21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್
IIT Hyderabad student Edward Nathan Varghese gets big package: ಹೈದರಾಬಾದ್ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಎಡ್ವರ್ಡ್ ನೇತನ್ ವರ್ಗೀಸ್ಗೆ 2.5 ಕೋಟಿ ರೂ ಸಂಬಳದ ಕೆಲಸ ಸಿಕ್ಕಿದೆ. ನೆದರ್ಲ್ಯಾಂಡ್ಸ್ನ ಆಪ್ಟೀವರ್ ಕಂಪನಿ ಈ ದೊಡ್ಡ ಆಫರ್ ಕೊಟ್ಟಿದೆ. ಹೈದರಾಬಾದ್ ಸಂಜಾತರಾದ ಎಡ್ವರ್ಡ್ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ.

ಹೈದರಾಬಾದ್, ಜನವರಿ 2: ಇಲ್ಲಿಯ ಐಐಟಿಯಲ್ಲಿ ಕೊನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 21 ವರ್ಷದ ಎಡ್ವರ್ಡ್ ನೇತನ್ ವರ್ಗೀಸ್ಗೆ (Edward Nathan Varghese) ದಾಖಲೆ ಸಂಬಳದ ಕೆಲಸಕ್ಕೆ ಆಫರ್ ಸಿಕ್ಕಿದೆ. ವರದಿ ಪ್ರಕಾರ, ಐಐಟಿ ಹೈದರಾಬಾದ್ನ ಎಡ್ವರ್ಡ್ಗೆ 2.5 ಕೋಟಿ ರೂ ಸ್ಯಾಲರಿ ಪ್ಯಾಕೇಜ್ ಕೊಡಲಾಗುತ್ತಿದೆ. ನೆದರ್ಲ್ಯಾಂಡ್ಸ್ ಮೂಲದ ಗ್ಲೋಬಲ್ ಟ್ರೇಡಿಂಗ್ ಸಂಸ್ಥೆಯಾದ ಆಪ್ಟಿವರ್ (Optiver) ಇಂತಹದ್ದೊಂದು ಭರ್ಜರಿ ಆಫರ್ ಅನ್ನು ಭಾರತೀಯ ವಿದ್ಯಾರ್ಥಿಗೆ ಕೊಟ್ಟಿದೆ.
ಇಂಟರ್ನ್ಶಿಪ್ನಲ್ಲಿ ಕಂಪನಿಯನ್ನು ಸೆಳೆದ ಎಡ್ವರ್ಡ್
ಎಡ್ವರ್ಡ್ ನೇತನ್ ವರ್ಗೀಸ್ ಹಾಗೂ ಐಐಟಿ ಹೈದರಾಬಾದ್ನ ಮತ್ತೊಬ್ಬ ವಿದ್ಯಾರ್ಥಿ, ಈ ಇಬ್ಬರೂ ಆಪ್ಟೀವರ್ನ ಎರಡು ತಿಂಗಳ ಇಂಟರ್ನ್ಶಿಪ್ಗೆ ಸೇರಿಕೊಂಡಿದ್ದರು. ಈ ವೇಳೆ, ಎಡ್ವರ್ಡ್ ಅವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಆಪ್ಟೀವರ್ ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಎಡ್ವರ್ಡ್ ಅವರು ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಪ್ಟೀವರ್ ಅನ್ನು ಸೇರಲಿದ್ದಾರೆ.
21 ವರ್ಷದ ಎಡ್ವರ್ಡ್ಗೆ ಆಪ್ಟೀವರ್ 2.5 ಕೋಟಿ ರೂ ಸಂಬಳ ಆಫರ್ ಮಾಡಿದೆ. 2008ರಲ್ಲಿ ಆರಂಭವಾದ ಐಐಟಿ ಹೈದರಾಬಾದ್ನಲ್ಲಿ ಈವರೆಗೆ ಯಾವ ವಿದ್ಯಾರ್ಥಿ ಕೂಡ ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಇಷ್ಟೊಂದು ಸ್ಯಾಲರಿ ಆಫರ್ ಪಡೆದಿದ್ದಿಲ್ಲ. ಆ ಮಟ್ಟಿಗೆ ಎಡ್ವರ್ಡ್ ದಾಖಲೆ ಮಾಡಿದ್ದಾರೆ. ವಿಶೇಷ ಎಂದರೆ, ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಎಡ್ವರ್ಡ್ ಇಂಟರ್ವ್ಯೂ ಫೇಸ್ ಮಾಡಿದ ಏಕೈಕ ಕಂಪನಿಯೂ ಅದಾಗಿತ್ತು.
ಇದನ್ನೂ ಓದಿ: ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ
ಬೆಂಗಳೂರಿನಲ್ಲಿ ಹೈಸ್ಕೂಲ್ ಓದಿದ್ದ ಎಡ್ವರ್ಡ್
ಎಡ್ವರ್ಡ್ ನೇತನ್ ವರ್ಗೀಸ್ ಮೂಲತಃ ಹೈದರಾಬಾದ್ನವರೇ. ಅಲ್ಲೇ ಹುಟ್ಟಿ ಬೆಳೆದಿದ್ದು. ಆದರೆ, ಏಳನೇ ತರಗತಿಯಿಂದ 12ನೇ ತರಗತಿಯವರೆಗೂ ಇವರು ಬೆಂಗಳೂರಿನಲ್ಲಿ ಓದಿದ್ದಾರೆ. 2022ರಲ್ಲಿ ಜೆಇಇ ಮೇನ್ ಪರೀಕ್ಷೆಯಲ್ಲಿ 1,100ನೇ ರ್ಯಾಂಕ್, ಜೆಇಇ ಅಡ್ವಾನ್ಸ್ಡ್ನಲ್ಲಿ 558ನೇ ರ್ಯಾಂಕಿಂಗ್ ಪಡೆದಿದ್ದಾರೆ. 2025ರಲ್ಲಿ ನಡೆದ ಕ್ಯಾಟ್ ಪರೀಕ್ಷೆಯಲ್ಲಿ ಶೇ. 99.96 ಅಂಕಗಳೊಂದಿಗೆ 120ನೇ ರ್ಯಾಂಕ್ ಪಡೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




