SBI customers SGB purchase: SBI ಗ್ರಾಹಕರು ಮನೆಯಲ್ಲಿ ಕೂತು ಗ್ರಾಮ್​ಗೆ ರೂ 4727ಕ್ಕೆ ಸವರನ್ ಗೋಲ್ಡ್ ಬಾಂಡ್ ಖರೀದಿ

|

Updated on: May 18, 2021 | 6:53 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಮನೆಯಲ್ಲಿ ಕೂತುಕೊಂಡೇ ಸವರನ್ ಗೋಲ್ಡ್ ಬಾಂಡ್ ಅನ್ನು ಗ್ರಾಮ್​ಗೆ ರೂ. 4727ರಂತೆ ಖರೀದಿಸಬಹುದು.

SBI customers SGB purchase: SBI ಗ್ರಾಹಕರು ಮನೆಯಲ್ಲಿ ಕೂತು ಗ್ರಾಮ್​ಗೆ ರೂ 4727ಕ್ಕೆ ಸವರನ್ ಗೋಲ್ಡ್ ಬಾಂಡ್ ಖರೀದಿ
ಪ್ರಾತಿನಿಧಿಕ ಚಿತ್ರ
Follow us on

ಸವರನ್ ಗೋಲ್ಡ್ ಬಾಂಡ್ಸ್ (SGB) ಮೊದಲ ಕಂತು ಮೇ 17ರಿಂದ ಸಬ್​ಸ್ಕ್ರಿಪ್ಷನ್​ ಶುರುವಾಗಿದೆ. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಆನ್​ಲೈನ್​ ವ್ಯವಸ್ಥೆ ಮೂಲಕ ಹೂಡಿಕೆ ಮಾಡಬಹುದು. ಯಾರು ಆನ್​ಲೈನ್​ನಲ್ಲಿ ಅಪ್ಲೈ ಮಾಡಲು ಬಯಸುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್​ಗೆ 50 ರೂಪಾಯಿ ರಿಯಾಯಿತಿ ದೊರೆಯುತ್ತದೆ. ಯಾವುದೇ ಜಿಎಸ್​ಟಿ ಅಥವಾ ಮೇಕಿಂಗ್ ಚಾರ್ಜ್ ಇರಲ್ಲ. ಎಲ್ಲ ಎಕ್ಸ್​ಚೇಂಜ್​ಗಳಲ್ಲೂ ಈ ಬಾಂಡ್​ಗಳ ವಹಿವಾಟು ಆಗುತ್ತದೆ. ಮೇ 17ನೇ ತಾರೀಕಿನಿಂದ ಆರಂಭವಾಗಿರುವ ಸಬ್​ಸ್ಕ್ರಿಪ್ಷನ್ ಮೇ 21ರ ತನಕ ಇರುತ್ತದೆ, ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ ಗ್ರಾಹಕರು ಎಸ್​ಬಿಐ ಪೋರ್ಟಲ್​ನ ಇ- ಸರ್ವೀಸಸ್ ಟ್ಯಾಬ್ ಅಡಿಯಲ್ಲಿ ಆನ್​ಲೈನ್ ಮೂಲಕ ಸವರನ್ ಗೋಲ್ಡ್ ಬಾಂಡ್​ನಲ್ಲಿ ಹೂಡಿಕೆ ಮಾಡಬಹುದು. ಅಥವಾ 1800112211 ಕರೆ ಮಾಡಬಹುದು ಅಥವಾ bank.sbi ಭೇಟಿ ನೀಡಬಹುದು.

ಒಂದು ಸಲ ಸವರನ್ ಗೋಲ್ಡ್ ಬಾಂಡ್​ನಲ್ಲಿ ಹೂಡಿಕೆ ಮಾಡಬೇಕು ಅಂತ ಗ್ರಾಹಕರು ನಿರ್ಧರಿಸಿದ ಮೇಲೆ ಎಷ್ಟು ಗ್ರಾಮ್ ಖರೀದಿಸಬೇಕು ಎಂದು ತೀರ್ಮಾನ ಮಾಡಬೇಕು. ಆ ನಂತರ ಹಣ ಪಾವತಿ ಎಷ್ಟು ಮಾಡಬೇಕಾಗುತ್ತದೆ ಎಂಬ ಸಂಗತಿ ತಿಳಿಯುತ್ತದೆ. ಖಾತೆಯಿಂದ ಮೊತ್ತ ಕಡಿತ ಆಗುತ್ತದೆ ಮತ್ತು ಗ್ರಾಹಕರು/ಹೂಡಿಕೆದಾರರು ಆನ್​ಲೈನ್​ನಲ್ಲೇ ತಕ್ಷಣ ಸರ್ಟಿಫಿಕೇಟ್ ದೊರೆಯುತ್ತದೆ. 10 ವರ್ಷ ಮೇಲ್ಪಟ್ಟ ಎಸ್​ಬಿಐನ ಯಾವುದೇ ಗ್ರಾಹಕರು ಈ ಬಾಂಡ್ ಖರೀದಿಸಬಹುದು. ಆದರೆ ಕೆಲವು ಮೂಲ ದಾಖಲಾತಿಗಳ ಲಭ್ಯತೆ ಮೇಲೆ ಆಧಾರಪಟ್ಟಿರುತ್ತದೆ.

ಒಂದು ಗ್ರಾಮ್​ಗೆ ರೂ. 4777 ಎಂದು ದರ ನಿಗದಿ ಮಾಡಲಾಗಿದೆ. ಯಾರು ಆನ್​ಲೈನ್ ಮೂಲಕ ಖರೀದಿ ಮಾಡುತ್ತಾರೋ ಅವರಿ 4727 ರೂಪಾಯಿ ಆಗುತ್ತದೆ. ವೈಯಕ್ತಿಕ ಹೂಡಿಕೆದಾರರು ಗರಿಷ್ಠ 4 ಕೇಜಿ, ಟ್ರಸ್ಟ್ ಅಥವಾ ದತ್ತಿ ಸಂಸ್ಥೆಗಳಾದಲ್ಲಿ 20 ಕೇಜಿ ತನಕ ಚಿನ್ನ ಖರೀದಿಸಬಹುದು. ಈ ಬಾಂಡ್​ ಅವಧಿ ಎಂಟು ವರ್ಷಗಳದ್ದಾಗಿರುತ್ತದೆ. 5 ವರ್ಷದ ನಂತರ ಮುಂದೆ ಬಡ್ಡಿ ಪಾವತಿ ಮಾಡುವ ದಿನಾಂಕದಲ್ಲಿ ಹೊರ ಬರುವ ಅವಕಾಶ ಇರುತ್ತದೆ.

SGB ವಿತರಣೆ ಆಗುವ ದಿನಾಂಕದಿಂದಲೇ ಬಡ್ಡಿ ಅನ್ವಯ ಆಗುತ್ತದೆ. ಬಾಂಡ್​ನ ಬೆಲೆಯ ಮೇಲೆ ವರ್ಷಕ್ಕೆ ಶೇ 2.50ರಷ್ಟು ವಿತರಿಸಲಾಗುತ್ತದೆ, ಬಡ್ಡಿಯನ್ನು ಆರು ತಿಂಗಳಿಗೊಮ್ಮೆ ನೀಡಲಾಗಿತ್ತದೆ. ಕೊನೆಯ ಕಂತಿನ ಬಡ್ಡಿ ಪಾವತಿ ವೇಳೆ ಅಸಲಿನ ಜತೆಗೆ ಪಾವತಿಸಲಾಗುತ್ತದೆ. ಸವರನ್​ ಗೋಲ್ಡ್​ ಬಾಂಡ್​ ಅನ್ನು ಮತ್ತೆ ಮೇ 24ರಿಂದ ಮೇ 28, ಮೇ 31ರಿಂದ ಜೂನ್ 4, ಜುಲೈ 12ರಿಂದ 16, ಆಗಸ್ಟ್ 9ರಿಂದ 13 ಮತ್ತು ಆಗಸ್ಟ್​ 30ರಿಂದ ಸೆಪ್ಟೆಂಬರ್ 3 ವಿತರಿಸಲಾಗುತ್ತದೆ.

ಇದನ್ನೂ ಓದಿ: Sovereign Gold Bond Scheme 2021- 22: ಸವರನ್ ಗೋಲ್ಡ್ ಬಾಂಡ್ ಮೇ 17ರಿಂದ ಸಬ್​ಸ್ಕ್ರಿಪ್ಷನ್, ಬೆಲೆ ರೂ. 4777

(SBI customers can purchase Soverein Gold Bond (SGB) at Rs 4727 per gram by sitting at home. Know how?)

Published On - 6:51 pm, Tue, 18 May 21