SBI Two Wheeler Loan: ಎಸ್​ಬಿಐನಿಂದ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲ; ಗರಿಷ್ಠ 3 ಲಕ್ಷ ರೂ. ತನಕ ಲಭ್ಯ

SBI Easy Ride: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲವನ್ನು ಒದಗಿಸುವುದಕ್ಕೆ ಯೋಜನೆಯನ್ನು ಆರಂಭಿಸಲಾಗಿದೆ.

SBI Two Wheeler Loan: ಎಸ್​ಬಿಐನಿಂದ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲ; ಗರಿಷ್ಠ 3 ಲಕ್ಷ ರೂ. ತನಕ ಲಭ್ಯ
ಸಾಂದರ್ಭಿಕ ಚಿತ್ರ
Edited By:

Updated on: Nov 02, 2021 | 5:04 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (State Bank Of India) “SBI Easy Ride” ಎಂಬ ಯೋಜನೆಯೊಂದನ್ನು ಆರಂಭ ಮಾಡಿದೆ. ಇದರ ಮೂಲಕವಾಗಿ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲವನ್ನು ನೀಡುತ್ತದೆ. ಬ್ಯಾಂಕ್​ನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್​ ಆದ YONO ಮೂಲಕವಾಗಿ ಗ್ರಾಹಕರು ಸಾಲಕ್ಕಾಗಿ ಅರ್ಜಿ ಹಾಕಿಕೊಳ್ಳಬಹುದು. ಅರ್ಹ ಎಸ್​ಬಿಐ ಗ್ರಾಹಕರು ದ್ವಿಚಕ್ರ ವಾಹನ ಸಾಲವನ್ನು ಪಡೆಯಬಹುದು. ಆನ್​ರೋಡ್​ ಬೆಲೆಯ ಶೇ 85ರಷ್ಟು ಮೊತ್ತವು ಸಾಲವಾಗಿ ದೊರೆಯುತ್ತದೆ. ಅದು ಕೂಡ ಅರ್ಹತೆ ಆಧಾರದ ಮೇಲೆ ಸಿಗುತ್ತದೆ. ಈ ಸಾಲ ಪಡೆಯುವುದಕ್ಕೆ ಬ್ಯಾಂಕ್​ನ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯ ಇಲ್ಲ. ಯೋನೋ ಆ್ಯಪ್​ ಮೂಲಕವೇ ಅಪ್ಲೈ ಮಾಡಬಹುದು.

ಗ್ರಾಹಕರು Easy Ride ಸಾಲಕ್ಕಾಗಿ 3 ಲಕ್ಷ ರೂಪಾಯಿವರೆಗಿನ ಮೊತ್ತಕ್ಕೆ ಅಪ್ಲೈ ಮಾಡಬಹುದು. ಅದಕ್ಕಾಗಿ ವಾರ್ಷಿಕ ಬಡ್ಡಿ ದರ ಶೇ 10.5ರ ಮೇಲ್ಪಟ್ಟು ಇದೆ. ಗರಿಷ್ಠ ಮರುಪಾವತಿ ಅವಧಿ 4 ವರ್ಷಗಳಾಗಿದ್ದು, ಕನಿಷ್ಠ ಮೊತ್ತ 20,000 ರೂಪಾಯಿಯನ್ನು ಪಡೆದುಕೊಳ್ಳಬೇಕು. ಬ್ಯಾಂಕ್​ನಿಂದ ತಿಳಿಸಿರುವ ಪ್ರಕಾರ ಪ್ರತಿ ಲಕ್ಷ ರೂಪಾಯಿಗೆ ಇಎಂಐ ಮೊತ್ತವು ಕನಿಷ್ಠ 2560 ರೂಪಾಯಿ ಬರುತ್ತದೆ. ದೊರೆತ ಸಾಲವನ್ನು ನೇರವಾಗಿ ಡೀಲರ್ ಖಾತೆಗೆ ವಿತರಣೆ ಆಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ದಿನೇಶ್ ಕುಮಾರ್ ಖರ ಮಾತನಾಡಿ, ಗ್ರಾಹಕರ ಬದುಕಿನ ಆರಂಭದ ಹಂತದಲ್ಲಿ ಡಿಜಿಟಲ್ ಸಾಲವನ್ನು ಒದಗಿಸಲಾಗುತ್ತಿದೆ. ಏಕೆಂದರೆ ದ್ವಿಚಕ್ರ ವಾಹನವನ್ನು ಖರೀದಿಸಲು ಸಾಲ ನೀಡಿದರೆ ಆ ಗ್ರಾಹಕರ ಜತೆಗಿನ ಸಂಬಂಧ ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SBI Pensioners Facility: ಪೆನ್ಷನ್​ದಾರರಿಗೆ ಎಸ್​ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ