Saudi Arabia: ಬ್ಲ್ಯೂ ಹೈಡ್ರೋಜನ್​ಗಾಗಿ ಸೌದಿ ಅರೇಬಿಯಾದಿಂದ 110 ಬಿಲಿಯನ್ ಡಾಲರ್ ನೈಸರ್ಗಿಕ ಅನಿಲ ಯೋಜನೆ ಬಳಕೆ

ಸೌದಿ ಅರೇಬಿಯಾವು 110 ಬಿಲಿಯನ್ ಅಮೆರಿಕನ್ ಡಾಲರ್ ನೈಸರ್ಗಿಕ ಅನಿಲ ಪ್ರಾಜೆಕ್ಟ್ ಅನ್ನು ಬ್ಲ್ಯೂ ಹೈಡ್ರೋಜನ್ ಉತ್ಪಾದನೆಗಾಗಿ ಬಳಸಲಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Saudi Arabia: ಬ್ಲ್ಯೂ ಹೈಡ್ರೋಜನ್​ಗಾಗಿ ಸೌದಿ ಅರೇಬಿಯಾದಿಂದ 110 ಬಿಲಿಯನ್ ಡಾಲರ್ ನೈಸರ್ಗಿಕ ಅನಿಲ ಯೋಜನೆ ಬಳಕೆ
ರಾಜ ಮೊಹ್ಮದ್ ಬಿನ್ ಸಲ್ಮಾನ್ (ಸಂಗ್ರಹ ಚಿತ್ರ)
Updated By: Srinivas Mata

Updated on: Oct 25, 2021 | 5:31 PM

ಹಸಿರು ಇಂಧನ ದೇಶವನ್ನಾಗಿ ಬದಲಾವಣೆ ಮಾಡುವ ಉದ್ದೇಶದಿಂದ ಸೌದಿ ಅರೇಬಿಯಾವು ಅಕ್ಟೋಬರ್ 24ರಂದು ಘೋಷಣೆ ಮಾಡಿದಂತೆ, ವಿಶ್ವದ ಅತ್ಯಂತ ದೊಡ್ಡ ನೈಸರ್ಗಿಕ ಅನಿಲ ಯೋಜನೆಗಳು ಬ್ಲ್ಯೂ ಹೈಡ್ರೋಜನ್ ಉತ್ಪಾದನೆ ಮಾಡಲಿದೆ. ಸೌದಿ ಅರೇಬಿಯಾದ ಇಂಧನ ಸಚಿವ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಮಾತನಾಡಿ, ಅನಿಲದ ಅತಿದೊಡ್ಡ ಪಾಲು 110 ಬಿಲಿಯನ್ ಡಾಲರ್​ ಜಫುರಾ ಡೆವಲಪ್​ಮೆಂಟ್​ನಿಂದ ಬ್ಲ್ಯೂ ಹೈಡ್ರೋಜನ್​ಗೆ ಬಳಸಲಾಗುವುದು ಎಂದು ಹೇಳಿದ್ದಾರೆ ಎಂಬುದಾಗಿ ಬ್ಲೂಮ್​ಬರ್ಗ್ ವರದಿ ಮಾಡಿದೆ. ನೈಸರ್ಗಿಕ ಅನಿಲದ ಮಾರ್ಪಾಟು ಮತ್ತು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುವ ಮೂಲಕ ತಯಾರಿಸಲಾಗುತ್ತದೆ. “ಬ್ಲ್ಯೂ ಹೈಡ್ರೋಜನ್ ವಿಚಾರಕ್ಕೆ ಬಂದರೆ ನಾವು ಅತಿ ದೊಡ್ಡ ಸಾಹಸಿಗಳು. ಅತಿ ದೊಡ್ಡ ಮೊತ್ತದ ಹಣವನ್ನು ತೊಡಗಿಸುತ್ತಿದ್ದೇವೆ. ಜಫುರಾದಲ್ಲಿ ಅದ್ಭುತವಾದ ಅನಿಲ ಸಂಗ್ರಹ ಇದೆ. ಅದನ್ನು ಬಳಸಿ ಬ್ಲ್ಯೂ ಹೈಡ್ರೋಜನ್ ತಯಾರಿಸುತ್ತೇವೆ,” ಎಂದು ರಾಜ ಅಬ್ದುಲ್ ಅಜೀಜ್ ರಿಯಾದ್​ನಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದ ಸಮಯದಲ್ಲಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಜಾಗತಿಕ ತೈಲ ಸರಬರಾಜುದಾರ ದೇಶದಿಂದ ಇಂಥದ್ದೊಂದು ಹೊಸ ನಡೆಯು ಅದರ ಹಿಂದಿನ ಯೋಜನೆಯಿಂದ ಹೇಗೆ ಬದಲಾವಣೆ ಆಗುತ್ತಿದೆ ಎಂಬುದನ್ನು ತೋರಿಸುತ್ತಿದೆ. ಅದೀಗ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG) ಪ್ರಮುಖ ಸರಬರಾಜುದಾರ ಆಗುವ ಕಡೆಗೆ ಆಲೋಚಿಸುತ್ತಿದೆ. ಈ ಇಂಧನವು ತೈಲ ಮತ್ತು ಕಲ್ಲಿದ್ದಲಿಗಿಂತ ಸ್ವಚ್ಛವಾಗಿರುತ್ತದೆ. ಬ್ಲೂಮ್​ಬರ್ಗ್​ಎನ್​ಇಎಫ್ ಪ್ರಕಾರ, 2050ನೇ ಇಸವಿ ಹೊತ್ತಿಗೆ 70,000 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ವಾರ್ಷಿಕ ಮಾರುಕಟ್ಟೆ ಇರಲಿದೆ. ಸೌದಿಯ ಅರಾಮ್ಕೋ ಕಂಪೆನಿ ದೇಶದ ಪೂರ್ವದಲ್ಲಿ ಇರುವ ಜಫುರಾದಲ್ಲಿ ವಿದೇಶೀ ಹೂಡಿಕೆದಾರರಿಗೆ ಮುಕ್ತಗೊಳಿಸಿದೆ. ಈಕ್ವಿಟಿ ಅಥವಾ ಸಾಲಪತ್ರಗಳ ಮೂಲಕ ಹಣ ಸಂಗ್ರಹಿಸಲು ಸಂಸ್ಥೆಯು ಕೆಲಸ ಮಾಡುತ್ತಿದೆ.

ಅಂದಾಜು ಲೆಕ್ಕದ ಪ್ರಕಾರ, ಜಫುರಾ 200 ಟ್ರಿಲಿಯನ್ ಕ್ಯುಬಿಕ್ ಫೀಟ್ ಅನಿಲ ಇರಬಹುದು. ಸೌದಿ ಅರೇಬಿಯಾ ಸಂಸ್ಥೆಯು 2024ರಲ್ಲಿ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ. ಈ ಮಧ್ಯೆ ಅಕ್ಟೋಬರ್ 23ರಂದು ಸೌದಿ ಅರೇಬಿಯಾದ ರಾಜ ಮೊಹ್ಮದ್ ಬಿಲ್ ಸಲ್ಮಾನ್ ಹೇಳಿರುವಂತೆ, 2060ರ ಹೊತ್ತಿಗೆ ವಿಶ್ವದ ಟಾಪ್ ತೈಲ ಆಮದುದಾರ ದೇಶವು ಶೂನ್ಯ ನಿವ್ವಳ ಹೊಗೆಸೂಸುವಂಥ ಸನ್ನಿವೇಶ ಸೃಷ್ಟಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Saudi Aramco: ಸೌದಿ ರಾಜಕುಮಾರನ ಕನಸು ನನಸು ಮಾಡಿದ ಅರಾಮ್ಕೊ; ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ಗೆ