AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Canara Bank: ಆರ್​ಬಿಐ ರೆಪೋ ದರ ಏರಿಕೆ ಎಫೆಕ್ಟ್, ಕೆನರಾ ಬ್ಯಾಂಕ್ ಸಾಲದ ಬಡ್ಡಿ ದರ ಹೆಚ್ಚಳ

Canara bank: ಕೆನರಾ ಬ್ಯಾಂಕ್ ಎಂಸಿಎಲ್ಆರ್ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಗರಿಷ್ಠ ಶೇ. 0.15ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದಿಂದ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಏರಿಕೆಯಾಗಲಿದೆ. ಸಾಲ ಪಡೆದುಕೊಳ್ಳುವ ಗ್ರಾಹಕ ಈಗ ಇರುವ ಬಡ್ಡಿ ದರಷಕ್ಕಿಂತ ಹೆಚ್ಚಿನ ಹಣ ನೀಡಬೇಕಾಗುತ್ತದೆ.

Canara Bank: ಆರ್​ಬಿಐ ರೆಪೋ ದರ ಏರಿಕೆ ಎಫೆಕ್ಟ್, ಕೆನರಾ ಬ್ಯಾಂಕ್ ಸಾಲದ ಬಡ್ಡಿ ದರ ಹೆಚ್ಚಳ
Canara Bank
TV9 Web
| Edited By: |

Updated on:Sep 07, 2022 | 5:56 PM

Share

ದೆಹಲಿ: ಕೆನರಾ ಬ್ಯಾಂಕ್ ಎಂಸಿಎಲ್ಆರ್ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಗರಿಷ್ಠ ಶೇ. 0.15ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದಿಂದ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಏರಿಕೆಯಾಗಲಿದೆ. ಸಾಲ ಪಡೆದುಕೊಳ್ಳುವ ಗ್ರಾಹಕ ಈಗ ಇರುವ ಬಡ್ಡಿ ದರಷಕ್ಕಿಂತ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಸೆ. 7ರಿಂದಲೇ ಹೊಸ ದರ ಅನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ. ಒಂದು ವರ್ಷದ ಅವಧಿಯ ಎಂಸಿಎಲ್ ಆರ್ ಆಧಾರಿತ ಸಾಲಕ್ಕೆ ಅನ್ವಯವಾಗಲಿದ್ದು ಈ ಹಿಂದೆ ಬಡ್ಡಿ ದರ ಶೇ. 7.65 ಇತ್ತು ಈಗ ಅದು ಶೇ. 7.75 ಕ್ಕೆ ಏರಿಕೆಯಾಗಲಿದೆ. ವಾಹನ ಸಾಲ, ಗೃಹ ಸಾಲ, ಪರ್ಸನಲ್ ಲೋನ್ ಸಮತೋಲಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ನ್ಯೂ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಲೋನ್ ಎಂದರೇನು?

ಸರಳವಾಗಿ ಹೇಳುವುದಾದರೆ ಇದನ್ನು ಕನಿಷ್ಠ ಬಡ್ಡಿ ದರದ ಸಾಲ ಎನ್ನಬಹುದು. ಬ್ಯಾಂಕ್ ಇರಲಿ ಅಥವಾ ಹಣಕಾಸು ಸಂಸ್ಥೆ ಇರಲಿ ಇಷ್ಟು ಕಡಿಮೆ ದರದಲ್ಲಿ ಬೇರೆಯವರಿಗೆ ಸಾಲ ನೀಡುವುದಿಲ್ಲ. ದೀರ್ಘಾವಧಿ ವ್ಯವಹಾರಕ್ಕೆ ಇದು ಯೋಗ್ಯವಲ್ಲ ಎಂದೇ ಭಾವಿಸಿಕೊಳ್ಳಬೇಕಾಗುತ್ತದೆ. ಈ ಸಾಲದ ಅಡಿಯಲ್ಲಿ ಬ್ಯಾಂಕ್ ಗಳು ಪ್ರತಿ ತಿಂಗಳು ತಮ್ಮ ಬಡ್ಡಿ ದರವನ್ನು ಘೋಷಣೆ ಮಾಡುತ್ತಿರಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2016 ರ ತನ್ನ ಹಣಕಾಸು ವರ್ಷದಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿತ್ತು.

ಕೆನರಾ ಬ್ಯಾಂಕ್ ಶೇಕಡ 0.15ರಷ್ಟು ಅಧಿಕ ಮಾಡಿದ್ದು ಆರ್ ಬಿಐ ರೆಪೋ ದರ ಏರಿಕೆ ನಂತರದ ಪ್ರಮುಖ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಯ ಹಲವು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು.

Published On - 5:55 pm, Wed, 7 September 22

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು