AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್

ಕೇಂದ್ರ ಸರ್ಕಾರ ಜನವರಿ 1, 2027 ರಿಂದ ಜಾರಿಗೆ ಬರುವಂತೆ ವಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಸಕ್ರಿಯ ಸಿಮ್ ಕಾರ್ಡ್ ಕಡ್ಡಾಯಗೊಳಿಸಿದೆ. ಸೈಬರ್ ವಂಚನೆ ತಡೆಯಲು ಮತ್ತು ವಾರ್ಷಿಕ 22,800 ಕೋಟಿ ರೂ. ನಷ್ಟ ನಿಯಂತ್ರಿಸಲು ಈ "ಸಿಮ್ ಬೈಂಡಿಂಗ್" ನಿಯಮ ಜಾರಿಯಾಗಿದೆ. ಸಿಮ್ ನಿಷ್ಕ್ರಿಯವಾದರೆ ಆ್ಯಪ್ ಕೆಲಸ ಮಾಡುವುದಿಲ್ಲ.

ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್
ಟೆಲಿಗ್ರಾಂ-ವಾಟ್ಸಾಪ್ Image Credit source: wondershare mobile trans
ನಯನಾ ರಾಜೀವ್
|

Updated on: Oct 23, 2026 | 10:36 AM

Share

ನವದೆಹಲಿ, ಅಕ್ಟೋಬರ್ 23: ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್ , ಟೆಲಿಗ್ರಾಂ ಸೇರಿದಂತೆ ವಿವಿಧ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸುವ ಕೋಟ್ಯಂತರ ಭಾರತೀಯ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ದೇಶನ ನೀಡಿದೆ. ಜನವರಿ 1, 2027 ರಿಂದ ಜಾರಿಗೆ ಬರುವಂತೆ, ಯಾವುದೇ ಮೆಸೇಜಿಂಗ್ ಖಾತೆಯು ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಸಕ್ರಿಯ ಸಿಮ್ ಕಾರ್ಡ್ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಎಂದು ದೂರಸಂಪರ್ಕ ಇಲಾಖೆ (DoT) ಕಡ್ಡಾಯಗೊಳಿಸಿದೆ. ಈ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಮತ್ತು ಮೆಸೇಜಿಂಗ್ ಕಂಪನಿಗಳಿಗೆ ಡಿಸೆಂಬರ್ 31, 2026 ರವರೆಗೆ ಗಡುವು ನೀಡಲಾಗಿದೆ.

ಸಿಮ್ ಬೈಂಡಿಂಗ್’ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಈಗಿರುವ ವ್ಯವಸ್ಥೆ: ಪ್ರಸ್ತುತ ವಾಟ್ಸಾಪ್ ಅಥವಾ ಟೆಲಿಗ್ರಾಂ ಇನ್‌ಸ್ಟಾಲ್ ಮಾಡುವಾಗ ಒಟಿಪಿ (OTP) ಮೂಲಕ ಮೊಬೈಲ್ ಸಂಖ್ಯೆಯನ್ನು ಒಮ್ಮೆ ದೃಢೀಕರಿಸಿದರೆ ಸಾಕು. ಆ ನಂತರ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೂ, ಸಿಮ್ ನಿಷ್ಕ್ರಿಯಗೊಂಡರೂ (Inactive) ಕೇವಲ ವೈ-ಫೈ (Wi-Fi) ಇದ್ದರೆ ಆ್ಯಪ್ ಕೆಲಸ ಮಾಡುತ್ತದೆ. ಅಲ್ಲದೆ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಲಿಂಕ್ ಮಾಡಿ ದೀರ್ಘಕಾಲ ಬಳಸಬಹುದು.

ಹೊಸ ನಿಯಮವೇನು?: ಇನ್ನು ಮುಂದೆ ನೀವು ಯಾವ ಮೊಬೈಲ್ ಸಂಖ್ಯೆಯಲ್ಲಿ ಮೆಸೇಜಿಂಗ್ ಖಾತೆ ಹೊಂದಿದ್ದೀರೋ, ಆ ನಿರ್ದಿಷ್ಟ ಸಕ್ರಿಯ ಸಿಮ್ ಕಾರ್ಡ್ ಅದೇ ಫೋನ್‌ನಲ್ಲಿ ಇರಲೇಬೇಕು. ಒಂದು ವೇಳೆ ಸಿಮ್ ಕಾರ್ಡ್ ತೆಗೆದರೆ ಅಥವಾ ಆ ಸಿಮ್ ನಿಷ್ಕ್ರಿಯಗೊಂಡರೆ, ಆ್ಯಪ್ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಯಾವೆಲ್ಲಾ ಆ್ಯಪ್‌ಗಳಿಗೆ ಅನ್ವಯ?: ಮೊಬೈಲ್ ಸಂಖ್ಯೆ ಆಧಾರಿತವಾಗಿ ಕಾರ್ಯನಿರ್ವಹಿಸುವ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ (Signal), ಸ್ನ್ಯಾಪ್‌ಚಾಟ್ (Snapchat), ಶೇರ್‌ಚಾಟ್ (ShareChat), ಜಿಯೋಚಾಟ್ (JioChat), ಅರಟ್ಟೈ (Arattai) ಮತ್ತು ಜೋಶ್ (Josh) ಮುಂತಾದ ಎಲ್ಲಾ ಸಂವಹನ ವೇದಿಕೆಗಳಿಗೆ ಈ ನಿಯಮ ಅನ್ವಯವಾಗಲಿದೆ.

ಇದನ್ನೂ ಓದಿ: ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ

ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿರುವುದು ಏಕೆ?

ವಿದೇಶಗಳಿಂದ ನಡೆಯುವ ಸೈಬರ್ ಕ್ರೈಂ ತಡೆ: ಸೈಬರ್ ವಂಚಕರು ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿ ಒಮ್ಮೆ ವಾಟ್ಸಾಪ್ ಖಾತೆ ಆಕ್ಟಿವೇಟ್ ಮಾಡಿಕೊಳ್ಳುತ್ತಿದ್ದರು. ನಂತರ ಆ ಸಿಮ್ ಕಾರ್ಡ್ ಎಸೆದು, ಕಾಂಬೋಡಿಯಾ, ಮ್ಯಾನ್ಮಾರ್, ಥಾಯ್ಲೆಂಡ್‌ನಂತಹ ವಿದೇಶಗಳಲ್ಲಿ ಕುಳಿತು ಭಾರತೀಯರಿಗೆ ಕರೆ, ಸಂದೇಶ ಕಳುಹಿಸಿ ‘ಡಿಜಿಟಲ್ ಅರೆಸ್ಟ್’, ಹೂಡಿಕೆ ವಂಚನೆ, ಫಿಶಿಂಗ್ ನಡೆಸುತ್ತಿದ್ದರು. ಸಿಮ್ ಇಲ್ಲದಿರುವುದರಿಂದ ಪೊಲೀಸರಿಗೆ ಇವರನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿತ್ತು.

ಭಾರೀ ಆರ್ಥಿಕ ನಷ್ಟ: ದೂರಸಂಪರ್ಕ ಇಲಾಖೆಯ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸೈಬರ್ ವಂಚನೆಗಳಿಂದಾದ ವಾರ್ಷಿಕ ನಷ್ಟವು ಬರೋಬ್ಬರಿ 22,800 ಕೋಟಿ ರೂ.ಗೂ ಅಧಿಕವಾಗಿದೆ. ಈ ನಕಲಿ ಜಾಲಗಳನ್ನು ಬೇರುಸಹಿತ ಕಿತ್ತುಹಾಕಲು ಈ ‘ಸಿಮ್ ಬೈಂಡಿಂಗ್’ ಅನಿವಾರ್ಯವಾಗಿದೆ ಎಂದು ಸಂವಹನ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರ ಶೇಖರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ವಾಟ್ಸಾಪ್ ವೆಬ್ ಮತ್ತು ಲಿಂಕ್ಡ್ ಡಿವೈಸ್‌ಗಳಿಗೆ ಏನಾಗಲಿದೆ?

ಕಚೇರಿಗಳಲ್ಲಿ ಕೆಲಸ ಮಾಡುವಾಗ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ವೆಬ್ (WhatsApp Web) ಬಳಸುವವರಿಗೆ ಭದ್ರತಾ ನಿಯಮಗಳು ಇನ್ನಷ್ಟು ಕಠಿಣವಾಗಲಿವೆ. ಮೂಲ ಫೋನ್‌ನಲ್ಲಿ ಸಿಮ್ ಸಕ್ರಿಯವಾಗಿರದಿದ್ದರೆ ವೆಬ್ ಆವೃತ್ತಿಯೂ ಕೆಲಸ ಮಾಡುವುದಿಲ್ಲ. ದೀರ್ಘಕಾಲ ಲಾಗಿನ್ ಆಗಿ ಉಳಿಯುವುದನ್ನು ತಪ್ಪಿಸಲು ಕಾಲಕಾಲಕ್ಕೆ ಕ್ಯೂಆರ್ ಕೋಡ್ (QR Code) ಮರು-ಸ್ಕ್ಯಾನ್ ಮಾಡುವ ಅಥವಾ ಸ್ವಯಂಚಾಲಿತ ಲಾಗ್‌ಔಟ್ ಆಗುವ ‘ರಿಸ್ಕ್-ಬೇಸ್ಡ್’ ಭದ್ರತಾ ವ್ಯವಸ್ಥೆಯನ್ನು ಕಂಪನಿಗಳು ಜಾರಿಗೆ ತರಲಿವೆ.

ಸಾಮಾನ್ಯ ಬಳಕೆದಾರರು ಏನು ಮಾಡಬೇಕು?

ಸಿಮ್ ಸಕ್ರಿಯವಾಗಿರಲಿ: ನಿಮ್ಮ ಪ್ರೈಮರಿ ಫೋನ್‌ನಲ್ಲಿರುವ ಸಿಮ್ ಕಾರ್ಡ್‌ಗೆ ನಿಯಮಿತವಾಗಿ ರಿಚಾರ್ಜ್ ಮಾಡಿಸಿ, ಅದು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಸಿಮ್ ಸ್ಲಾಟ್ ಇಲ್ಲದ, ಕೇವಲ ವೈ-ಫೈ ಇರುವ ಟ್ಯಾಬ್ಲೆಟ್‌ಗಳಲ್ಲಿ ನೇರವಾಗಿ ಸಿಮ್ ಆಧಾರಿತ ಖಾತೆಗಳನ್ನು ಪ್ರತ್ಯೇಕವಾಗಿ ಬಳಸುವುದು ಕಷ್ಟವಾಗಬಹುದು. ಅವುಗಳನ್ನು ಮುಖ್ಯ ಫೋನ್‌ಗೆ ‘ಲಿಂಕ್ಡ್ ಡಿವೈಸ್’ ಆಗಿ ಮಾತ್ರ ನಿರ್ವಹಿಸಬೇಕಾಗುತ್ತದೆ. ಪದೇ ಪದೇ ಸಿಮ್ ಬದಲಾಯಿಸುವವರು ಅಥವಾ ಹೊಸ ಫೋನ್‌ಗೆ ಬದಲಾಗುವವರು ತಮ್ಮ ಖಾತೆಯ ಮರು-ದೃಢೀಕರಣವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ