Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ

‘ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ’ ಎಂದು ರತನ್ ಟಾಟಾ ಪತ್ರವನ್ನು ಮುಗಿಸಿದ್ದಾರೆ.

Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ
ಏರ್​ ಇಂಡಿಯಾ ವಿಮಾನ ಮತ್ತು ರತನ್ ಟಾಟಾ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 08, 2021 | 6:26 PM

ಏರ್​ ಇಂಡಿಯಾ ಬಿಡ್​ ಗೆಲುವನ್ನು ಟಾಟಾ ಸನ್ಸ್​ ಕಂಪನಿಯ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರವೊಂದನ್ನು ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ. ‘Welcome Back, Air India’ (ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ) ಎಂಬ ಆಪ್ತ ಸಾಲುಗಳೊಂದಿಗೆ ಪತ್ರವನ್ನು ಮುಗಿಸಿದ್ದಾರೆ. ಜೆಆರ್​ಡಿ ಟಾಟಾ ಅವರು ವಿಮಾನದ ಮುಂದೆ ನಿಂತಿರುವ ಐತಿಹಾಸಿಕ ಚಿತ್ರವನ್ನು ತಮ್ಮ ಪತ್ರದೊಂದಿಗೆ ಸೇರಿಸಿದ್ದಾರೆ.

ಏರ್​ ಇಂಡಿಯಾ ಸಂಸ್ಥೆಯು ಮತ್ತೆ ಟಾಟಾ ಗ್ರೂಪ್​ ಭಾಗವಾಗುತ್ತಿರುವುದು ದೊಡ್ಡ ಸುದ್ದಿ. ಏರ್​ ಇಂಡಿಯಾ ಸಂಸ್ಥೆಯನ್ನು ಮತ್ತೆ ಕಟ್ಟಲು ಸಾಕಷ್ಟು ಪರಿಶ್ರಮ ಬೇಕು. ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಗ್ರೂಪ್​ಗೆ ಇದು ಮತ್ತಷ್ಟು ಅವಕಾಶಗಳನ್ನು ವಿಸ್ತರಿಸಲಿದೆ ಎಂದು ರತನ್ ಟಾಟಾ ಹೇಳಿದ್ದಾರೆ.

ಶ್ರೀಯುತ ಜೆಆರ್​ಡಿ ಟಾಟಾ ಅವರ ನಾಯಕತ್ವದಲ್ಲಿ ಏರ್​ ಇಂಡಿಯಾ ವಿಶ್ವದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದು ಎನಿಸಿತ್ತು. ಇದೇ ಪ್ರತಿಷ್ಠೆಯನ್ನು ಸಂಸ್ಥೆಗೆ ಮರಳಿ ತಂದುಕೊಡಲು ಟಾಟಾ ಗ್ರೂಪ್ ಪ್ರಯತ್ನಿಸಲಿದೆ. ನಮ್ಮ ನಡುವೆ ಜೆಆರ್​ಡಿ ಟಾಟಾ ಇಂದು ಇದ್ದಿದ್ದರೆ ಅವರಿಗೆ ಅತ್ಯಂತ ಸಂತೋಷವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಕೆಲ ಉದ್ಯಮಗಳನ್ನು ಖಾಸಗಿ ರಂಗಕ್ಕೆ ಮುಕ್ತಗೊಳಿಸುವ ಸರ್ಕಾರದ ಇತ್ತೀಚೆಗಿನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವ ರತನ್ ಟಾಟಾ, ‘ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ’ ಎಂದು ಪತ್ರವನ್ನು ಮುಗಿಸಿದ್ದಾರೆ.

ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ

ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್​ 18,000 ಕೋಟಿಗೆ ಇವಿ ಕೋಟ್ ಸಲ್ಲಿಸಿತ್ತು. ಏರ್​ ಇಂಡಿಯಾ ಕಂಪನಿಯ ಬಿಡಿಂಗ್​ನಲ್ಲಿ ಟಾಟಾ ಸನ್ಸ್​ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು. ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್​ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದ್ದು, ಏರ್​ ಇಂಡಿಯಾ ಖಾಸಗೀಕರಣದ ಕುರಿತು ಇಷ್ಟು ವರ್ಷ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.

ಇದನ್ನೂ ಓದಿ: Air India: ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ ಇದನ್ನೂ ಓದಿ: ಏರ್​ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಬಿಡ್: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

Published On - 5:25 pm, Fri, 8 October 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್