ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 21ನೇ ತಾರೀಕಿನ ಮಂಗಳವಾರದ ವಹಿವಾಟಿನಲ್ಲಿ ಎರಡು ದಿನಗಳ ನಷ್ಟದ ಸರಪಳಿಯನ್ನು ಮುರಿದಿದ್ದು, ಗಳಿಕೆಯನ್ನು ದಾಖಲಿಸಿವೆ. ಮಂಗಳವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 497 ಪಾಯಿಂಟ್ಸ್ ಅಥವಾ ಶೇ 0.89ರಷ್ಟು ಏರಿಕೆ ಕಂಡು, 56,319.01 ಪಾಯಿಂಟ್ನೊಂದಿಗೆ ವ್ಯವಹಾರವನ್ನು ಮುಗಿಸಿದೆ. ಇನ್ನು ನಿಫ್ಟಿ 156.60 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಏರಿಕೆ ಕಂಡು, 16,780.80 ಪಾಯಿಂಟ್ಸ್ನಲ್ಲಿ ವಹಿವಾಟು ಚುಕ್ತಾ ಆಗಿದೆ. ಇಂದಿನ ವಹಿವಾಟಿನಲ್ಲಿ 2204 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1033 ಕಂಪೆನಿಯ ಷೇರುಗಳು ಇಳಿಕೆ ಕಂಡವು. 111 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಆದವು. ರಿಯಾಲ್ಟಿ, ಕ್ಯಾಪಿಟಲ್ ಗೂಡ್ಸ್, ಫಾರ್ಮಾ, ಎನರ್ಜಿ, ಮಾಹಿತಿ ತಂತ್ರಜ್ಞಾನ ಮತ್ತು ಲೋಹದ ಸೂಚ್ಯಂಕಗಳು ಶೇ 1ರಿಂದ 3ರಷ್ಟು ಏರಿಕೆ ದಾಖಲಿಸಿದವು. ಇನ್ನು ದಿನಾಂತ್ಯಕ್ಕೆ ಭಾರತದ ರೂಪಾಯಿ ಮೌಲ್ಯ ಡಾಲರ್ ವಿರುದ್ಧ 31 ಪೈಸೆ ಗಳಿಕೆ ಕಂಡಿದೆ. ಹಿಂದಿನ ದಿನದ ಕೊನೆಗೆ 75.91ಕ್ಕೆ ವಹಿವಾಟು ಮುಕ್ತಾಯಗೊಂಡಿತ್ತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳ ಹಾಗೂ ಶೇಕಡಾವಾರು ಪ್ರಮಾಣ
ಎಚ್ಸಿಎಲ್ ಟೆಕ್ ಶೇ 3.89
ವಿಪ್ರೋ ಶೇ 3.73
ಯುಪಿಎಲ್ ಶೇ 3.58
ಅದಾನಿ ಪೋರ್ಟ್ಸ್ ಶೇ 3.58
ಟಾಟಾ ಸ್ಟೀಲ್ ಶೇ 3.00
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳ ಹಾಗೂ ಶೇಕಡಾವಾರು ಪ್ರಮಾಣ
ಪವರ್ಗ್ರಿಡ್ ಕಾರ್ಪೊರೇಷನ್ ಶೇ -1.55
ಆಕ್ಸಿಸ್ ಬ್ಯಾಂಕ್ ಶೇ -1.26
ಬಜಾಜ್ ಫೈನಾನ್ಸ್ ಶೇ -0.85
ಸಿಪ್ಲಾ ಶೇ -0.79
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ -0.71
ಇದನ್ನೂ ಓದಿ: Multibagger stock: ಒಂದು ವಾರದಲ್ಲಿ ಶೇ 95ರಷ್ಟು ರಿಟರ್ನ್ಸ್ ನೀಡಿದೆ ಈ ಮಲ್ಟಿಬ್ಯಾಗರ್ ಸ್ಟಾಕ್