SAP’s Growth Summit 2023: ಸಣ್ಣ ಉದ್ಯಮಿಗಳಿಗೆ ಬೇಕು ತಂತ್ರಜ್ಞಾನ ನೆರವು; ಪರಿಣಿತರಿಂದ ಬಹಿರಂಗವಾಗಲಿದೆ ಟೆಕ್ನಾಲಜಿ ಬಳಕೆಯ ಸೀಕ್ರೆಟ್

Technology Support To Small Business: ಏಪ್ರಿಲ್ 27ರಂದು ಆನ್​ಲೈನ್ ಮೂಲಕವೇ ಎಸ್​ಎಪಿ ಗ್ರೋತ್ ಸಮಿಟ್ ನಡೆಯಲಿದೆ. ಎಸ್​ಎಪಿಯ ಕ್ಲೌಡ್ ಇಅರ್​ಪಿ ಮೂಲಕ ಯಶಸ್ಸು ಪಡೆದ ಭಾರತೀಯ ಕಂಪನಿಯೊಂದರ ಸಿಇಒ ಸೇರಿದಂತೆ ಹಲವು ಗಣ್ಯರು ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

SAPs Growth Summit 2023: ಸಣ್ಣ ಉದ್ಯಮಿಗಳಿಗೆ ಬೇಕು ತಂತ್ರಜ್ಞಾನ ನೆರವು; ಪರಿಣಿತರಿಂದ ಬಹಿರಂಗವಾಗಲಿದೆ ಟೆಕ್ನಾಲಜಿ ಬಳಕೆಯ ಸೀಕ್ರೆಟ್
ಎಸ್​ಎಪಿ ಗ್ರೋತ್ ಸಮಿಟ್
Updated By: ಡಾ. ಭಾಸ್ಕರ ಹೆಗಡೆ

Updated on: Apr 19, 2023 | 11:00 AM

ನವದೆಹಲಿ: ಭಾರತದ ಆರ್ಥಿಕತೆಗೆ ಸದ್ಯ ಅತಿಹೆಚ್ಚು ಶಕ್ತಿ ತುಂಬಿರುವುದು ಎಸ್​ಎಂಇಗಳು. ಅಂದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು. ಒಂದು ಉದ್ದಿಮೆ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ನಿಖರ ವ್ಯಾವಹಾರಿಕ ಹೆಜ್ಜೆ, ಹಣಕಾಸು ಸವಾಲು ಎದುರಿಸುವ ಶಕ್ತಿ, ಹೊಸ ಟೆಕ್ನಾಲಜಿಯನ್ನು ಅಪ್ಪಿಕೊಳ್ಳುವ ಮನಃಸ್ಥಿತಿ ಇವೇ ಮುಂತಾದವು ಈ ಸಣ್ಣ ಉದ್ದಿಮೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಣ್ಣ ಉದ್ಯಮಿಗಳು ತಂತ್ರಜ್ಞಾನ ಬಳಸಿ ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನು ತಿಳಿಸಿಕೊಡಲು ಏಪ್ರಿಲ್ 27ರಂದು ಎಸ್​ಎಪಿ ಗ್ರೋತ್ ಸಮಿಟ್ (SAP’s Growth Summit 2023) ನಡೆಯಲಿದೆ.

ಎಸ್​ಎಪಿ ಎಂಬುದು ಉದ್ಯಮ ವಲಯಕ್ಕೆ ಸಾಫ್ಟ್​ವೇರ್ ಪರಿಹಾರಗಳನ್ನು ಒದಗಿಸುತ್ತದೆ. ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ. ಒಂದು ಉದ್ದಿಮೆಗೆ ತಂತ್ರಜ್ಞಾನ ನೆರವು ನೀಡಿ ವ್ಯವಹಾರ ವೃದ್ಧಿಸುವ ಬಗ್ಗೆ ಸಲಹೆ ನೀಡುತ್ತದೆ. ಮಧ್ಯಮ ಗಾತ್ರದ ಭಾರತೀಯ ಸ್ಟಾರ್ಟಪ್​ಗಳಿಗೆ ಉತ್ತೇಜನ ಕೊಡಲು ಸ್ಯಾಪ್​ನಿಂದ ಕ್ಲೌಡ್ ಇಆರ್​ಪಿ ಟೆಕ್ನಾಲಜಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಏಪ್ರಿಲ್ 27ರಂದು ಆನ್​ಲೈನ್ ಮೂಲಕವೇ ಎಸ್​ಎಪಿ ಗ್ರೋತ್ ಸಮಿಟ್ ನಡೆಯಲಿದೆ. ಎಸ್​ಎಪಿಯ ಕ್ಲೌಡ್ ಇಅರ್​ಪಿ ಮೂಲಕ ಯಶಸ್ಸು ಪಡೆದ ಭಾರತೀಯ ಕಂಪನಿಯೊಂದರ ಸಿಇಒ ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ, ಎಸ್​ಎಪಿಯ ವಿವಿಧ ನಾಯಕರುಗಳೂ ಈ ಶೃಂಗಸಭೆಯಲ್ಲಿ ಪಾಲ್ಗೊಂಡು ಭಾರತೀಯ ಉದ್ಯಮ ವಲಯದಲ್ಲಿ ತಂತ್ರಜ್ಞಾನದ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.

ಅತ್ಯಾಧುನಿಕ ಮತ್ತು ಪ್ರಬಲ ಕ್ಲೌಡ್ ಟೆಕ್ನಾಲಜಿಯ ನೆರವನ್ನು ವಿವಿಧ ಉದ್ದಿಮೆಗಳು ಹೇಗೆ ಪಡೆಯಬಹುದು? ತಂತ್ರಜ್ಞಾನವನ್ನು ಹೇಗೆಲ್ಲಾ ಬಳಸಬಹುದು? ಎಂಬ ಸಂಗತಿಗಳನ್ನು ನೈಜ ಘಟನೆ ಮತ್ತು ನಿದರ್ಶನಗಳ ಮೂಲಕ ಎಸ್​ಎಪಿ ಗ್ರೋತ್ ಸಮಿಟ್​ನಲ್ಲಿ ತಿಳಿಸಲಾಗುತ್ತದೆ.

SAP’s Growth Summit 2023ಗೆ ನೊಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಎಸ್​ಎಪಿ ಗ್ರೋತ್ ಸಮಿಟ್​ನಲ್ಲಿ ಯಾರೆಲ್ಲಾ ಮಾತನಾಡುತ್ತಾರೆ? ಇಲ್ಲಿದೆ ಪಟ್ಟಿ

  • ಅಭಿಷೇಕ್ ಸಿಂಘ್ವಿ, ರಾಜಸ್ಥಾನ್ ಬೇರಿಯಾಟಸ್ ಲಿ ಕಂಪನಿ ಎಂಡಿ
  • ಆಮಿ ವೆಬ್, ಫ್ಯೂಚರ್ ಟುಡೇ ಇನ್ಸ್​ಟಿಟ್ಯೂಟ್​ನ ಸ್ಥಾಪಕರು ಮತ್ತು ಸಿಇಒ
  • ಪೌಲ್ ಮಾರಿಯಟ್, ಎಸ್​ಎಪಿ ಏಷ್ಯಾ ಪೆಸಿಫಿಕ್ ಜಪಾನ್ ವಿಭಾಗದ ಅಧ್ಯಕ್ಷರು
  • ಜೂಲಿಯಾ ವೈಟ್, ಎಸ್​ಎಪಿ ಎಸ್​ಇ ವಿಭಾಗದ ಚೀಫ್ ಮಾರ್ಕೆಟಿಂಗ್ ಅಂಡ್ ಸಲ್ಯೂಷನ್ಸ್ ಆಫೀಸರ್

ಇವರುಗಳು ಏಪ್ರಿಲ್ 27ರಂದು ಆನ್​ಲೈನ್​ನಲ್ಲಿ ನಡೆಯಲಿರುವ ಎಸ್​ಎಪಿ ಗ್ರೋತ್ ಸಮಿಟ್​ನಲ್ಲಿ ಮಾತನಾಡಲಿದ್ದಾರೆ. ಉದ್ದಿಮೆ ಅಭಿವೃದ್ಧಿಗೆ ಟೆಕ್ನಾಲಜಿ ಹೇಗೆ ಸಹಾಯಕವಾಗಬಲ್ಲುದು ಎಂಬುದನ್ನು ಈ ಪರಿಣಿತರು ತಮ್ಮ ಅನುಭವಗಳ ಮೂಲಕ ಹೇಳಿ ಕೊಡಲಿದ್ದಾರೆ.

 

ಎಸ್​ಎಪಿ ಗ್ರೋತ್ ಸಮಿಟ್​ 2023 ರ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:17 pm, Tue, 18 April 23