AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೆ..! ಗೂಗಲ್​ಗೆ 2.5 ಡೆಸಿಲಿಯನ್ ಡಾಲರ್ ದಂಡ ಹಾಕಿದ ರಷ್ಯಾ; ಇಡೀ ವಿಶ್ವದಲ್ಲಿರುವ ದುಡ್ಡು ತಂದು ಸುರಿದರೂ ಸಾಕಾಗಲ್ಲ

Russian court impose great penalty on Google: ಕೆಲ ಪ್ರಮುಖ ರಷ್ಯನ್ ಟಿವಿ ಚಾನಲ್​ಗಳನ್ನು ಯೂಟ್ಯೂಬ್​ನಲ್ಲಿ ನಿಷೇಧಿಸಿದ ಕಾರಣಕ್ಕೆ ಗೂಗಲ್ ವಿರುದ್ಧ ರಷ್ಯಾದ ಕೋರ್ಟ್​​ವೊಂದು ಅಸಾಧಾರಣ ಮೊತ್ತದ ದಂಡ ಹಾಕಿದೆ. ವರದಿಗಳ ಪ್ರಕಾರ ಎರಡು ಉನ್​ಡೆಲಿಯನ್ ರುಬಲ್ಸ್​ನಷ್ಟು ಮೊತ್ತದ ದಂಡ ಕಟ್ಟುವಂತೆ ಗೂಗಲ್​ಗೆ ಸೂಚಿಸಲಾಗಿದೆ. ಇಡೀ ವಿಶ್ವದ ಜಿಡಿಪಿಯ ಎರಡು ಪಟ್ಟು ಹಣ ಸೇರಿಸಿದರೂ ಈ ದಂಡ ಮೊತ್ತಕ್ಕೆ ಸಮ ಆಗುವುದಿಲ್ಲ.

ಹೀಗೂ ಉಂಟೆ..! ಗೂಗಲ್​ಗೆ 2.5 ಡೆಸಿಲಿಯನ್ ಡಾಲರ್ ದಂಡ ಹಾಕಿದ ರಷ್ಯಾ; ಇಡೀ ವಿಶ್ವದಲ್ಲಿರುವ ದುಡ್ಡು ತಂದು ಸುರಿದರೂ ಸಾಕಾಗಲ್ಲ
ಗೂಗಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2024 | 3:30 PM

Share

ಮಾಸ್ಕೋ, ಅಕ್ಟೋಬರ್ 31: ರಷ್ಯನ್ ಟಿವಿ ಚಾನಲ್​ಗಳು ಯೂಟ್ಯೂಬ್​ನಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿಸಿದ ಗೂಗಲ್​ಗೆ ರಷ್ಯಾದ ನ್ಯಾಯಾಲಯವೊಂದು ಭಾರೀ ಭಾರೀ ಮೊತ್ತದ ದಂಡ ವಿಧಿಸಿದೆ. ಈ ದಂಡದ ಮೊತ್ತ ನಾವು ನೀವು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ರಷ್ಯಾದ ಟಿವಿ ಚಾಲನ್ ಆರ್​ಬಿಸಿ ನ್ಯೂಸ್​ನ ವರದಿಯೊಂದರ ಪ್ರಕಾರ ಗೂಗಲ್ ಸಂಸ್ಥೆಗೆ ರಷ್ಯನ್ ಕೋರ್ಟ್​ವೊಂದು ಎರಡು ಉನ್​ಡೆಸಿಲಿಯನ್ ರುಬಲ್ಸ್​ನಷ್ಟು ದಂಡ ಹೇರಿದೆ. ಇಡೀ ವಿಶ್ವದ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿದ್ದನ್ನು ಕಂಡು ಕೇಳಿದ್ದಿಲ್ಲ. ಇಡೀ ವಿಶ್ವವೇ ಗೂಗಲ್ ಬೆನ್ನಿಗೆ ನಿಂತರೂ ಇಷ್ಟು ದಂಡದ ಮೊತ್ತ ಪಾವತಿಸಲು ಸಾಧ್ಯವಾಗುವುದಿಲ್ಲ.

ಒಂದು ಡೆಸಿಲಿಯನ್ ಎಂದರೆ ಎಷ್ಟು ಸೊನ್ನೆ ಗೊತ್ತಾ…?

ಒಂದು ಸಂಖ್ಯೆಯ ಪಕ್ಕ 7 ಸೊನ್ನೆ ಹಾಕಿದರೆ ಒಂದು ಕೋಟಿ ಆಗುತ್ತದೆ. ಬಿಲಿಯನ್​ಗೆ 9 ಸೊನ್ನೆ ಬೇಕು. ಟ್ರಿಲಿಯನ್​ಗೆ 12 ಸೊನ್ನೆ ಬೇಕು. ಒಂದು ಡೆಸಿಲಿಯನ್​ಗೆ 33 ಸೊನ್ನೆ ಬೇಕು. ಉನ್ ಡೆಸಿಲಿಯನ್​ಗೆ 36 ಸೊನ್ನೆ ಬೇಕು. ಎರಡು ಉನ್​ಡೆಸಿಲಿಯನ್ ರುಬಲ್ಸ್ ಮೊತ್ತದ ದಂಡ ಅಂದರೆ ಹೇಗಿದ್ದೀತು ಊಹಿಸಿ ನೋಡಿ… ಒಂದು ರುಬಲ್ಸ್ ಮೌಲ್ಯ 85 ಪೈಸೆ ಇದೆ. ನೂರು ರುಬಲ್ಸ್ ಹಾಕಿದರೆ 1 ಡಾಲರ್ ಆಗುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ ನಾಲ್ಕು ಫ್ಯಾಕ್ಟರಿ ಮುಚುತ್ತಿರುವ ಪೆಪ್ಸಿಕೋ; ನೂರಾರು ಮಂದಿಗೆ ಉದ್ಯೋಗನಷ್ಟ

ಇಡೀ ವಿಶ್ವದ ಎಲ್ಲಾ ದೇಶಗಳ ಜಿಡಿಪಿಯನ್ನು ಒಟ್ಟಿಗೆ ಸೇರಿಸಿದರೆ ಸುಮಾರು ಒಂದು ಸಾವಿರ ಟ್ರಿಲಿಯನ್ ಡಾಲರ್ ಕೂಡ ಆಗುವುದಿಲ್ಲ. ಜಾಗತಿಕ ಜಿಡಿಪಿಯ ಎರಡು ಪಟ್ಟು ಹಣವನ್ನು ಗೂಗಲ್ ಸಂಸ್ಥೆ ಎಲ್ಲಿಂದ ತರುತ್ತದೆ?

ಗೂಗಲ್​ಗೆ ಯಾಕಿಷ್ಟು ದಂಡ ಬಿತ್ತು..?

ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡಿದ ಕಾರಣ ಹಲವು ರಷ್ಯನ್ ಸುದ್ದಿ ವಾಹಿನಿಗಳನ್ನು ಯೂಟ್ಯೂಬ್ ಪ್ಲಾಟ್​ಫಾರ್ಮ್​​ನಲ್ಲಿ ನಿಷೇಧಿಸಲಾಗಿದೆ. ರಷ್ಯಾ ಪರವಾಗಿರುವ ಮತ್ತು ಸರ್ಕಾರಿ ಪ್ರಾಯೋಜಿತವಾಗಿರುವ ಚಾನಲ್ ಒನ್ ಮೊದಲಾದ ಹಲವು ಮಾಧ್ಯಮಗಳನ್ನು ಯೂಟ್ಯೂಬ್​ನಲ್ಲಿ ಸ್ಟ್ರೀಮ್ ಮಾಡದಂತೆ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಚೀನಾಗೆ ಹಬ್ಬದ ಶಾಕ್..! ದೀಪಾವಳಿ ಸಂಬಂಧಿತ ಚೀನೀ ಉತ್ಪನ್ನಗಳ ಮಾರಾಟ ಇಳಿಮುಖ; ಚೀನಾಗೆ 1.25 ಲಕ್ಷ ಕೋಟಿ ರೂ ನಷ್ಟ?

17 ರಷ್ಯನ್ ಮಾಧ್ಯಮ ಸಂಸ್ಥೆಗಳು ಗೂಗಲ್ ಕ್ರಮವನ್ನು ಪ್ರಶ್ನಿಸಿ ರಷ್ಯನ್ ಕೋರ್ಟ್ ಮೆಟ್ಟಿಲೇರಿದ್ದವು. ಕುತೂಹಲವೆಂದರೆ 2020ರಲ್ಲಿ ರಷ್ಯಾದ ಒಂದೆರಡು ವಾಹಿನಿಗಳನ್ನು ಯೂಟ್ಯೂಬ್ ಬ್ಲಾಕ್ ಮಾಡಿತ್ತು. ಮಾಸ್ಕೋ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಗೂಗಲ್​ಗೆ ನಿರ್ದೇಶಿಸಿತ್ತು. ಆದರೆ, 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಸ್ಟುಟ್ನಿಕ್, ಆರ್​ಟಿ ಇತ್ಯಾದಿ ಪ್ರಮುಖ ರಷ್ಯನ್ ಮೀಡಿಯಾ ಸೇರಿದಂತೆ ಹಲವು ಚಾನಲ್​ಗಳನ್ನು ಯೂಟ್ಯೂಬ್ ನಿಷೇಧಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ