AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವತ್ತು ಆರ್​ಬಿಐ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಪದಗ್ರಹಣ; ಮುಂದಿನ ಎಂಪಿಸಿಯಿಂದ ಬಡ್ಡಿದರ ಇಳಿಸುವ ನಿರೀಕ್ಷೆ

Expectations from new RBI governor Sanjay Malhotra: ಆರ್​ಬಿಐನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಡಿ. 11ರಂದು ಅಧಿಕಾರ ವಹಿಸಿಕೊಂಡಿದ್ದಾರೆ. 26ನೇ ಆರ್​ಬಿಐ ಗವರ್ನರ್ ಆದ ಅವರು ಮೂರು ವರ್ಷ ಕಾರ್ಯಾವಧಿ ಹೊಂದಿದ್ದಾರೆ. ಬ್ಯೂರೋಕ್ರಸಿ ವ್ಯವಸ್ಥೆಯಲ್ಲಿ ಬೆಳೆದಿರುವ ಸಂಜಯ್ ಮಲ್ಹೋತ್ರಾ ನಾಯಕತ್ವದಲ್ಲಿ ಆರ್​ಬಿಐ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ...

ಇವತ್ತು ಆರ್​ಬಿಐ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಪದಗ್ರಹಣ; ಮುಂದಿನ ಎಂಪಿಸಿಯಿಂದ ಬಡ್ಡಿದರ ಇಳಿಸುವ ನಿರೀಕ್ಷೆ
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 11, 2024 | 2:04 PM

Share

ನವದೆಹಲಿ, ಡಿಸೆಂಬರ್ 11: ಭಾರತೀಯ ರಿಸರ್ವ್ ಬ್ಯಾಂಕ್​ನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಇಂದು ಬುಧವಾರ ಪದಗ್ರಹಣ ಮಾಡಿದ್ದಾರೆ. ಹಿಂದಿನ ಗವರ್ನರ್ ಶಕ್ತಿಕಾಂತ ದಾಸ್ ಅವರ ಸೇವಾವಧಿ ನಿನ್ನೆ (ಡಿ. 10) ಮುಗಿದಿತ್ತು. ಇಂದಿನಿಂದ ಮೂರು ವರ್ಷ ಕಾಲ ಆರ್​ಬಿಐನ ಚುಕ್ಕಾಣಿ ಸಂಜಯ್ ಮಲ್ಹೋತ್ರಾ ಅವರದ್ದಾಗಿದೆ. ಹೊಸ ಆರ್​ಬಿಐ ಗವರ್ನರ್ ಆಗಮನದ ಬಳಿಕ ಬಡ್ಡಿದರಗಳ ಇಳಿಕೆ ಬಗ್ಗೆ ಚರ್ಚೆಗಳು ನಡೆಯತೊಡಗಿವೆ.

ಶಕ್ತಿಕಾಂತ ದಾಸ್ ಅವರಂತೆ ಸಂಜಯ್ ಮಲ್ಹೋತ್ರಾ ಕೂಡ ಬ್ಯೂರೋಕ್ರಸಿಯೊಳಗಿಂದ ಆರ್​ಬಿಐ ಗವರ್ನರ್ ಹುದ್ದೆ ಪಡೆದವರು. ಸಂಜಯ್ ಮಲ್ಹೋತ್ರಾ ಅವರು ಈ ಮುಂಚೆ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಅವರು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ

ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಆರ್​ಬಿಐ ದೃಷ್ಟಿಕೋನದಲ್ಲಿ ಬದಲಾವಣೆ?

ಸಂಜಯ್ ಮಲ್ಹೋತ್ರಾ ಅವರು ನೀತಿ ರೂಪಿಸುವ ವಿಚಾರದಲ್ಲಿ ತುಸು ಸಡಿಲಿಕೆಯ ಧೋರಣೆ ಹೊಂದಿದ್ದಾರೆ ಎಂಬುದು ತಜ್ಞರ ಅನಿಸಿಕೆ. ಅಂದರೆ, ಒಂದು ಪಡೆಯಲು ಮತ್ತೊಂದರಲ್ಲಿ ರಾಜಿಗೆ ಸಿದ್ಧವಿರುವ ಧೋರಣೆ. ಜಪಾನ್​ನ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ಪ್ರಕಾರ ಮುಂದಿನ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಕೆ ಶತಃಸಿದ್ಧವಂತೆ.

ಡಿಸೆಂಬರ್​ನಲ್ಲಿ ನಡೆದಿದ್ದ ಸಭೆಯಲ್ಲಿ ರಿಪೋ ದರ ಯಥಾಸ್ಥಿತಿ ಉಳಿಸಲು ನಿರ್ಧರಿಸಲಾಗಿತ್ತು. ಫೆಬ್ರುವರಿಯಲ್ಲಿ ಮುಂದಿನ ಎಂಪಿಸಿ ಸಭೆ ನಡೆಯಲಿದೆ. ಬಜೆಟ್ ಮಂಡನೆಯಾದ ಕೆಲವೇ ದಿನಗಳಲ್ಲಿ ಎಂಪಿಸಿ ಸಭೆ ನಡೆಯಲಿರುವುದರಿಂದ ಮಹತ್ವದ ನಿರ್ಧಾರಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಗಾತ್ರ ಮುಟ್ಟಲಿರುವ ಭಾರತದ ಮನರಂಜನೆ-ಮಾಧ್ಯಮ ಉದ್ಯಮ

ನೂತನ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರನ್ನು ಬಲ್ಲವರ ಪ್ರಕಾರ, ಅವರು ಹಣಕಾಸು ಹಾಗೂ ಅದರ ಸಂಬಂಧಿತ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಅಸ್ಥೆ ವಹಿಸುತ್ತಾರೆ. ಆಡಳಿತಶಾಹಿ ವ್ಯವಸ್ಥೆಯಿಂದ ಬೆಳೆದು ಬಂದಿರುವ ಅವರು ಸರ್ಕಾರದ ಇರಾದೆಗಳಿಗೆ ಬೇಗ ಸ್ಪಂದಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅವರನ್ನು ಆರ್​ಬಿಐ ಗವರ್ನರ್ ಆಗಿ ನೇಮಿಸಿರಬಹುದು ಎಂದು ಭಾವಿಸಲಡ್ಡಿಯಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​