AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN-Aadhaar Link: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?

PAN and Aadhaar linking Dec 31st Deadline over, know what happens now: ಆಧಾರ್ ಜೊತೆ ಪ್ಯಾನ್ ಅನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೆ ನೀಡಿದ್ದ ಗಡುವು ಮುಗಿದಿದೆ. ಜನವರಿ 1ರಿಂದ ಲಿಂಕ್ ಆಗದ ಪ್ಯಾನ್ ನಂಬರ್​ಗಳು ಇನಾಪರೇಟಿವ್ ಆಗುತ್ತವೆ. ಹೀಗೆ ನಿಷ್ಕ್ರಿಯಗೊಂಡ ಪ್ಯಾನ್ ಇದ್ದರೆ ಹಲವು ಹಣಕಾಸು ವಹಿವಾಟು ಸಮಸ್ಯೆಗಳು ಕಾಣಿಸಬಹುದು. ಈ ಬಗ್ಗೆ ಒಂದು ವರದಿ:

PAN-Aadhaar Link: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?
ಆಧಾರ್ ಮತ್ತು ಪ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2026 | 7:35 PM

Share

ನವದೆಹಲಿ, ಜನವರಿ 1: ಆಧಾರ್ ನಂಬರ್ ಜೊತೆ ಪ್ಯಾನ್ ಲಿಂಕ್ ಆಗಿರಬೇಕೆಂದು ಆದಾಯ ತೆರಿಗೆ ಇಲಾಖೆ (Income Tax) ಫರ್ಮಾನು ಹೊರಡಿಸಿ ವರ್ಷಗಳೇ ಆಯಿತು. ಹಲವು ಬಾರಿ ವಾಯಿದೆಗಳು ವಿಸ್ತರಣೆಯಾಗುತ್ತಾ ಬಂದು ಡಿಸೆಂಬರ್ 31ರ ಕೊನೆಯ ಗಡುವು ಕೂಡ ಮುಕ್ತಾಯವಾಗಿದೆ. ಈ ಡೆಡ್​ಲೈನ್ ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ. ಅಂಥ ಯಾವ ನೋಟಿಫಿಕೇಶನ್ ಸದ್ಯಕ್ಕೆ ಇಲಾಖೆಯಿಂದ ಬಂದಿಲ್ಲ. ಈಗ ಆಧಾರ್​ಗೆ ಲಿಂಕ್ ಆಗದೇ ಇರುವ ಪ್ಯಾನ್ ಹೊಂದಿರುವವರು ಏನು ಮಾಡಬೇಕು? ಅವರಿಗೆ ಏನು ಸಮಸ್ಯೆಯಾಗಬಹುದು? ಇಲ್ಲಿದೆ ಡೀಟೇಲ್ಸ್.

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತೆ?

ವ್ಯಕ್ತಿ ಮತ್ತು ಸಂಸ್ಥೆಗಳ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡಲೆಂದು ಐಟಿ ಇಲಾಖೆ ಪ್ಯಾನ್ ಅನ್ನು ನೀಡುತ್ತದೆ. ಒಬ್ಬರೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್​ಗಳನ್ನು ಬಳಸುವುದನ್ನು ತಪ್ಪಿಸಲು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವ ಕ್ರಮ ಜಾರಿಗೆ ತಂದಿತು. ಈಗ ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಅನ್ನು ಇನಾಪರೇಟಿವ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ನಿಷ್ಕ್ರಿಯ ಪ್ಯಾನ್ ಆಗಿರುತ್ತದೆ. ಈ ಪ್ಯಾನ್ ಇದ್ದೂ ಇಲ್ಲದಂತೆ ಆಗುತ್ತದೆ.

  • ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಆಗುವುದಿಲ್ಲ
  • ಡೀಮ್ಯಾಟ್ ಅಕೌಂಟ್ ತೆರೆಯಲು ಆಗುವುದಿಲ್ಲ.
  • ಹೆಚ್ಚಿನ ಮೊತ್ತದ ಹಣಕಾಸು ವಹಿವಾಟು ಸಾಧ್ಯವಾಗುವುದಿಲ್ಲ
  • ಸಾಲ ಪಡೆಯಲು ಆಗುವುದಿಲ್ಲ
  • ಐಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ
  • ರೀಫಂಡ್ ಸಿಗುವುದಿಲ್ಲ
  • ಎರಡು ಪಟ್ಟು ಹೆಚ್ಚು ಟಿಡಿಎಸ್ ಕಡಿತ ಆಗುತ್ತದೆ.

ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ

ಪ್ಯಾನ್ ಮತ್ತು ಆಧಾರ್ ಅನ್ನು ಈಗಲೂ ಲಿಂಕ್ ಮಾಡಬಹುದಾ?

ಆಧಾರ್ ಜೊತೆ ಪ್ಯಾನ್ ಅನ್ನು ಈಗಲೂ ಕೂಡ ಲಿಂಕ್ ಮಾಡಬಹುದು. ಲೇಟ್ ಲಿಂಕಿಂಗ್ ಫೀ ಪಾವತಿಸಿ, ಲಿಂಕ್ ಮಾಡಲು ಸಾಧ್ಯ. ಯಶಸ್ವಿಯಾಗಿ ಲಿಂಕ್ ಆದ ಬಳಿಕ ಪ್ಯಾನ್ ಮತ್ತೆ ಸಕ್ರಿಯಗೊಳ್ಳುತ್ತದೆ. ಆದರೆ, ಪ್ಯಾನ್ ಸಕ್ರಿಯ ಆಗುವವರೆಗೂ ಅದು ಇನಾಪರೇಟಿವ್ ಸ್ಥಿತಿಯಲ್ಲೇ ಮುಂದುವರಿಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಪ್ಯಾನ್ ಆಧಾರ್ ಲಿಂಕ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

  • ಇನ್ಕಮ್ ಟ್ಯಾಕ್ಸ್ ವಿಭಾಗದ ಇಫೈಲಿಂಗ್ ಪೋರ್ಟಲ್​ಗೆ ಹೋಗಿ:
  • ಮುಖ್ಯಪುಟದಲ್ಲಿ ‘ಕ್ವಿಕ್ ಲಿಂಕ್ಸ್’ ಸೆಕ್ಷನ್​ನಲ್ಲಿ ‘ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ.
  • ನಿಮ್ಮ ಪ್ಯಾನ್ ಮತ್ತು ಆಧಾರ್ ನಂಬರ್ ನಮೂದಿಸಿ.
  • ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ.

ಈಗ ನಿಮ್ಮ ಪ್ಯಾನ್ ನಂಬರ್ ಆಧಾರ್ ಜೊತೆ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಎಸ್ಸೆಮ್ಮೆಸ್ ಮೂಲಕ ತಿಳಿಯರಿ…

ಹಾಗೆಯೇ, ಎಸ್ಸೆಮ್ಮೆಸ್ ಮೂಲಕ ಇನ್ನೂ ಸುಲಭವಾಗಿ ಸ್ಟೇಟಸ್ ತಿಳಿಯಬಹುದು. ನಿಮ್ಮ ಮೊಬೈಲ್ ನಂಬರ್​ನಿಂದ UIDPAN <aadhaar number> <PAN Number> ಅನ್ನು ಬರೆದು ಈ ಮೆಸೇಜ್ ಅನ್ನು 567678 ಅಥವಾ 56161 ನಂಬರ್​ಗೆ ಕಳುಹಿಸಿ.

ಮೆಸೇಜ್​ನ ಉದಾಹರಣೆ: ‘UIDPAN 123456789012 ABCED1875E’

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​