ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್ನಲ್ಲಿ ಉಚಿತ ನ್ಯಾಯಸೇತು ಚಾಟ್ಬೋಟ್ ಸೇವೆ
Get free legal advice, assistance from govt supported Nyaya Setu chatbot on WhatsApp: ಡಿವೋರ್ಸ್, ವರದಕ್ಷಿಣ, ಹಣಕಾಸು ವಂಚನೆ ಇತ್ಯಾದಿ ಪ್ರಕರಣಗಳಲ್ಲಿ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ಪಡೆಯಬಹುದು. ಸರ್ಕಾರವು ನ್ಯಾಯಸೇತು ಚಾಟ್ಬೋಟ್ ಸೇವೆ ಆರಂಭಿಸಿದೆ. ವಾಟ್ಸಾಪ್ನಲ್ಲಿ ಇದು ಉಚಿತವಾಗಿ ಲಭ್ಯ ಇದೆ. ಕೋರ್ಟ್ನಲ್ಲಿ ಕೇಸ್ ಹಾಕುವುದು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರನ್ನ ಸಂಪರ್ಕಿಸಬೇಕಾಗುತ್ತದೆ.

ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್ನಲ್ಲಿ ಉಚಿತವಾಗಿ ತಜ್ಞರ ಸಲಹೆ (Free legal advice) ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು (Ministry of law and justice) ವಾಟ್ಸಾಪ್ನಲ್ಲಿ ನ್ಯಾಯ ಸೇತು (Nyaya Setu) ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ.
ಯಾವ ರೀತಿಯ ಕಾನೂನು ಸೇವೆಗಳು ಲಭ್ಯ?
ವಾಟ್ಸಾಪ್ನಲ್ಲಿ ಲಭ್ಯ ಇರುವ ನ್ಯಾಯಸೇತು ಸೇವೆಯಲ್ಲಿ ಕಾನೂನು ಸಲಹೆ, ನೆರವು ಮತ್ತು ಸಮಾಲೋಚನೆಗಳನ್ನು ಪಡೆಯಬಹುದು. ಯಾವುದಾದರೂ ವ್ಯಾಜ್ಯ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ ಎಂಬ ಮಾಹಿತಿ ತಿಳಿಯಬಹುದು. ಅಥವಾ, ಆ ವ್ಯಾಜ್ಯದಲ್ಲಿ ನಿಮಗೆ ಯಾವ್ಯಾವ ಕಾನೂನು ಅವಕಾಶಗಳು, ಮಾರ್ಗಗಳು ಇವೆ ಎನ್ನುವ ಸಮಾಲೋಚನೆಗಳನ್ನು ಪಡೆಯಬಹುದು.
ಇದನ್ನೂ ಓದಿ: ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ
ವಾಟ್ಸಾಪ್ನಲ್ಲಿ ನ್ಯಾಯಸೇತು ಸ್ಕೀಮ್ಗೆ ಹೇಗೆ ನೊಂದಾಯಿಸುವುದು?
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಟ್ವೀಟ್ ಮಾಡಿದ್ದು, 7217711814 ವಾಟ್ಸಾಪ್ ನಂಬರ್ ಕೊಟ್ಟಿದೆ. ಯಾರು ಬೇಕಾದರೂ ಈ ನಂಬರ್ ಅನ್ನು ಸೇವ್ ಮಾಡಿಕೊಳ್ಳಬಹುದು. ಅಥವಾ ಆ ನಂಬರ್ಗೆ ಹೈ ಮೆಸೇಜ್ ಕಳುಹಿಸಿದರೂ ಸಾಕು. ಟೆಲಿ-ಲಾ (Tele-Law) ಹೆಸರಿನಲ್ಲಿ ಸ್ವಯಂ ಆಗಿ ಸೇವ್ ಆಗುತ್ತದೆ.
ಕಾನೂನು ಸಚಿವಾಲಯದ ಟ್ವೀಟ್
Legal help is now just a message away!
Nyaya Setu brings ‘Ease of Justice’ directly to your WhatsApp. Simply verify your mobile number to access a unified interface for legal advice and information. This smart navigation ensures that professional legal assistance is always… pic.twitter.com/ZZBl6rgitA
— Ministry of Law and Justice (@MLJ_GoI) January 1, 2026
ಮೂಲತಃ ಇದು ಒಂದು ಚಾಟ್ಬೋಟ್ (Chatbot) ಆಗಿರುತ್ತದೆ. ನಿಮಗೆ ಮೂಲ ಕಾನೂನು ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ಇದು ಒದಗಿಸುತ್ತದೆ. ವರದಕ್ಷಿಣ ಕಿರುಕುಳ ಇತ್ಯಾದಿ ಕೌಟುಂಬಿಕ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ, ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಇತ್ಯಾದಿ ಸಲಹೆಯನ್ನು ಪಡೆಯಬಹುದು.
ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು
ಈ ಚಾಟ್ಬೋಟ್ ಕೇವಲ ಕಾನೂನು ಸಲಹೆ ಮತ್ತು ಮಾರ್ಗಗಳನ್ನು ತಿಳಿಸುತ್ತದೆ. ಅದರೆ, ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರ ನೆರವನ್ನು ಪಡೆಯಲೇಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 5 January 26




