ಜೈಪುರ್, ಅಕ್ಟೋಬರ್ 29: ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ಸ್ ಕಂಪನಿ ಇತಿಹಾಸ ಸೃಷ್ಟಿಸಿದೆ. ಸೆಮಿಕಂಡಕ್ಟರ್ ಮೆಮೋರಿ ಚಿಪ್ (Memory Chip) ಉತ್ಪಾದನೆ ಮಾಡಿದ ಮಾರುಕಟ್ಟೆಗೆ ಸಾಗಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆಗೆ ಅದು ಬಾಜನವಾಗಿದೆ. ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್ಗಿಂತ ಮುಂಚೆ ಭಾರತದಲ್ಲಿ ಇದು ಉತ್ಪಾದನೆ ಮಾಡಿ ಸೈ ಎನಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿ (Bhiwadi) ಅಕ್ಟೋಬರ್ ಮೊದಲ ವಾರದಲ್ಲಿ ಅದರ ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕದಲ್ಲಿ ಚಿಪ್ಗಳನ್ನು ತಯಾರಿಸುವ ಕೆಲಸ ಆರಂಭವಾಗಿತ್ತು. ಈಗಾಗಲೇ ಮೈಕ್ರೋ ಎಸ್ಡಿ ಕಾರ್ಡ್ಗಳನ್ನು (Micro SD) ವಿವಿದ ಇ ಕಾಮರ್ಸ್ ಪ್ಲಾಟ್ಫಾರ್ಮ್ಗಳಿಗೆ ಸರಬರಾಜು ಮಾಡಲಾಗಿದೆ.
‘ಮೇಡ್ ಇನ್ ಇಂಡಿಯಾ ಮೈಕ್ರೋ ಎಸ್ಡಿ ಕಾರ್ಡ್ಗಳನ್ನು ಮಾರಿದ ಮೊದಲ ಕಂಪನಿ ಎನಿಸಿದ್ದೇವೆ. ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ನಮಗೆ ಸಿಕ್ಕಿದ ಸ್ಪಂದನೆ ಅದ್ವಿತೀಯವಾದುದು,’ ಎಂದು ಸಹಸ್ರ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ಅಮೃತ್ ಮನ್ವಾನಿ ಹೇಳಿದ್ದಾರೆ.
ಭಿವಾಡಿಯಲ್ಲಿ ಇರುವ ಸಹಸ್ರ ಸೆಮಿಕಂಡಕ್ಟರ್ ಘಟಕದಲ್ಲಿ ಸದ್ಯ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಶೇ. 30ರಷ್ಟು ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಯುವ ನಿರೀಕ್ಷೆ ಇದೆ. ಮುಂದಿನ ಆರೇಳು ತಿಂಗಳಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಸಲು ಗುರಿ ಇಡಲಾಗಿದೆ.
ಇದನ್ನೂ ಓದಿ: ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ
ಮೊದಲ ಹಂತದಲ್ಲಿ ಮೈಕ್ರೋ ಎಸ್ಡಿ ಕಾರ್ಡ್ಗಳನ್ನು ತಯಾರಿಸಲಾಗುತ್ತದೆ. ಎರಡನೇ ಹಂತದಲ್ಲಿ ಇಂಟರ್ನಲ್ ಮೆಮೊರಿ ಚಿಪ್ನಂತರ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ನಡೆಯಲಿದೆ.
ಅಮೆರಿಕದ ಮೈಕ್ರೋನಾನ್ ಸಂಸ್ಥೆ ಗುಜರಾತ್ನಲ್ಲಿ ಹೊಸ ಚಿಪ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಅದಕ್ಕಾಗಿ 825 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇಲ್ಲಿ DRAM and NAND ಚಿಪ್ಗಳನ್ನು ತಯಾರಿಸಲಾಗುತ್ತದೆ. 2024ರ ಅಂತ್ಯದೊಳಗೆ ಉತ್ಪಾದನೆ ಶುರುವಾಗುವ ಸಾಧ್ಯತೆ ಇದೆ.
ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ ನಾಲ್ಕು ವರ್ಷಾದ್ಯಂತ ಭಾರತದಲ್ಲಿ ಒಟ್ಟು 400 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರಿನಲ್ಲಿ ಹೊಸ ಎಂಜಿನಿಯರಿಂಗ್ ಸೆಂಟರ್ ತೆರೆಯಲಿದೆ.
ಗೂಗಲ್ನ ಪಿಕ್ಸೆಲ್ ಸ್ಮಾರ್ಟ್ಫೋನ್ಗಳಿಗೆ ಮುಂದಿನ ದಿನಗಳಲ್ಲಿ ಮೇಡ್ ಇನ್ ಇಂಡಿಯಾ ಟೆನ್ಸಾರ್ ಚಿಪ್ಗಳ (tensor chip) ಅಳವಡಿಕೆ ಆಗಲಿದೆ. ಭಾರತದಲ್ಲಿ ಡಿಸೈನ್ ಮಾಡಲಾದ ಟೆನ್ಸಾರ್ ಚಿಪ್ಗಳ ಹೊಸ ಆವೃತ್ತಿಯನ್ನು ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ಇನ್ನು, ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂಡಿ) ಐದು ವರ್ಷದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಬೆಂಗಳೂರಿನಲ್ಲಿ ಎಎಂಡಿಯ ಅತಿದೊಡ್ಡ ಡಿಸೈನ್ ಘಟಕ ಸಿದ್ಧವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ