ಬಂದಿವೆ. ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ, ಈ ಐದು ರಾಜ್ಯಗಳಿಂದ ಅರ್ಧದಷ್ಟು ಕ್ಲೈಂಟ್ ಅಕೌಂಟ್​ಗಳು ರಚನೆ ಆಗಿವೆ.

ಮಹಾರಾಷ್ಟ್ರದಿಂದ 3.6 ಕೋಟಿ, ಉತ್ತರಪ್ರದೇಶದಿಂದ 2.2 ಕೋಟಿ, ಗುಜರಾತ್ 1.8 ಕೋಟಿ, ರಾಜಸ್ಥಾನ 1.2 ಕೋಟಿ, ಪಶ್ಚಿಮ ಬಂಗಾಳದಿಂದ 1.2 ಕೋಟಿಯಷ್ಟು ಕ್ಲೈಂಟ್ ಅಕೌಂಟ್​ಗಳ ಸ್ಥಾಪನೆ ಆಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?

ಪ್ರತ್ಯೇಕ ನೊಂದಾಯಿತ ಹೂಡಿಕೆದಾರರ (Unique registered investor) ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. 2023ರಲ್ಲಿ 8.35 ಕೋಟಿಯಷ್ಟಿದ್ದ ನೊಂದಾಯಿತ ಹೂಡಿಕೆದಾರರ ಬಳಗ 2024ರ ಆಗಸ್ಟ್ 8ಕ್ಕೆ 10.5 ಕೋಟಿ ಸಂಖ್ಯೆ ಮುಟ್ಟಿದೆ. ಈ ಅಂಕಿ ಅಂಶಗಳು ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಜನರ ಪಾಲ್ಗೊಳ್ಳುವಿಕೆ ದಿನೇ ದಿನೇ ಏರಿಕೆ ಆಗುತ್ತಿರುವುದನ್ನು ತೋರಿಸುತ್ತದೆ.

ಎನ್​ಎಸ್​ಇನಲ್ಲಿ ಕ್ಲೈಂಟ್ ಅಕೌಂಟ್ ಸಂಖ್ಯೆ 20 ಕೋಟಿ ಮುಟ್ಟಿದ್ದು ನಿಜಕ್ಕೂ ಅಸಾಧಾರಣ ಸಂಗತಿ. ಷೇರು ಮಾರುಕಟ್ಟೆಯ ಆಕರ್ಷಣೆ ಹೆಚ್ಚಿರುವುದು ಒಂದೆಡೆಯಾದರೆ, ಡಿಜಿಟಲ್ ಮತ್ತು ತಂತ್ರಜ್ಞಾನ ಆವಿಷ್ಕಾರಗಳು ಹೂಡಿಕೆ ಕಾರ್ಯವನ್ನು ಸುಗಮಗೊಳಿಸಿರುವುದೂ ಕೂಡ ಇನ್ನೊಂದು ಕಾರಣವಾಗಿರಬಹುದು.

ಇದನ್ನೂ ಓದಿ: ಹೀಗೂ ಉಂಟೆ..! ಗೂಗಲ್​ಗೆ 2.5 ಡೆಸಿಲಿಯನ್ ಡಾಲರ್ ದಂಡ ಹಾಕಿದ ರಷ್ಯಾ; ಇಡೀ ವಿಶ್ವದಲ್ಲಿರುವ ದುಡ್ಡು ತಂದು ಸುರಿದರೂ ಸಾಕಾಗಲ್ಲ

ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ. ವೈಯಕ್ತಿಕ ಹಣಕಾಸು ತಿಳಿವಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅರಿವು ಹೆಚ್ಚುತ್ತಿದೆ. ಮಾರುಕಟ್ಟೆ ಕಳೆದ ಕೆಲ ವರ್ಷಗಳಿಂದ ಅದ್ವಿತೀಯ ಓಟದಲ್ಲಿದೆ. ಷೇರು ಮಾರುಕಟ್ಟೆಯಲ್ಲಿ ಅತೀವ ರಿಸ್ಕ್​ನಿಂದ ಹಿಡಿದು ತೀರಾ ಕಡಿಮೆ ರಿಸ್ಕ್ ಇರುವ ಹಲವು ಆಯ್ಕೆಗಳಿವೆ. ಇಟಿಎಫ್, ಗೋಲ್ಡ್, ಸಿಲ್ವರ್ ಇತ್ಯಾದಿಗಳ ಮೇಲೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಅವಕಾಶ ಇದೆ. ಇವೆಲ್ಲವೂ ಷೇರುಮಾರುಕಟ್ಟೆಯ ಜನಾಕರ್ಷಣೆಯನ್ನು ಹೆಚ್ಚಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ