ಉಳಿತಾಯ ಖಾತೆಯು ನೀವು ಬ್ಯಾಂಕ್‌ನೊಂದಿಗೆ ತೆರೆಯಬಹುದಾದ ಒಂದು ರೀತಿಯ ಹಣದ ಖಾತೆಯಾಗಿದೆ. ಉಳಿತಾಯ ಖಾತೆಗಳು ನಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಹಲವಾರು ಬ್ಯಾಂಕ್‌ಗಳು ಇರುವುದರಿಂದ ಜನರು ತಮಗೆ ಯಾವ ಬ್ಯಾಂಕ್ ಖಾತೆ ಉತ್ತಮ ಎಂದು ಗೊಂದಲಕ್ಕೊಳಗಾಗಬಹುದು. ಅದಕ್ಕಾಗಿ, ನೀವು ಪರಿಶೀಲನೆಗಳನ್ನು ನಡೆಸಿ ಬ್ಯಾಂಕ್ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ. ಒಂದೊಮ್ಮೆ ನೀವು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಇಚ್ಛಿಸುತ್ತೀರಿ ಎಂದಾದರೆ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯುವಲ್ಲಿ ಮುಂದಾಗಿದೆ. ಇದರ ಪ್ರಯೋಜನಗಳೇನು ಎಂಬೂದನ್ನು ನೋಡೋಣ.
SAG ಇನ್ಫೋಟೆಕ್‌ನ ಎಂಡಿ ಅಮಿತ್ ಗುಪ್ತಾ ಹೇಳುವಂತೆ ಭಾರತದಲ್ಲಿ ಜನರು ವಿವಿಧ ಬ್ಯಾಂಕ್‌ಗಳಲ್ಲಿ ಬಹು ಉಳಿತಾಯ ಖಾತೆಗಳನ್ನು ತೆರೆಯಬಹುದು ಎಂದು ಹೇಳುತ್ತಾರೆ. ನೀವು ಎಷ್ಟು ಉಳಿತಾಯ ಖಾತೆಗಳನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲದಿದ್ದರೂ, ಒಬ್ಬ ವ್ಯಕ್ತಿಗೆ ಮೂರಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರಬಾರದು ಎಂದು ಸಲಹೆಯನ್ನೂ ನೀಡಲಾಗುತ್ತದೆ, ಏಕೆಂದರೆ ಅನೇಕ ಖಾತೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ ಎಂದು ಅಮಿತ್ ಗುಪ್ತಾ ಹೇಳುತ್ತಾರೆ.
ಬಹು ಖಾತೆಗಳು ಹಣಕಾಸಿನ ಉಳಿತಾಯ ಮತ್ತು ಮನೆಯ ವೆಚ್ಚಗಳಿಗಾಗಿ ಖರ್ಚು ಮಾಡುವ ಹಣವನ್ನು ಪ್ರತ್ಯೇಕಿಸಲು ನಿಮಗೆ ಸಹಾಯ ಮಾಡಬಹುದು. ಬಹು ಉಳಿತಾಯ ಖಾತೆಗಳನ್ನು ಹೊಂದಿರುವುದು ನಿಮಗೆ ಏನು ಪ್ರಯೋಜನ ಎಂದು ಅಮಿತ್ ಗುಪ್ತಾ ವಿವರಿಸುತ್ತಾರೆ:
ಹಣಕಾಸಿನ ಸಮರ್ಥ ನಿರ್ವಹಣೆ: ಮಗುವಿನ ಶಿಕ್ಷಣ, ತುರ್ತು ನಿಧಿ, ಮಾಸಿಕ ವೆಚ್ಚಗಳು ಮತ್ತು ಮುಂತಾದವುಗಳಂತಹ ವಿಭಿನ್ನ ಹಣಕಾಸಿನ ಗುರಿಗಳನ್ನು ನೀವು ಹೊಂದಿರಬಹುದು. ಪ್ರತಿ ಗುರಿಗೆ ಪ್ರತ್ಯೇಕ ಖಾತೆಗಳನ್ನು ಹೊಂದಿರುವ ನೀವು ವಿವಿಧ ಗುರಿಗಳಿಗಾಗಿ ನಿಮ್ಮ ಉಳಿತಾಯವನ್ನು ನಿರ್ವಹಿಸಲು ಮತ್ತು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ. ಇದು ನಿಮ್ಮ ತಪ್ಪಾದ ಖರ್ಚುವೆಚ್ಚಗಳನ್ನು ಉಳಿತಾಯ ಮಾಡುವಂತೆ ಮಾಡಲಿದೆ.
ಗುರಿಗಳಿಗಾಗಿ ಸ್ವಯಂಚಾಲಿತ ಉಳಿತಾಯ: ವಿಭಿನ್ನ ಗುರಿಗಳಿಗಾಗಿ ವಿಭಿನ್ನ ಖಾತೆಗಳನ್ನು ಹೊಂದಿಸಿದ ನಂತರ, ನೀವು ನಿಮ್ಮ ಮುಖ್ಯ ಖಾತೆಯಿಂದ ಇತರ ಖಾತೆಗಳಿಗೆ ನಿಗದಿತ ಆಧಾರದ ಮೇಲೆ ಹಣವನ್ನು ಸ್ವಯಂಚಾಲಿತವಾಗಿ ವರ್ಗಾಯಿಸಬಹುದು. ನೀವು ಉದ್ಯೋಗಸ್ಥರಾಗಿದ್ದರೆ, ನಿಮ್ಮ ಅಕೌಂಟ್ಗೆ ವೇತನ ಕ್ರೆಡಿಟ್ ಆದ ನಂತರ ನೀವು ತೆರೆದ ಉಳಿತಾಯ ಖಾತೆಗಳಿಗೆ ಹಣವನ್ನು ಉಳಿತಾಯವಾಗಿ ವರ್ಗಾವಣೆ ಮಾಡಿಕೊಳ್ಳಿ. ನಿಮ್ಮ ಗುರಿಗಳಿಗಾಗಿ ನೀವು ಉಳಿಸಿದ ನಂತರ ವೈಯಕ್ತಿಕ ಖರ್ಚು ಮಾಡಿ. ವಿವಿಧ ಗುರಿಗಳಿಗಾಗಿ ಉಳಿಸುವಾಗ ನಿಮ್ಮ ಹಣಕಾಸಿನ ನಿರ್ವಹಣೆ, ಮೇಲ್ವಿಚಾರಣೆ ಮತ್ತು ನಿಗಾ ಇಡುವುದನ್ನು ಸುಲಭಗೊಳಿಸುತ್ತದೆ.
ಡೆಬಿಟ್ ಕಾರ್ಡ್: ಇದು ನಿರ್ದಿಷ್ಟ ಹಿಂಪಡೆಯುವ ಮಿತಿಯನ್ನು ಹೊಂದಿದ್ದು, ತುರ್ತು ಸಂದರ್ಭಗಳಲ್ಲಿ ಬಹಳಷ್ಟು ಹಣವನ್ನು ಹಿಂಪಡೆಯಲು ನಿಮಗೆ ಅನುಮತಿಸದಿರಬಹುದು. ವಿವಿಧ ಉಳಿತಾಯ ಖಾತೆಗಳು ನಿಮಗೆ ಬಹು ಡೆಬಿಟ್ ಕಾರ್ಡ್‌ಗಳನ್ನು ನೀಡಬಹುದು, ಅಂತಹ ಸಂದರ್ಭಗಳಲ್ಲಿ ನೀವು ಅದನ್ನು ಬಳಸಬಹುದು.
ವಿಮಾ ರಕ್ಷಣೆ: ಚಾರ್ಟರ್ಡ್ ಅಕೌಂಟೆಂಟ್ ರಾಜೇಂದರ್ ವಾಧ್ವಾ ಹೇಳುವ ಪ್ರಕಾರ, ಬ್ಯಾಂಕ್ನ ಕೆಟ್ಟ ಸಂದರ್ಭದಲ್ಲಿ ಒಟ್ಟು ವಿಮಾ ರಕ್ಷಣೆಯು ಪ್ರತಿ ಬ್ಯಾಂಕ್ ಖಾತೆಗೆ 5 ಲಕ್ಷವಾಗಿರುತ್ತದೆ. ಈ ಮೊತ್ತ ಮೊದಲ 1 ಲಕ್ಷ ಆಗಿತ್ತು. ಸದ್ಯ 5ಲಕ್ಷ ಇದೆ. ಆದ್ದರಿಂದ ನೀವು ಬ್ಯಾಂಕಿನ ದಿವಾಳಿತನದ ಸಂದರ್ಭದಲ್ಲಿ ಕೆಟ್ಟ ಸಾಲಗಳ ಅಪಾಯವನ್ನು ಕಡಿಮೆ ಮಾಡುತ್ತೀರಿ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ