Closing Bell: ಸೆನ್ಸೆಕ್ಸ್ 237 ಪಾಯಿಂಟ್ಸ್ ಕುಸಿತ; ಮಾರುತಿ ಸುಜುಕಿ ಷೇರು ತಲಾ 148 ರೂಪಾಯಿ ಇಳಿಕೆ

| Updated By: Srinivas Mata

Updated on: Apr 13, 2022 | 5:24 PM

ಭಾರತದ ಷೇರು ಮಾರುಕಟ್ಟೆ ಸೂಷ್ಯಣಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 13ನೇ ತಾರೀಕಿನ ಬುಧವಾರದಂದು ಇಳಿಕೆ ದಾಖಲಿಸಿದೆ.

Closing Bell: ಸೆನ್ಸೆಕ್ಸ್ 237 ಪಾಯಿಂಟ್ಸ್ ಕುಸಿತ; ಮಾರುತಿ ಸುಜುಕಿ ಷೇರು ತಲಾ 148 ರೂಪಾಯಿ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ಸೆಷನ್ ಆದ ಏಪ್ರಿಲ್ 13ನೇ ತಾರೀಕಿನ ಬುಧವಾರ ಕೂಡ ಇಳಿಕೆ ಕಂಡಿದ್ದು, ನಿಫ್ಟಿ 17,500 ಪಾಯಿಂಟ್ಸ್​ಗಿಂತ ಕೆಳಗೆ ಇಳಿದಿದೆ. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 237.44 ಪಾಯಿಂಟ್ಸ್ ಅಥವಾ ಶೇ 0.41ರಷ್ಟು ಕುಸಿದು, 58,338.93 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 54.60 ಪಾಯಿಂಟ್ಸ್ ಅಥವಾ ಶೇ 0.31ರಷ್ಟು ಇಳಿಕೆಯಾಗಿ, 17,475.70 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಆಗಿದೆ. ಇಂದಿನ ಸೆಷನ್​ನಲ್ಲಿ 1811 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1494 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 136 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ರಿಯಾಲ್ಟಿ, ವಾಹನ ಮತ್ತು ಬ್ಯಾಂಕ್ ಈ ವಲಯವನ್ನು ಹೊರತುಪಡಿಸಿ ಉಳಿದವು ಏರಿಕೆಯಲ್ಲೇ ವ್ಯವಹಾರ ಮುಗಿಸಿವೆ. ಎಫ್​ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ಲೋಹ ಹಾಗೂ ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 0.5ರಷ್ಟು ಮೇಲೇರಿವೆ. ಬಿಎಸ್​ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇ 0.2ರಷ್ಟು ಕುಸಿದರೆ, ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇ 0.27ರಷ್ಟು ಹೆಚ್ಚಳ ಕಂಡಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಒಎನ್​ಜಿಸಿ ಶೇ 2.55
ಅಪೋಲೋ ಹಾಸ್ಪಿಟಲ್ ಶೇ 2.55
ಐಟಿಸಿ ಶೇ 1.79
ಸನ್​ ಫಾರ್ಮಾ ಶೇ 1.68
ಯುಪಿಎಲ್ ಶೇ 1.61

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಮಾರುತಿ ಸುಜುಕಿ ಶೇ -1.95
ಎಚ್​ಡಿಎಫ್​ಸಿ ಶೇ -1.95
ಎಚ್​ಡಿಎಫ್​ಸಿ ಬ್ಯಾಂಕ್ ಶೇ -1.91
ಡಾ ರೆಡ್ಡೀಸ್ ಲ್ಯಾಬ್ಸ್ ಶೇ -1.67
ಟಾಟಾ ಮೋಟಾರ್ಸ್ ಶೇ -1.65​

ಇದನ್ನೂ ಓದಿ: Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು