ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು
Govt dismisses viral news of Rs 500 notes being stopped: 500 ರೂ ನೋಟುಗಳನ್ನು ಅಮಾನ್ಯಗೊಳಿಸಲಾಗುವುದು. ಮಾರ್ಚ್ನಿಂದ ಎಟಿಎಂಗಳಲ್ಲಿ ಈ ನೋಟು ಸಿಗಲ್ಲ ಎನ್ನುವಂತಹ ಸುದ್ದಿ ವೈರಲ್ ಆಗಿದೆ. ಆದರೆ, ಸರ್ಕಾರ ಮತ್ತೊಮ್ಮೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 500 ರೂ ನೋಟುಗಳ ಚಲಾವಣೆ ನಿಲ್ಲಿಸುವುದಿಲ್ಲ ಎಂದಿದೆ. ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಎಕ್ಸ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ.

ನವದೆಹಲಿ, ಜನವರಿ 4: ಭಾರತೀಯ ರಿಸರ್ವ್ ಬ್ಯಾಂಕ್ (RBI) 500 ರೂ ನೋಟುಗಳ ಚಲಾವಣೆ ಕಡಿಮೆ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಎಟಿಎಂಗಳಲ್ಲಿ 500 ರೂ ನೋಟುಗಳು ಸಿಕ್ಕೋದಿಲ್ಲ ಎಂದು ತಿಳಿಸುತ್ತಿರುವ ಕೆಲ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರ್ಕಾರ 500 ರೂ ನೋಟುಗಳ ಮುದ್ರಣ ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳನ್ನು ಸರ್ಕಾರ ಅಲ್ಲಗಳೆದಿದೆ. ಇವು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಪಿಐಬಿ ಇಲಾಖೆಯ ಫ್ಯಾಕ್ಟ್ ಚೆಕಿಂಗ್ ಘಟಕವು ಎಕ್ಸ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ. ಎಟಿಎಂಗಳಲ್ಲಿ 500 ರೂ ನೋಟುಗಳ ವಿತರಣೆ ನಿಲ್ಲಿಸಲಾಗುವುದು ಎನ್ನುವುದೆಲ್ಲಾ ಸುಳ್ಳು. ಆರ್ಬಿಐ ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್ ತಂಡದ ಟ್ವೀಟ್
RBI to stop ₹500 notes from ATMs by March 2026❓🤔
Some social media posts claim that the Reserve Bank of India will discontinue the circulation of ₹500 notes by March 2026.#PIBFactCheck:
❌This claim is #fake!
✅ @RBI has made NO such announcement.
✅ ₹500 notes have… pic.twitter.com/F0Y3t0wHSf
— PIB Fact Check (@PIBFactCheck) January 2, 2026
ಇದನ್ನೂ ಓದಿ: ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?
‘500 ರೂ ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ. ಎಲ್ಲಾ ರೀತಿಯ ವಹಿವಾಟುಗಳಲ್ಲಿ ಅದನ್ನು ಮುಕ್ತವಾಗಿ ಬಳಸಬಹುದು. ಇಂಥ ಸುದ್ದಿಗಳನ್ನು ನಂಬುವ ಮುನ್ನ ಆ ಮಾಹಿತಿ ಅಧಿಕೃತ ಮೂಲಗಳಿಂದ ಬಂದಿದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ ಎಂದು ಪಿಐಬಿ ತನ್ನ ಟ್ವೀಟ್ನಲ್ಲಿ ಜನರನ್ನು ಎಚ್ಚರಿಸಿದೆ.
ಕೆಲ ತಿಂಗಳ ಹಿಂದೆ 500 ರೂ ನೋಟುಗಳನ್ನು ಅಮಾನ್ಯ ಮಾಡಲಾಗುವುದು ಎನ್ನುವ ಸುದ್ದಿಯೂ ಇತ್ತು. ಆಗಲೂ ಕೂಡ ಸರ್ಕಾರದ ವತಿಯಿಂದ ಹಲವು ಬಾರಿ ಸ್ಪಷ್ಟನೆ ನೀಡಿ, ಅದು ಸುಳ್ಳು ಸುದ್ದಿ ಎಂದು ತಿಳಿಸಲಾಗಿತ್ತು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರೂ ಕೂಡ ಕೆಲ ತಿಂಗಳ ಹಿಂದೆ ಸಂಸತ್ನಲ್ಲಿ ಈ ವಿಚಾರವಾಗಿ ಮಾತನಾಡಿ, 500 ರೂ ನೋಟುಗಳನ್ನು ಅಮಾನ್ಯ ಮಾಡಲಾಗುವುದಿಲ್ಲ ಎಂದಿದ್ದರು. ಎಟಿಎಂಗಳಲ್ಲಿ 100 ರೂ, 200 ರೂಗಳಂತೆ 500 ರೂ ನೋಟುಗಳನ್ನೂ ವಿತರಿಸುವುದು ಮುಂದುವರಿಯುತ್ತದೆ ಎಂದಿದ್ದರು.
ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?
ದರೂ ಕೂಡ ಕೆಲ ಕಿಡಿಕೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್ಗಳನ್ನು ಹಾಕುವುದು ಮುಂದುವರಿದೇ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




