SBI Card Dumdar Dus Offer: ಎಸ್​ಬಿಐ ಕಾರ್ಡ್​ನಿಂದ ಆನ್​ಲೈನ್​ ಶಾಪಿಂಗ್​ಗೆ ಆಫರ್​ ಘೋಷಣೆ; ಅಕ್ಟೋಬರ್ 3ರಿಂದ ಶುರು

| Updated By: Srinivas Mata

Updated on: Oct 01, 2021 | 6:21 PM

ಅಕ್ಟೋಬರ್​ 3ರಿಂದ ಆರಂಭವಾಗುವ ವಿವಿಧ ಹಬ್ಬದ ಋತುವಿಗೆ ಎಸ್​ಬಿಐ ಕ್ರೆಡಿಟ್​ ಕಾರ್ಡ್ ದಮ್​​ದಾರ್ ದಸ್ ಫೆಸ್ಟಿವ್ ಆನ್​ಲೈನ್​ ಶಾಪಿಂಗ್ ಆಫರ್ ಘೋಷಣೆ ಮಾಡಲಾಗಿದೆ.

SBI Card Dumdar Dus Offer: ಎಸ್​ಬಿಐ ಕಾರ್ಡ್​ನಿಂದ ಆನ್​ಲೈನ್​ ಶಾಪಿಂಗ್​ಗೆ ಆಫರ್​ ಘೋಷಣೆ; ಅಕ್ಟೋಬರ್ 3ರಿಂದ ಶುರು
ಸಾಂದರ್ಭಿಕ ಚಿತ್ರ
Follow us on

ಅಮೆಜಾನ್, ಫ್ಲಿಪ್​​ಕಾರ್ಟ್​ ಸೇರಿದಂತೆ ಇತರ ಇ-ಕಾಮರ್ಸ್​ಗಳಿಂದ ಹಬ್ಬದ ಋತುವಿನ ಮಾರಾಟವು ಅಕ್ಟೋಬರ್ 3ನೇ ತಾರೀಕಿನಿಂದ ಶುರು ಆಗಲಿದೆ. ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಮೂರು ದಿನಗಳ ಹಬ್ಬದ ಕ್ಯಾಶ್​ಬ್ಯಾಕ್​ ಅನ್ನು ಎಲ್ಲ ದೇಶೀಯ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳಿಗೆ ಮುಂದಿನ ತಿಂಗಳಿಂದ ಆನ್​ಲೈನ್​ ಶಾಪಿಂಗ್​ಗಾಗಿ ನೀಡಲಿದೆ. ಈ ಬಗ್ಗೆ ಸೆಪ್ಟೆಂಬರ್ 29ನೇ ತಾರೀಕಿನ ಬುಧವಾರದಂದು ಘೋಷಣೆ ಮಾಡಿದೆ. ಮೂರು ದಿನಗಳ ಮೆಗಾ ಶಾಪಿಂಗ್ ಹಬ್ಬದ ಆಫರ್ ದಮ್‌ದಾರ್ ದಸ್ ಅಕ್ಟೋಬರ್ 3ರಂದು ಆರಂಭವಾಗಲಿದೆ. ಇದು ಒಂದು ರೀತಿಯ ಆನ್‌ಲೈನ್ ಶಾಪಿಂಗ್ ಹಬ್ಬವಾಗಿದೆ. ಎಸ್‌ಬಿಐ ಕಾರ್ಡ್ ರೀಟೇಲ್ ಕಾರ್ಡ್​ದಾರರಿಗೆ ಯಾವುದೇ ದೇಶೀಯ ಇ-ಕಾಮರ್ಸ್ ಸೈಟ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡಲು ಸ್ವಾತಂತ್ರ್ಯ ನೀಡುತ್ತದೆ ಎಂದು ಹೇಳಿದೆ.

ಕೇವಲ ಒಂದು ಅಥವಾ ಎರಡು ಇ-ಕಾಮರ್ಸ್ ಪೋರ್ಟಲ್‌ಗಳಿಗೆ ಕೊಡುಗೆಗಳು ಸೀಮಿತವಾಗಿಲ್ಲ. ಗ್ರಾಹಕರು ತಮ್ಮ ಖರೀದಿಯಲ್ಲಿ ಶೇ 10ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಅದು ಹೇಳಿದೆ. ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳು, ಟಿವಿ ಮತ್ತು ದೊಡ್ಡ ಉಪಕರಣಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್​ಲೆಟ್‌ಗಳು, ಗೃಹೋಪಯೋಗಿ ವಸ್ತುಗಳು, ಅಡುಗೆ ವಸ್ತುಗಳು, ಫ್ಯಾಷನ್ ಮತ್ತು ಜೀವನಶೈಲಿ, ಕ್ರೀಡೆ ಮತ್ತು ಫಿಟ್‌ನೆಸ್‌ಗಳಂತಹ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಖರೀದಿಯ ಮೇಲೆ ಕ್ಯಾಶ್‌ಬ್ಯಾಕ್ ಇರುತ್ತದೆ.

ಎಸ್‌ಬಿಐ ಕಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಮಮೋಹನ್ ರಾವ್ ಅಮರ ಮಾತನಾಡಿ, “ನಮ್ಮ ಉದ್ದೇಶ ಚುರುಕುಗೊಳಿಸಲು ಡೇಟಾ ವಿಶ್ಲೇಷಣೆಯ ಶಕ್ತಿಯನ್ನು ಅವಲಂಬಿಸಿದ್ದೇವೆ ಮತ್ತು ಬಳಸಿಕೊಳ್ಳುತ್ತೇವೆ. ಒಂದು ಅವಧಿಯಲ್ಲಿ, ವಿಶಾಲವಾದ ಪ್ಲಾಟ್​ಫಾರ್ಮ್​ಗಳು ಮತ್ತು ಉತ್ಪನ್ನ ವರ್ಗಗಳು, ವಿಶೇಷವಾಗಿ ಹಬ್ಬದ ಅವಧಿಯಲ್ಲಿ ನಮ್ಮ ಕಾರ್ಡ್​ದಾರರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ,” ಎಂದಿದ್ದಾರೆ. ಎಸ್‌ಬಿಐ ಕಾರ್ಡ್ ಕಾರ್ಡ್ ಹೊಂದಿರುವವರಿಗೆ ಅನುಕೂಲಕರ, ತಡೆರಹಿತ ಮತ್ತು ಸುರಕ್ಷಿತ ಪಾವತಿ ಪರಿಹಾರಗಳನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಈ ಕೊಡುಗೆಯ ಮೂಲಕ ತನ್ನ ಬ್ರ್ಯಾಂಡ್ ಬದ್ಧತೆಯನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಇಎಂಐ ವಹಿವಾಟಿನ ಜನಪ್ರಿಯತೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಆನ್‌ಲೈನ್ ಮರ್ಚೆಂಟ್ ಇಎಂಐ ವಹಿವಾಟಿನಲ್ಲಿಯೂ ಈ ಕೊಡುಗೆ ಲಭ್ಯ ಇರುತ್ತದೆ. ಹಬ್ಬದ ಆಫರ್ 2021 ಅನ್ನು ವರ್ಧಿಸಲು, ತನ್ನ ಬಹುಮುಖತೆ ಮತ್ತು ಹಾಸ್ಯಮಯ ಗುಣಲಕ್ಷಣಗಳೊಂದಿಗೆ ಬ್ರಾಂಡ್ ಸಂದೇಶವನ್ನು ಸಲೀಸಾಗಿ ಉಚ್ಚರಿಸುವ ನಟ ಜಾವೇದ್ ಜಾಫೆರಿ ಒಳಗೊಂಡ ಡಿಜಿಟಲ್ ಅಭಿಯಾನವನ್ನು ಆರಂಭಿಸಲು ಎಸ್‌ಬಿಐ ಕಾರ್ಡ್ ಯೋಜಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: SBI Debit Card: ಎಸ್​ಬಿಐ ಡೆಬಿಟ್​ ಕಾರ್ಡ್​ ಮೂಲಕ ಖರೀದಿಸಿದ್ದನ್ನು ಇಎಂಐ ಆಗಿ ಬದಲಿಸಿಕೊಳ್ಳೋದು ಹೇಗೆ?

Published On - 10:05 pm, Wed, 29 September 21