ನವೆಂಬರ್ 1ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ನ ವಿವಿಧ ಶುಲ್ಕಗಳಲ್ಲಿ ಬದಲಾವಣೆ, ಗಮನಿಸಿ
SBI credit card charges: ಎಸ್ಬಿಐನ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆ ಆಗುತ್ತಿದೆ. ಯುಟಿಲಿಟಿ ಪೇಮೆಂಟ್ಗಳ ಮೊತ್ತ ಒಂದು ಬಿಲ್ಲಿಂಗ್ ಸೈಕಲ್ನಲ್ಲಿ 50,000 ರೂಗಿಂತ ಹೆಚ್ಚಿದ್ದರೆ ಶೇ. 1ರಷ್ಟು ಸರ್ಚಾರ್ಜ್ ಹಾಕಲಾಗುತ್ತದೆ. ಅನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಲ್ಲಿ ಫೈನಾನ್ಸ್ ಚಾರ್ಜ್ ಅನ್ನು ಶೇ. 3.75ಕ್ಕೆ ಹೆಚ್ಚಿಸಲಾಗಿದೆ. ನವೆಂಬರ್ 1ರಿಂದ ಈ ಹೊಸ ಶುಲ್ಕ ಜಾರಿಯಲ್ಲಿರುತ್ತದೆ.
ಬೆಂಗಳೂರು, ಅಕ್ಟೋಬರ್ 31: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ನೀರಿನ ಬಿಲ್, ವಿದ್ಯುತ್ ಬಿಲ್, ಮೊಬೈಲ್ ಬಿಲ್ ಇತ್ಯಾದಿ ಯುಟಿಲಿಟಿ ಪೇಮೆಂಟ್ಗಳ ಶುಲ್ಕದಲ್ಲಿ ಬದಲಾವಣೆ ಇದೆ. ಬಡ್ಡಿದರ, ರಿವಾರ್ಡ್ಸ್ ಮಿತಿ, ಟ್ರಾನ್ಸಾಕ್ಷನ್ ಫೀ ಇತ್ಯಾದಿಯಲ್ಲೂ ಬದಲಾವಣೆ ಆಗುತ್ತಿದೆ. ನವೆಂಬರ್ 1ರಿಂದಲೇ ಈ ಹೊಸ ಶುಲ್ಕಗಳು ಅನ್ವಯಕ್ಕೆ ಬರಲಿವೆ.
ಯುಟಿಲಿಟಿ ಬಿಲ್ ಪೇಮೆಂಟ್ಸ್ಗೆ ಹೊಸ ಸರ್ಚಾರ್ಜ್
ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದೊಡ್ಡ ಮೊತ್ತದ ಯುಟಿಲಿಟಿ ಬಿಲ್ ಪೇಮೆಂಟ್ ಇದ್ದರೆ ಅದರ ಮೇಲೆ ಶೇ. 1ರಷ್ಟು ಸರ್ಚಾರ್ಜ್ (ಹೆಚ್ಚುವರಿ ಶುಲ್ಕ) ಅನ್ನು ವಿಧಿಸಲಾಗುತ್ತದೆ. ಒಂದು ಬಿಲ್ಲಿಂಗ್ ಸೈಕಲ್ನಲ್ಲಿ ನಿಮ್ಮ ಯುಟಿಲಿಟಿ ಪೇಮೆಂಟ್ಸ್ ಮೊತ್ತ 50,000 ರೂ ಮೀರಿದರೆ ಆಗ ಶೇ. 1ರ ಸರ್ಚಾರ್ಜ್ ಹೇರಿಕೆ ಆಗುತ್ತದೆ. ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್ ಇತ್ಯಾದಿ ಯುಟಿಲಿಟಿ ಪೇಮೆಂಟ್ಗಳಿಗೆ ಈ ಹೆಚ್ಚುವರಿ ಶುಲ್ಕ ಅನ್ವಯ ಆಗುತ್ತದೆ.
ಇದನ್ನೂ ಓದಿ: ಇದು ಕ್ರೆಡಿಟ್ ಕಾರ್ಡ್ ಟ್ರಿಕ್ಸ್; 3 ಲಕ್ಷ ರೂ ರೆಸಾರ್ಟ್ ಸ್ಟೇ ಉಚಿತವಾಗಿ ಅನುಭವಿಸಿದ ಮಹಿಳೆಯ ಕಥೆ
ಅನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಿಗೆ ಹೆಚ್ಚು ಫೈನಾನ್ಸ್ ಚಾರ್ಜ್
ಅನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಿಗೆ ಎಸ್ಬಿಐ ಫೈನಾನ್ಸ್ ಶುಲ್ಕಗಳನ್ನು ಹೆಚ್ಚಿಸುತ್ತಿದೆ. ಶೌರ್ಯ ಕಾರ್ಡ್ ಮತ್ತು ಡಿಫೆನ್ಸ್ ಕಾರ್ಡ್ ಹೊರತುಪಡಿಸಿ ಉಳಿದೆಲ್ಲಾ ಅನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಲ್ಲಿ ಫೈನಾನ್ಸ್ ಚಾರ್ಜ್ ತಿಂಗಳಿಗೆ ಶೇ. 3.75ರಷ್ಟಿರುತ್ತದೆ.
ಫೈನಾನ್ಸ್ ಚಾರ್ಜ್ ಎಂದರೆ ಬಡ್ಡಿದರ. ಬಿಲ್ ಕಟ್ಟದೇ ಬಾಕಿ ಉಳಿಸಿಕೊಳ್ಳುವ ಹಣಕ್ಕೆ ಮಾಸಿಕವಾಗಿ ಬಡ್ಡಿ ಹಾಕಲಾಗುತ್ತದೆ. ಇಲ್ಲಿ ಅನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಎಂದರೆ ಯಾವುದೇ ಹಣಕಾಸು ಭದ್ರತೆ ಇಲ್ಲದೇ ನೀಡಲಾಗುವ ಕಾರ್ಡ್. ಸಾಮಾನ್ಯವಾಗಿ ಬಳಕೆಯಲ್ಲಿ ಇರುವ ಬಹುತೇಕ ಕ್ರೆಡಿಟ್ ಕಾರ್ಡ್ಗಳೂ ಅನ್ಸೆಕ್ಯೂರ್ಡ್ ಕಾರ್ಡ್ಗಳೇ.
ಇದನ್ನೂ ಓದಿ: ಎಸ್ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ
ಇದೇ ವೇಳೆ, ಕ್ಲಬ್ ವಿಸ್ತಾರ ಎಸ್ಬಿಐ ಕ್ರೆಡಿಟ್ ಕಾರ್ಡ್,ಕ್ಲಬ್ ವಿಸ್ತಾರಾ ಎಸ್ಬಿಐ ಕ್ರೆಡಿಟ್ ಕಾರ್ಡ್ ಪ್ರೈಮ್ ಅನ್ನು ವಿತರಿಸುವುದನ್ನು ನಿಲ್ಲಿಸಲಾಗಿದೆ. ಸೆಪ್ಟೆಂಬರ್ 28ರಿಂದ ಈ ಎರಡು ಕ್ರೆಡಿಟ್ ಕಾರ್ಡ್ಗಳನ್ನು ನೀಡಲಾಗುತ್ತಿಲ್ಲ. ಈ ಮೊದಲೇ ಈ ಕಾರ್ಡ್ಗಳನ್ನು ಹೊಂದಿದವರು ಚಿಂತಿಸುವ ಅವಶ್ಯಕತೆ ಇಲ್ಲ. ಆ ಕಾರ್ಡ್ ಬಳಕೆ ಮುಂದುವರಿಸಬಹುದು. ಹೊಸ ಕಾರ್ಡ್ ಮಾತ್ರವೇ ಸಿಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ