2022ರ ಫೆಬ್ರವರಿಯಲ್ಲಿ ಪ್ರಮುಖ ಭಾರತೀಯ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆಯ ಬಡ್ಡಿ ದರವನ್ನು ಅಪ್ಡೇಟ್ ಮಾಡಿವೆ. ಈ ಬ್ಯಾಂಕ್ಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿದೊಡ್ಡ ಭಾರತೀಯ ವಾಣಿಜ್ಯ ಬ್ಯಾಂಕ್ ಆಗಿರುವುದರಿಂದ ಮತ್ತು ಅದರ ಶಾಖೆಗಳು ಭಾರತದ ವಿವಿಧ ಭಾಗದಲ್ಲಿ ಕಾಣಿಸುತ್ತದೆ. ಹೊಸ ಉಳಿತಾಯ ಖಾತೆ ಬಡ್ಡಿದರಕ್ಕೆ (Interest Rate) ಬಂದಾಗ ಈ ಬ್ಯಾಂಕ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೋಲಿಸಿದಲ್ಲಿ ಹೇಗೆ ನಿಲ್ಲುತ್ತವೆ ಎಂಬುದನ್ನು ಉಳಿತಾಯ ಖಾತೆದಾರರಿಗೆ ತಿಳಿಯುವುದು ಮುಖ್ಯವಾಗಿದೆ.
ಎಸ್ಬಿಐ ಉಳಿತಾಯ ಖಾತೆ ಬಡ್ಡಿ ದರ:
ವೆಬ್‌ಸೈಟ್‌ನ ಪ್ರಕಾರ, ಎಸ್‌ಬಿಐನಲ್ಲಿ ಉಳಿತಾಯ ಖಾತೆ ಬಡ್ಡಿ ದರವು 31ನೇ ಮೇ 2020ರಿಂದ ಜಾರಿಗೆ ಬಂದಿದ್ದು, ರೂ. 1 ಲಕ್ಷದವರೆಗಿನ ಬ್ಯಾಲೆನ್ಸ್‌ಗಳನ್ನು ಹೊಂದಿರುವ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳು ಶೇಕಡಾ 2.70 ಆಗಿದ್ದರೆ, ರೂ. 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬ್ಯಾಲೆನ್ಸ್‌ಗಳನ್ನು ಹೊಂದಿರುವ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳು ಸಹ ಶೇಕಡಾ 2.70 ಆಗಿದೆ.
ಎಚ್ಡಿಎಫ್ಸಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ:
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಉಳಿತಾಯ ಖಾತೆಯ ಬಡ್ಡಿ ದರವನ್ನು ಬದಲಾಯಿಸಿದೆ ಮತ್ತು ಹೊಸ ದರಗಳು 2ನೇ ಫೆಬ್ರವರಿ 2022ರಿಂದ ಜಾರಿಗೆ ಬಂದಿವೆ. ಎಚ್ಡಿಎಫ್ಸಿ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ರೂ. 50 ಲಕ್ಷಕ್ಕಿಂತ ಕಡಿಮೆ ಉಳಿತಾಯದ ಮೇಲಿನ ಹೊಸ ಎಚ್ಡಿಎಫ್ಸಿ ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿ ದರವು 50 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಶೇಕಡಾ 3 ಆಗಿದೆ. 50 ಲಕ್ಷ ರೂಪಾಯಿಯಿಂದ ರೂ. 1000 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಶೇ 3.50 ಬಡ್ಡಿ ದರ ಇದೆ. 1000 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯದ ಬಾಕಿಯು ಈಗ ವಾರ್ಷಿಕ ಶೇ 4.50ರ ಬಡ್ಡಿ ದೊರೆಯುತ್ತಿದೆ.
ಪಿಎನ್ಬಿ ಉಳಿತಾಯ ಬ್ಯಾಂಕ್ ಖಾತೆ ಬಡ್ಡಿ ದರ:
ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿದರಗಳನ್ನು ಈ ತಿಂಗಳು ಬದಲಾಯಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ಉಳಿತಾಯ ಖಾತೆ ಬಡ್ಡಿ ದರವು 16ನೇ ಫೆಬ್ರವರಿ 2022ರಿಂದ ಅನ್ವಯ ಆಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವೆಬ್‌ಸೈಟ್‌ನ ಪ್ರಕಾರ, ರೂ. 10 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ನಿಧಿ ಖಾತೆಯ ಬ್ಯಾಲೆನ್ಸ್‌ಗೆ ಹೊಸ ಪಿಎನ್ಬಿ ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿ ದರವು ಪ್ರತಿ ವರ್ಷಕ್ಕೆ ಶೇ 2.75ರ ಬಡ್ಡಿಯನ್ನು ಪಡೆಯುತ್ತದೆ. ರೂ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಾರ್ಷಿಕ ಶೇ 2.80ರ ಬಡ್ಡಿ ದರ ದೊರೆಯುತ್ತದೆ.
ಯೆಸ್ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ:
8 ಫೆಬ್ರವರಿ 2022ರಿಂದ ಅನ್ವಯವಾಗುವಂತೆ ಯೆಸ್ ಬ್ಯಾಂಕ್‌ನಲ್ಲಿ ಹೊಸ ಉಳಿತಾಯ ಖಾತೆಯ ಬಡ್ಡಿ ದರದ ಪ್ರಕಾರ, ರೂ. 1 ಲಕ್ಷಕ್ಕಿಂತ ಕಡಿಮೆ ಇರುವ ಬ್ಯಾಲೆನ್ಸ್‌ಗೆ ವಾರ್ಷಿಕ ಶೇ 4ರ ಬಡ್ಡಿ ಸಿಗುತ್ತದೆ. ಯೆಸ್ ಬ್ಯಾಂಕ್ ಉಳಿತಾಯ ಖಾತೆಯ ಬ್ಯಾಲೆನ್ಸ್ ರೂ. 1 ಲಕ್ಷದಿಂದ ರೂ. 10 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಶೇ 4.25 ರಷ್ಟಿದ್ದು, ರೂ. 10 ಲಕ್ಷಕ್ಕಿಂತ ಹೆಚ್ಚಿನ ಉಳಿತಾಯದ ಬ್ಯಾಲೆನ್ಸ್‌ಗೆ ಆದರೆ ರೂ. 1 ಕೋಟಿಗಿಂತ ಕಡಿಮೆಗೆ ವಾರ್ಷಿಕವಾಗಿ ಶೇ 4.75ರ ಬಡ್ಡಿ ದೊರೆಯುತ್ತದೆ. ಆದರೆ ರೂ. 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ, ಆದರೆ 25 ಕೋಟಿ ರೂಪಾಯಿಗಿಂತ ಕಡಿಮೆ ಉಳಿತಾಯ ಖಾತೆಯಲ್ಲಿ ಇದ್ದಾಗ ವಾರ್ಷಿಕ ಶೇ 5ರ ಬಡ್ಡಿ ದರ ನೀಡಲಾಗುತ್ತದೆ. ಯೆಸ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಬಡ್ಡಿ ದರವನ್ನು ಉಳಿತಾಯ ಖಾತೆಯಲ್ಲಿನ ದೈನಂದಿನ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ಇದನ್ನೂ ಓದಿ: Children Savings Account: ಮಕ್ಕಳಿಗಾಗಿ ಇರುವ ವಿವಿಧ ಬ್ಯಾಂಕ್ನ ಉಳಿತಾಯ ಖಾತೆಗಳು, ಅದರ ಅನುಕೂಲಗಳು
Published On - 7:26 pm, Sat, 19 February 22