AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸ್ಟಮರ್ ಕೇರ್ ನಂಬರ್​ಗೆ ಆನ್​ಲೈನ್​ನಲ್ಲಿ ಸರ್ಚ್ ಮಾಡುತ್ತೀರಾ? ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳಬಹುದು, ಹುಷಾರ್..! ಎಸ್​ಬಿಐ ಅಲರ್ಟ್

ಆನ್‌ಲೈನ್‌ನಲ್ಲಿ ಬ್ಯಾಂಕ್ ಕಸ್ಟಮರ್ ಕೇರ್ ಸಂಖ್ಯೆ ಹುಡುಕುವಾಗ ಎಚ್ಚರ! ಸೈಬರ್ ಅಪರಾಧಿಗಳು ನಕಲಿ ಸಹಾಯವಾಣಿಗಳನ್ನು ಸೃಷ್ಟಿಸಿ ಗ್ರಾಹಕರನ್ನು ವಂಚಿಸುತ್ತಾರೆ. SBI ಅಧಿಕೃತ ವೆಬ್‌ಸೈಟ್‌ ಮಾತ್ರ ಬಳಸುವಂತೆ ಎಚ್ಚರಿಸಿದೆ. ಯಾವುದೇ ಕಾರಣಕ್ಕೂ OTP, PIN, CVV ಹಂಚಿಕೊಳ್ಳಬೇಡಿ. ಮೋಸ ಹೋದರೆ ತಕ್ಷಣ 1930 ಅಥವಾ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೂರು ನೀಡಿ. ನಿಮ್ಮ ಬ್ಯಾಂಕ್ ಖಾತೆ ಸುರಕ್ಷತೆಗೆ ಇದು ಅತಿ ಮುಖ್ಯ.

ಕಸ್ಟಮರ್ ಕೇರ್ ನಂಬರ್​ಗೆ ಆನ್​ಲೈನ್​ನಲ್ಲಿ ಸರ್ಚ್ ಮಾಡುತ್ತೀರಾ? ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳಬಹುದು, ಹುಷಾರ್..! ಎಸ್​ಬಿಐ ಅಲರ್ಟ್
ಆನ್​ಲೈನ್​ನಲ್ಲಿ ಸರ್ಚ್Image Credit source: X @SBI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 23, 2026 | 3:30 PM

Share

ನವದೆಹಲಿ, ಅಕ್ಟೋಬರ್ 23: ಬ್ಯಾಂಕ್​ನ ಕಸ್ಟಮರ್ ಕೇರ್ ನಂಬರ್ ಪಡೆಯಲು ನೀವು ಆನ್​ಲೈನ್​ನಲ್ಲಿ ಸರ್ಚ್ ಮಾಡುತ್ತಿರುವಿರಾದರೆ ಜಾಗ್ರತೆ..! ಆನ್​ಲೈನ್ ಈಗ ಸೈಬರ್ ಅಪರಾಧಿಗಳ ದೊಡ್ಡ ಅಡ್ಡೆಯಾಗಿದೆ. ಬಹಳ ಸುಲಭವಾಗಿ ನಕಲಿ ಹೆಲ್ಪ್​ಲೈನ್ ಲಿಸ್ಟಿಂಗ್ ಮಾಡಿ ಬ್ಯಾಂಕ್ ಗ್ರಾಹಕರನ್ನು ಯಾಮಾರಿಸುವ ಕೆಲಸ ಮಾಡುತ್ತಾರೆ. ಇಂಥ ಪ್ರಕರಣಗಳು ಅಲ್ಲಲ್ಲಿ ಜರುಗುತ್ತಲೇ ಇದೆ. ಭಾರತದ ನಂಬರ್ ಒನ್ ಸರ್ಕಾರಿ ಬ್ಯಾಂಕ್ ಆದ ಎಸ್​ಬಿಐ ಈ ಸಂಬಂಧ ಅಡ್ವೈಸರಿಯೊಂದನ್ನು ಬಿಡುಗಡೆ ಮಾಡಿದೆ.

ಆರನೇ ಆವೃತ್ತಿಯ ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ವಿಶೇಷ ಅಭಿಯಾನದ ಭಾಗವಾಗಿ ಎಸ್​ಬಿಐ ಬಿಡುಗಡೆ ಮಾಡಿರುವ ಅಡ್ವೈಸರಿಯಲ್ಲಿ, ಕಸ್ಟಮರ್ ಸಪೋರ್ಟ್ ನಂಬರ್ ವಿಚಾರದಲ್ಲಿ ಗ್ರಾಹಕರು ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಲಾಗಿದೆ.

ಗ್ರಾಹಕರು ಕಸ್ಟಮರ್ ಕೇರ್ ನಂಬರ್​ನಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಎಸ್​ಬಿಐನ ಅಧಿಕೃತ ವೆಬ್​ಸೈಟ್​ಗೆ ಹೋಗಬೇಕು. ಥರ್ಡ್ ಪಾರ್ಟಿ ಪೇಜ್​ಗಳಿಂದ ಮಾಹಿತಿ ಪಡೆಯಲು ಹೋಗಬೇಡಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಕ್ಸ್ ಪೋಸ್ಟ್​ವೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ: ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್

ಆನ್​ಲೈನ್ ಸ್ಕ್ಯಾಮ್​ಗಳು ಹೀಗೆ ಕೆಲಸ ಮಾಡುತ್ತವೆ ನೋಡಿ…

ಸೈಬರ್ ಅಪರಾಧಿಗಳು ಒಂದು ಬ್ಯಾಂಕ್​ನ ನಕಲಿ ನಂಬರ್​ಗಳನ್ನು ಆನ್​ಲೈನ್​ನಲ್ಲಿ ಸಿಗುವ ರೀತಿಯಲ್ಲಿ ಲಿಸ್ಟಿಂಗ್ ಮಾಡುತ್ತಾರೆ. ಬ್ಯಾಂಕೆಂದೇ ಅಲ್ಲ, ಯಾವುದೇ ಪ್ರಮುಖ ಸಂಸ್ಥೆಗಳ ನಕಲಿ ನಂಬರ್ ಸೃಷ್ಟಿಸಿ ಆನ್​ಲೈನ್​ನಲ್ಲಿ ಸಿಗುವ ರೀತಿಯಲ್ಲಿ ಲಿಸ್ಟ್ ಮಾಡಬಹುದು.

ಬ್ಯಾಂಕ್​ನ ಗ್ರಾಹಕರು ಕಸ್ಟಮರ್ ಕೇರ್ ನಂಬರ್ ಪಡೆಯಲು ಆನ್​ಲೈನ್​ನಲ್ಲಿ ಸರ್ಚ್ ಮಾಡಿದಾಗ, ಈ ನಕಲಿ ನಂಬರ್​ಗಳು ಪಟ್ಟಿಯಲ್ಲಿ ಕಾಣಬಹುದು. ಲಿಸ್ಟಿಂಗ್​ನಲ್ಲಿ ಅಸಲಿ ಬ್ಯಾಂಕ್​ನ ನಂಬರೇ ಎಂದು ಅನಿಸುವಷ್ಟು ಸಾಮ್ಯತೆ ಇರುತ್ತದೆ.

ಎಸ್​ಬಿಐನ ಎಕ್ಸ್ ಪೋಸ್ಟ್

ಈ ನಕಲಿ ನಂಬರ್ ಅನ್ನು ಗ್ರಾಹಕ ಕರೆ ಮಾಡಿದಾಗ, ಅಲ್ಲಿಂದ ಬಹಳ ವೃತ್ತಿಪರವಾಗಿ ಮಾತನಾಡಿ ವಿಶ್ವಾಸ ಕುದುರಿಸಬಹುದು. ನಂತರ, ಬ್ಯಾಂಕ್ ಅಕೌಂಟ್ ವಿವರ, ಆ್ಯಪ್ ಡೌನ್​​ಲೋಡ್, ಲಾಗಿನ್, ಒಟಿಪಿ, ಪೇಮೆಂಟ್ ಇತ್ಯಾದಿ ಆಟಗಳನ್ನು ಶುರುವಿಟ್ಟುಕೊಳ್ಳಬಹುದು. ಅವರು ಹೇಳಿದಂತೆ ಕೇಳಿದರೆ ನಿಮ್ಮ ಹಣವೆಲ್ಲವೂ ದುರುಳರ ಪಾಲಾಗಬಹುದು.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು

ನಕಲಿ ಕಸ್ಟಮರ್ ಕೇರ್ ನಂಬರ್ ವಿಷಯದಲ್ಲಿ ಗ್ರಾಹಕರು ಏನು ಮಾಡಬೇಕು?

  • ಗ್ರಾಹಕರು ತಮ್ಮ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ಗೆ ಹೋಗಿ ಮಾಹಿತಿ ಪಡೆಯಬೇಕು. ವೆಬ್​ಸೈಟ್​ನಲ್ಲಿ ಕಾಂಟ್ಯಾಕ್ಟ್ ಅಸ್ (Contact Us) ಎನ್ನುವ ಟ್ಯಾಬ್​ನಲ್ಲಿ ನಿಮಗೆ ಇದರ ಮಾಹಿತಿ ಸಿಗಬಹುದು.
  • ಆನ್​ಲೈನ್​ನಲ್ಲಿ ಕಸ್ಟಮರ್ ಕೇರ್ ನಂಬರ್​ಗೆ ಸರ್ಚ್ ಮಾಡಿದಾಗ ಅದು ಬೇರೆ ವೆಬ್​ಸೈಟ್​ವೊಂದರಲ್ಲಿ ಲಿಸ್ಟ್ ಆಗಿರುವ ನಂಬರ್ ಇದ್ದರೆ ತೆಗೆದುಕೊಳ್ಳಬೇಡಿ.
  • ನೀವು ತಪ್ಪಾದ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿದರೂ, ಜಾಗ್ರತೆ ವಹಿಸಿದರೆ ಮೋಸ ಹೋಗುವುದನ್ನು ತಪ್ಪಿಸಬಹುದು. ಯಾವುದೇ ಒಟಿಪಿ ಕೇಳಿದರೆ ನೀಡಬೇಡಿ. ಕಾರ್ಡ್​ನ ಸಿವಿವಿ, ಪಿನ್ ನಂಬರ್ ಇತ್ಯಾದಿಯನ್ನು ನೀಡಬೇಡಿ.
  • ಅಕಸ್ಮಾತ್ ಯಾರಾದರೂ ಕೂಡ ಎಪಿಕೆ ಫೈಲ್ ಅನ್ನು ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಲು ಹೇಳಿದರೆ ನಿಶ್ಚಿತವಾಗಿ ಅದು ಫ್ರಾಡ್​ಗಳ ಕೆಲಸವಾಗಿರುತ್ತದೆ, ಹುಷಾರ್.

ವಂಚಕರು ಎಂದೆನಿಸಿದರೆ ಮುಂದೇನು ಮಾಡಬೇಕು?

ಒಂದು ವೇಳೆ ನಿಮಗೆ ವಂಚನೆ ನಡೆಯುತ್ತಿದೆ, ಅಥವಾ ನಡೆದಿದೆ ಎಂದೆನಿಸಿದರೆ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್​ನಲ್ಲಿ (cybercrime.gov.in) ದೂರು ನೀಡಿ. ಅಥವಾ 1930 ನಂಬರ್​ಗೆ ಕರೆ ಮಾಡಿ ಮಾಹಿತಿ ನೀಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Fri, 23 October 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!