AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು

ಸಣ್ಣ ಉದ್ದಿಮೆಗಳು ಗ್ರಾಹಕರನ್ನು ಸೆಳೆಯುವುದು, ಅವರೊಂದಿಗೆ ವ್ಯವಹರಿಸುವುದು, ಅವರನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಸ್ವಂತ ಉದ್ದಿಮೆದಾರರಿಗೆ ಬಹಳ ನೆರವಾಗುತ್ತವೆ. ವಾಟ್ಸಾಪ್ ಕೂಡ ಬಹಳ ಉಪಯುಕ್ತವೆನಿಸುವ ಫೀಚರ್​ಗಳನ್ನು ಹೊಂದಿದೆ. ಯಾವ್ಯಾವ ಫೀಚರ್ಸ್ ಇವೆ, ಇವುಗಳನ್ನು ಹೇಗೆ ಬಳಸುವುದು ಇತ್ಯಾದಿ ಮಾಹಿತಿ ಇಲ್ಲಿದೆ...

ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು
ವಾಟ್ಸಾಪ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2026 | 1:35 PM

Share

ಇವತ್ತು ಬಟ್ಟೆ, ಆಭರಣ, ಆಹಾರವಸ್ತು ಹೀಗೆ ಹಲವು ರೀತಿಯ ಸಣ್ಣ ಉದ್ದಿಮೆಗಳನ್ನು ನಡೆಸುವವರ ಸಂಖ್ಯೆ ಬಹಳ ದೊಡ್ಡದಿದೆ. ಅದರಲ್ಲೂ ಮನೆ ಅಥವಾ ಒಂದು ಸಣ್ಣ ಸ್ಥಳ ಇಟ್ಟುಕೊಂಡು ವ್ಯಾಪಾರ ಮಾಡುವ ಮಂದಿಗೆ ಗ್ರಾಹಕರನ್ನು ಸೆಳೆಯಲು ಸೋಷಿಯಲ್ ಮೀಡಿಯಾವೇ ಪ್ರಮುಖ ಪ್ಲಾಟ್​ಫಾರ್ಮ್ ಆಗಿರುತ್ತದೆ. ಫೇಸ್ಬುಕ್, ಇನ್ಸ್​ಟಾ ಇತ್ಯಾದಿಯಲ್ಲಿ ಮಾರ್ಕೆಟಿಂಗ್ ಮಾಡುತ್ತಾರೆ. ಬಹಳ ಜನರು ಬಹಳ ಅಧಿಕವಾಗಿ ಬಳಸುವ ವಾಟ್ಸಾಪ್ ಕೂಡ ಸಣ್ಣ ಉದ್ದಿಮೆಗಳಿಗೆ ಸಹಕಾರಿಯಾಗುತ್ತದೆ. ವ್ಯಾಪಾರ ವೃದ್ಧಿಸಲು, ಗ್ರಾಹಕರನ್ನು ಸಂತೃಪ್ತಿಪಡಿಸಲು ವಾಟ್ಸಾಪ್​ನಲ್ಲಿ ಅನೇಕರಿಗೆ ಗೊತ್ತೇ ಇಲ್ಲದ ಕೆಲ ಒಳ್ಳೆಯ ಫೀಚರ್ಸ್ ಇವೆ.

ಈಗ ಹಬ್ಬದ ಸೀಸನ್‌ನಲ್ಲಿ ಗ್ರಾಹಕರ ಹುಡುಕಾಟ ಹೆಚ್ಚಿರುತ್ತದೆ. ಈ ಗ್ರಾಹಕರ ನಿರಂತರ ಬೇಡಿಕೆಗಳನ್ನು ನಿಭಾಯಿಸಲು ಮತ್ತು ವಾಟ್ಸಾಪ್ ಚಾಟ್ ಮೂಲಕವೇ ಮಾರಾಟವನ್ನು ಸುಲಭವಾಗಿ ಹೆಚ್ಚಿಸಲು ಸಣ್ಣ ವ್ಯಾಪಾರಿಗಳಿಗೆ ಪ್ರಮುಖ 6 ಸಲಹೆಗಳು ಇಲ್ಲಿವೆ:

ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ

  1. ಕ್ಲಿಕ್-ಟು-ವಾಟ್ಸಾಪ್ ಜಾಹೀರಾತುಗಳ ಬಳಕೆ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ನೇರವಾಗಿ ವಾಟ್ಸಾಪ್ ಚಾಟ್ ಆರಂಭಿಸುವ ಜಾಹೀರಾತುಗಳನ್ನು ಬಳಸಿ. ಇದರಿಂದ ಗ್ರಾಹಕರು ಬೇರೆ ವೆಬ್‌ಸೈಟ್‌ಗೆ ಹೋಗುವ ಬದಲು ಉತ್ಪನ್ನದ ಬೆಲೆ ಹಾಗೂ ಲಭ್ಯತೆಯ ಬಗ್ಗೆ ತಕ್ಷಣವೇ ನಿಮ್ಮೊಂದಿಗೆ ವಾಟ್ಸಾಪ್​ನಲ್ಲಿ ಚಾಟ್ ಮಾಡಲು ಸಾಧ್ಯವಾಗುತ್ತದೆ.
  2. 24/7 ಸ್ವಯಂಚಾಲಿತ ಉತ್ತರಗಳು: ಮಧ್ಯರಾತ್ರಿಯಲ್ಲೂ ಬರುವ ಗ್ರಾಹಕರ ಸಂದೇಶಗಳಿಗೆ ತಕ್ಷಣ ಉತ್ತರಿಸಲು ‘ಮೆಟಾ ಬಿಸಿನೆಸ್ ಏಜೆಂಟ್’ (Meta Business Agent) ಬಳಸಿ. ಇದು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸುವುದಲ್ಲದೆ, ಮಾಲೀಕರ ಗಮನ ಅಗತ್ಯವಿದ್ದಾಗ ತಕ್ಷಣ ಚಾಟ್ ಅನ್ನು ನಿಮಗೆ ಹಸ್ತಾಂತರಿಸುತ್ತದೆ.
  3. ವಾಟ್ಸಾಪ್ ಕ್ಯಾಟಲಾಗ್ ಪ್ರದರ್ಶನ: ಗ್ರಾಹಕರು ಬಣ್ಣ, ಅಳತೆ ಮತ್ತು ಬೆಲೆಗಳನ್ನು ಸುಲಭವಾಗಿ ನೋಡಲು ವಾಟ್ಸಾಪ್ ಕ್ಯಾಟಲಾಗ್ ಬಳಸಬಹುದು. ಇದು ವಿಂಡೋ ಶಾಪಿಂಗ್​ನ ಅನುಭವ ಕೊಡುತ್ತದೆ. ಗ್ರಾಹಕರ ಖರೀದಿಯ ನಿರ್ಧಾರವನ್ನು ವೇಗಗೊಳಿಸುತ್ತದೆ.
  4. ಚಾಟ್ ಒಳಗಡೆಯೇ ಯುಪಿಐ ಪಾವತಿ: ಗ್ರಾಹಕರು ಇಷ್ಟಪಟ್ಟ ಉತ್ಪನ್ನಕ್ಕೆ ಹೆಚ್ಚಿನ ವಿವರ ಪಡೆಯಲು ಮತ್ತು ಪೇಮೆಂಟ್ ಮಾಡಲು ಬೇರೆ ಆ್ಯಪ್‌ಗೆ ಹೋಗಬೇಕಾಗುತ್ತದೆ ಎಂದರೆ ಅವರು ಮರಳಿ ಬರುವ ಖಾತ್ರಿ ಇರುವುದಿಲ್ಲ. ವಾಟ್ಸಾಪ್ ಚಾಟ್​ನಲ್ಲೇ ಪೇಮೆಂಟ್ ಅವಕಾಶ ಕೊಟ್ಟರೆ ಅವರನ್ನು ಹಿಡಿದಿಟ್ಟುಕೊಳ್ಳಬಹುದು. ಅದಕ್ಕಾಗಿ, ವಾಟ್ಸಾಪ್ ಬಿಸಿನೆಸ್ ಪೇಮೆಂಟ್ಸ್ ಅಥವಾ ಮೆಟಾ ಬಿಸಿನೆಸ್ ಏಜೆಂಟ್ ಮೂಲಕ ಒಂದೇ ಟ್ಯಾಪ್‌ನಲ್ಲಿ ನೇರವಾಗಿ ಯುಪಿಐ ಪಾವತಿ ಸ್ವೀಕರಿಸಿ.
  5. ವೈಯಕ್ತಿಕ ಬ್ರಾಡ್‌ಕಾಸ್ಟ್ ಸಂದೇಶಗಳು: ಹಳೆಯ ಗ್ರಾಹಕರಿಗೆ ಮುಂಗಡ ಬುಕಿಂಗ್ ನೆನಪಿಸಲು ಅಥವಾ ಹೊಸ ಕಲೆಕ್ಷನ್ ಹಾಗೂ ಹಬ್ಬದ ರಿಯಾಯಿತಿಗಳ ಬಗ್ಗೆ ತಿಳಿಸಲು ಬ್ರಾಡ್‌ಕಾಸ್ಟ್ ಸಂದೇಶಗಳನ್ನು ಬಳಸಿ. ಇದು ಸಾಮಾನ್ಯ ಜಾಹೀರಾತುಗಳಿಗಿಂತ ಹೆಚ್ಚು ಪರಿಣಾಮಕಾರಿ.
  6. ಸಂಭಾಷಣೆಯಿಂದ ಒಳನೋಟ ಪಡೆಯಿರಿ: ಗ್ರಾಹಕರ ಪ್ರಶ್ನೆಗಳು ಮತ್ತು ಬೇಡಿಕೆಗಳನ್ನು ಗಮನಿಸಿ ನಿಮ್ಮ ವ್ಯಾಪಾರದ ಕೊರತೆಗಳನ್ನು ತಿದ್ದಿಕೊಳ್ಳಿ. ವಾಟ್ಸಾಪ್ ಇನ್‌ಬಾಕ್ಸ್ ಕೇವಲ ಮಾರಾಟದ ಮಾರ್ಗವಷ್ಟೇ ಅಲ್ಲ, ಅದೊಂದು ಉತ್ತಮ ಮಾರುಕಟ್ಟೆ ಸಂಶೋಧನಾ ವೇದಿಕೆಯೂ ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ