AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೋಗ್ ಗುಪ್ತಾ, ಐಸಿಸಿಗೆ ಹೊಸ ಸಿಇಒ; ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚುಕ್ಕಾಣಿ ಹಿಡಿದ ಜಿಯೋಸ್ಟಾರ್ ಸಿಇಒ

Sanjog Gupta 7th CEO of International Cricket Council: ಜಿಯೋಸ್ಟಾರ್​ನಲ್ಲಿ ಸಿಇಒ ಆಗಿದ್ದ ಸಂಜೋಗ್ ಗುಪ್ತಾ ಅವರನ್ನು ಐಸಿಸಿ ತನ್ನ ಸಿಇಒ ಆಗಿ ನೇಮಕ ಮಾಡಿದೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರು ಈ ಮುಂಚೆ ಐಸಿಸಿ ಸಿಇಒ ಆಗಿದ್ದರು. ಜನವರಿಯಲ್ಲಿ ಅವರು ರಾಜೀನಾಮೆ ನೀಡುವ ಮುನ್ನ 4 ವರ್ಷ ಆ ಸ್ಥಾನದಲ್ಲಿದ್ದರು.

ಸಂಜೋಗ್ ಗುಪ್ತಾ, ಐಸಿಸಿಗೆ ಹೊಸ ಸಿಇಒ; ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚುಕ್ಕಾಣಿ ಹಿಡಿದ ಜಿಯೋಸ್ಟಾರ್ ಸಿಇಒ
ಸಂಜೋಗ್ ಗುಪ್ತಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 07, 2025 | 12:52 PM

Share

ಮುಂಬೈ, ಜುಲೈ 7: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಸೋಮವಾರ ಸಂಜೋಗ್ ಗುಪ್ತಾ (Sanjog Gupta) ಅವರನ್ನು ಸಿಇಒ ಆಗಿ ನೇಮಕ ಮಾಡಿದೆ. ಸಂಜೋಗ್ ಅವರು ಜಿಯೋಸ್ಟಾರ್​​ನ ಸ್ಪೋರ್ಟ್ಸ್ ಮತ್ತು ಲೈವ್ ಎಕ್ಸ್​​ಪೀರಿಯನ್ಸ್ ವಿಭಾಗದ ಸಿಇಒ ಆಗಿದ್ದರು. ಮಹತ್ತರ ಬೆಳವಣಿಗೆಯಲ್ಲಿ ಸಂಜೋಗ್ ಅವರನ್ನು ಐಸಿಸಿ ಸೆಳೆದುಕೊಂಡಿದೆ. ಸಂಜೋಗ್ ಅವರು ಐಸಿಸಿಯ ಏಳನೇ ಸಿಇಒ ಆಗಿದ್ದಾರೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ (Geoff Allardice) ಅವರು ಈ ಮುಂಚೆ ನಾಲ್ಕು ವರ್ಷ ಸಿಇಒ ಆಗಿದ್ದರು. ಜನವರಿಯಲ್ಲಿ ಅವರು ರಾಜೀನಾಮೆ ನೀಡಿದ ಬಳಿಕ ಆ ಹುದ್ದೆ ಖಾಲಿ ಉಳಿದಿತ್ತು.

ಐಸಿಸಿ ಸಿಇಒ ಸ್ಥಾನಕ್ಕೆ 25 ದೇಶಗಳಿಮದ 2,500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜ ನೇತೃತ್ವದ ನಾಮಿನೇಶನ್ಸ್ ಕಮಿಟಿ 12 ಅಭ್ಯರ್ಥಿಗಳನ್ನು ಶಾರ್ಟ್​​ಲಿಸ್ಟ್ ಮಾಡಿತು. ನಂತರ, ಸಂಜೋಗ್ ಗುಪ್ತಾ ಅವರ ಹೆಸರನ್ನು ಸಿಇಒ ಸ್ಥಾನಕ್ಕೆ ಶಿಫಾರಸು ಮಾಡಲಾಯಿತು. ಛೇರ್ಮನ್ ಜಯ್ ಶಾ ಅವರು ಅನುಮೋದನೆ ನೀಡಿದ ಬಳಿಕ ಐಸಿಸಿ ಸಿಇಒ ಆಗಿ ಸಂಜೋಗ್ ಅವರನ್ನು ನೇಮಕ ಮಾಡಲಾಯಿತು.

ಇದನ್ನೂ ಓದಿ: Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್​​ನಲ್ಲಿ ನಿರ್ಮಾಣ

ಜಿಯೋ ಸ್ಟಾರ್​​ನಲ್ಲಿ ಇದ್ದ ಸಂಜೋಗ್ ಗುಪ್ತಾ ಅವರು ಐಸಿಸಿಗೆ ಹೆಚ್ಚಿನ ಆದಾಯ ತಂದುಕೊಡಬಲ್ಲ ವ್ಯಾವಹಾರಿಕ ಜಾಣ್ಮೆ ಹೊಂದಿರುವುದರಿಂದ ಸಿಇಒ ಆಗಿ ನೇಮಕ ಮಾಡಿರಬಹುದು. ‘ಸಂಜೋಗ್ ಗುಪ್ತಾ ಅವರು ಸ್ಪೋರ್ಟ್ಸ್ ಸ್ಟ್ರಾಟಿಜಿ ಮತ್ತು ವಾಣಿಜ್ಯೀಕರಣದಲ್ಲಿ ಹೊಂದಿರುವ ಅಪಾರ ಅನುಭವವು ಐಸಿಸಿಗೆ ಬಹಳ ಉಪಯುಕ್ತವಾಗಲಿದೆ’ ಎಂದು ಐಸಿಸಿ ಛೇರ್ಮನ್ ಜಯ್ ಶಾ ಹೇಳಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಇದ್ದ ವ್ಯಕ್ತಿಯೊಬ್ಬರು ಐಸಿಸಿಗೆ ಸಿಇಒ ಆಗಿರುವುದು ಪ್ರಾಯಶಃ ಇದೇ ಮೊದಲಿರಬೇಕು. 2028ರ ಲಾಸ್ ಏಂಜಲಿಸ್ ಒಲಿಂಪಿಕ್ ಗೇಮ್ಸ್​​ನನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಒಳಗೊಂಡಿರುವುದು, ಹಾಗೂ ಕ್ರಿಕೆಟ್​ನ ವಾಣಿಜ್ಯೀಕರಣ (commercialization) ಹೊಸ ಸ್ತರಕ್ಕೆ ಏರುತ್ತಿರುವುದು, ಇವುಗಳ ಹಿನ್ನೆಲೆಯಲ್ಲಿ ಗುಪ್ತಾ ಅವರು ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಆಗಿ ಜವಾಬ್ದಾರಿ ಹೊತ್ತಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು

ಜಿಯೋಸ್ಟಾರ್​​ನಲ್ಲಿ ಸಂಜೋಗ್ ಗುಪ್ತಾ ಸ್ಥಾನಕ್ಕೆ ಇಶಾನ್ ಚಟರ್ಜಿ

ಹಾಟ್​ಸ್ಟಾರ್ ಮತ್ತು ಜಿಯೋದ ಬ್ರಾಡ್​ಕ್ಯಾಸ್ಟಿಂಗ್ ಬ್ಯುಸಿನೆಸ್​​ಗಳು ವಿಲೀನಗೊಂಡ ನಂತರ ಉದಯವಾದ ಜಿಯೋಸ್ಟಾರ್ ಸಂಸ್ಥೆ ಸಾಕಷ್ಟು ಬಂಡವಾಳ ಹಾಕಿದೆ. ಈ ಸಂದರ್ಭದಲ್ಲಿ ಅದು ಇಶಾನ್ ಚಟರ್ಜಿ ಅವರನ್ನು ಸಿಇಒ ಆಗಿ ನೇಮಿಸಿದೆ. ಚಟರ್ಜಿ ಅವರು ಯೂಟ್ಯೂಬ್ ಇಂಡಿಯಾದ ಮುಖ್ಯಸ್ಥರಾಗಿದ್ದು ಕಳೆದ ವರ್ಷ (2024) ಜಿಯೋಸ್ಟಾರ್​ಗೆ ಸೇರ್ಪಡೆಯಾಗಿದ್ದರು. ಈಗ ಸಿಇಒ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ