Air India Deal: ಏರ್ಇಂಡಿಯಾ ಷೇರು ಖರೀದಿಯ 18 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಟಾಟಾ ಸನ್ಸ್- ಸರ್ಕಾರ ಸಹಿ
ಏರ್ಇಂಡಿಯಾದ ಷೇರನ್ನು 18000 ಸಾವಿರ ಕೋಟಿ ರೂಪಾಯಿಗೆ ಖರೀದಿ ಮಾಡುವ ಒಪ್ಪಂದಕ್ಕೆ ಟಾಟಾ ಸನ್ಸ್ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಒಪ್ಪಂದಕ್ಕೆ ಸಹಿ ಆಗಿದೆ.
ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ಟಾಟಾ ಸನ್ಸ್‌ನೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸರ್ಕಾರ ಸೋಮವಾರ ಸಹಿ ಹಾಕಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIAPM) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಟ್ವೀಟ್‌ನಲ್ಲಿ, ಏರ್ ಇಂಡಿಯಾದ ಕಾರ್ಯತಂತ್ರ ಹೂಡಿಕೆ ಹಿಂತೆಗೆತಕ್ಕಾಗಿ ಟಾಟಾ ಸನ್ಸ್‌ನೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ ಎಂದು ಹೇಳಿದ್ದಾರೆ. ಅವರ ಟ್ವೀಟ್ ಹೀಗಿದೆ: “ಏರ್ ಇಂಡಿಯಾದ ಕಾರ್ಯತಂತ್ರದ ಹೂಡಿಕೆ ಹಿಂತೆಗೆತಕ್ಕಾಗಿ ಟಾಟಾ ಸನ್ಸ್‌ನೊಂದಿಗೆ ಸರ್ಕಾರವು ಇಂದು ಷೇರು ಖರೀದಿ ಒಪ್ಪಂದಕ್ಕೆ ಸಹಿ ಮಾಡಿದೆ.” ಈ ಒಪ್ಪಂದವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ AISATS ಮಾರಾಟವನ್ನು ಒಳಗೊಂಡಿದೆ. ಸ್ಪೈಸ್‌ಜೆಟ್ ಪ್ರವರ್ತಕ ಅಜಯ್ ಸಿಂಗ್ ನೇತೃತ್ವದ ಒಕ್ಕೂಟ ರೂ. 15,100 ಕೋಟಿಗೆ ಮಾಡಿದ್ದ ಆಫರ್ ಅನ್ನು ಟಾಟಾ ಸೋಲಿಸಿತು. ಅಂದಹಾಗೆ ನಷ್ಟವನ್ನು ಉಂಟುಮಾಡುತ್ತಿದ್ದ ಏರ್ಇಂಡಿಯಾದಿಂದ ತನ್ನ ಶೇ 100ರಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರವು ನಿಗದಿಪಡಿಸಿದ ಮೀಸಲು ಬೆಲೆ ರೂ. 12,906 ಕೋಟಿ ಆಗಿತ್ತು.
ಟಾಟಾ ಕಂಪೆನಿ ಹಿಡಿತದಲ್ಲಿ ಇರುವ ಮೂರನೇ ಏರ್‌ಲೈನ್ ಬ್ರ್ಯಾಂಡ್ ಏರ್ ಇಂಡಿಯಾ ಆಗಲಿದೆ. ಇದು ಈಗಾಗಲೇ ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಅಂದಹಾಗೆ ವಿಸ್ತಾರವು ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನೊಂದಿಗೆ ಸೇರಿ ನಡೆಸುತ್ತಿರುವ ಜಂಟಿ ಉದ್ಯಮವಾಗಿದೆ. 2003-04ರ ನಂತರ ಇದು ಮೊದಲ ಖಾಸಗೀಕರಣವಾಗಿದೆ. ಸರ್ಕಾರವು ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ನಿಂದ ನೀಡಿದ್ದ ಪ್ರಸ್ತಾಪವನ್ನು ಸ್ವೀಕರಿಸಿತು. ಇದು ಉಪ್ಪಿನಿಂದ-ಸಾಫ್ಟ್‌ವೇರ್ ಕಂಪೆನಿಯ ತನಕ ಉದ್ಯಮ ನಡೆಸುತ್ತದೆ. ಈ ತಿಂಗಳ ಆರಂಭದಲ್ಲಿ ತಿಳಿಸಿರುವಂತೆ, ರೂ. 2,700 ಕೋಟಿ ನಗದು ಪಾವತಿ ಮತ್ತು ಏರ್‌ಲೈನ್‌ನ ಸಾಲದ ರೂ. 15,300 ಕೋಟಿಗಳನ್ನು ಟಾಟಾ ಸನ್ಸ್ ತೆಗೆದುಕೊಳ್ಳಲಿದೆ.
ಲೆಟರ್ ಆಫ್ ಇಂಟೆಂಟ್ (LoI)- ಅಂದರೆ ಮಾರಾಟ ಉದ್ದೇಶ ಪತ್ರವನ್ನು (ಲೋಐ) ಟಾಟಾ ಸಮೂಹಕ್ಕೆ ನೀಡಲಾಗಿದ್ದು, ಸರ್ಕಾರವು ತನ್ನ ಶೇಕಡಾ 100ರಷ್ಟು ಪಾಲನ್ನು ಮಾರಾಟ ಮಾಡುವ ಇಚ್ಛೆಯನ್ನು ದೃಢಪಡಿಸಿದೆ.
ಇದನ್ನೂ ಓದಿ: Air India Bid Winner: ವೆಲ್ಕಮ್ ಬ್ಯಾಕ್ ಏರ್ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ