Sign In

By signing in or creating an account, you agree with Associated Broadcasting Company's Terms & Conditions and Privacy Policy.

How to apply for Passport: ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

ಯಾವುದೇ ಉದ್ದೇಶಕ್ಕೆ ವಿದೇಶಕ್ಕೆ ತೆರಳಬೇಕಿದ್ದಲ್ಲಿ ಪಾಸ್​ಪೋರ್ಟ್ ಬಹಳ ಮುಖ್ಯವಾದ ದಾಖಲಾತಿ. ಇದಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.

How to apply for Passport: ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 13, 2022 | 11:49 AM

ವಿದೇಶದಲ್ಲಿ ವ್ಯಾಸಂಗಕ್ಕೋ ಪ್ರವಾಸಕ್ಕೋ ವೈದ್ಯಕೀಯ ಕಾರಣಗಳಿಗೋ ವ್ಯವಹಾರ- ವ್ಯಾಪಾರದ ಉದ್ದೇಶಕ್ಕೋ ಅಥವಾ ಕುಟುಂಬಸ್ಥರ ಭೇಟಿಗೋ ಪಾಸ್​ಪೋರ್ಟ್ (Passport) ಬಹಳ ಮುಖ್ಯವಾದ ದಾಖಲಾತಿ. ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಭಾರತೀಯರಾಗಿದ್ದು, ಭಾರತ ದೇಶದ ಗಡಿಯನ್ನು ದಾಟಬೇಕು ಹಾಗೂ ಮತ್ತೊಂದು ದೇಶಕ್ಕೆ ಹೋಗಬೇಕು ಅಂತಾದಲ್ಲಿ ಪಾಸ್​ಪೋರ್ಟ್ ಅತ್ಯವಶ್ಯ. ವಿದೇಶಾಂಗ ಸಚಿವಾಲಯ ಮತ್ತು ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಮತ್ತು ದೇಶದಿಂದ ಹೊರಗೆ ಇರುವವರಿಗೆ ಆನ್​ಲೈನ್​ನಲ್ಲಿ ಪಡೆಯುವುದಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪಾಸ್​ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಒಂದು ವೇಳೆ ಭಾರತದಲ್ಲೇ ಇರುವಂಥವರಾದಲ್ಲಿ ಆಫ್​ಲೈನ್ ಮೂಲಕವೂ ಪಾಸ್​ಪೋರ್ಟ್​ ಪಡೆಯುವಂಥ ಅವಕಾಶ ಇದೆ. ಈ ಲೇಖನದಲ್ಲಿ ನಿಮಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಹಂತಹಂತವಾಗಿ ತಿಳಿಸಲಿದ್ದೇವೆ.

ಪಾಸ್​ಪೋರ್ಟ್ ಹಾಗೂ ಪಾಸ್​ಪೋರ್ಟ್​ಗೆ ಸಂಬಂಧಿಸಿದ ಸೇವೆಗಳನ್ನು ಪಾಸ್​ಪೋರ್ಟ್ ಸೇವಾ ಮೂಲಕ ಸರಳ, ದಕ್ಷ, ಮತ್ತು ಪಾರದರ್ಶಕ ಪ್ರಕ್ರಿಯೆ ಮೂಲಕ ಒದಗಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಮತ್ತು ಕಚೇರಿಗಳಿಗೆ ದೇಶದಾದ್ಯಂತ ನೆಟ್​ವರ್ಕ್ ಒದಗಿಸುವುದನ್ನು ಹೊರತುಪಡಿಸಿ, ಅರ್ಜಿದಾರರ ಕ್ರೆಡೆನ್ಷಿಯಲ್ಸ್​ಗಳನ್ನು ಪರಿಶೀಲಿಸಲು ರಾಜ್ಯ ಪೊಲೀಸರ ಜತೆಗೆ ಹಾಗೈ ಪಾಸ್​ಪೋರ್ಟ್ ಡೆಲಿವರಿಗೆ ಇಂಡಿಯಾ ಪೋಸ್ಟ್​ನ ಜತೆಗೆ ಜೋಡಿಸುತ್ತದೆ. ಯಾರು ಭಾರತದಿಂದ ಹೊರ ಹೋಗಲು ಬಯಸುತ್ತಾರೋ ಹಾಗೂ ದೇಶಕ್ಕೆ ಬರುತ್ತಾರೋ ಅವರ ಬಳಿ ಸಿಂಧುವಾದ ಪಾಸ್​ಪೋರ್ಟ್ ಅಥವಾ ಪ್ರಯಾಣ ದಾಖಲಾತಿ ಇರಬೇಕು.

ಪಾಸ್​ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಭಾರತ ಸರ್ಕಾರದಿಂದ ವಿವಿಧ ಪಾಸ್​ಪೋರ್ಟ್​ಗಳನ್ನು ಮತ್ತು ಪ್ರಯಾಣ ದಾಖಲಾತಿಗಳನ್ನು ವಿತರಿಸಲಾಗುತ್ತದೆ. ಸಾಮಾನ್ಯ ಪಾಸ್​ಪೋರ್ಟ್, ರಾಜತಾಂತ್ರಿಕ ಪಾಸ್​ಪೋರ್ಟ್, ಅಧಿಕಾರಿಗಳ ಪಾಸ್​ಪೋರ್ಟ್, ತುರ್ತು ಪ್ರಮಾಣ ಪತ್ರ ಮತ್ತು ಉದ್ದೇಶದ ಸಲುವಾಗಿ ಗುರುತಿನ ಪ್ರಮಾಣ ಪತ್ರ. ಕೊನೆ ಎರಡು ದಾಖಲಾತಿಗಳನ್ನು ಕಡ್ಡಾಯವಾಗಿ ತುರ್ತು ಉದ್ದೇಶಗಳಿಗೆ ಮಾತ್ರ ನೀಡಲಾಗುತ್ತದೆ. ಇನ್ನು ಭಾರತದಲ್ಲಿ ಆನ್​ಲೈನ್ ಮೂಲಕ ಪಾಸ್​ಪೋರ್ಟ್​ ಅಪ್ಲೈ ಮಾಡುವುದು ಹೇಗೆ ಅನ್ನೋದನ್ನ ನೋಡೋಣ.

ಭಾರತದಲ್ಲಿ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮಗಳು: 1. ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿ. 2. ನೋಂದಾಯಿತ ಲಾಗಿನ್ ಐಡಿಯೊಂದಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಮಾಡಿ. 3. ಹೊಸದಾಗಿ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರು-ಹಂಚಿಕೆಗಾಗಿ ಅನ್ವಯಿಸುವ ಲಿಂಕ್‌ನ ಕ್ಲಿಕ್ ಮಾಡಿ. 4. ಅರ್ಜಿಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ. 5. ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ವೀಕ್ಷಿಸಿ ಉಳಿಸಿದ/ಸಲ್ಲಿಸಿದ ಅಪ್ಲಿಕೇಷನ್‌ಗಳ ಪರದೆಯಲ್ಲಿ ಪಾವತಿ ಮತ್ತು ವೇಳಾಪಟ್ಟಿ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಎಲ್ಲ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು/ಪಾಸ್‌ಪೋರ್ಟ್ ಕಚೇರಿಗಳಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಆನ್‌ಲೈನ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ. ಕ್ರೆಡಿಟ್/ಡೆಬಿಟ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್, ಮತ್ತು ಅಸೋಸಿಯೇಟ್ ಬ್ಯಾಂಕ್‌ಗಳು ಮತ್ತು ಇತರ ಬ್ಯಾಂಕ್‌ಗಳಂತಹ ಯಾವುದೇ ವಿಧಾನಗಳನ್ನು ಬಳಸಿಕೊಂಡು ಆನ್‌ಲೈನ್ ಪಾವತಿಯನ್ನು ಮಾಡಬಹುದು. 6. ಅರ್ಜಿಯ ಉಲ್ಲೇಖ ಸಂಖ್ಯೆ/ಅಪಾಯಿಂಟ್‌ಮೆಂಟ್ ಸಂಖ್ಯೆಯನ್ನು ಹೊಂದಿರುವ ಅರ್ಜಿ ರಶೀದಿಯನ್ನು ಮುದ್ರಿಸಲು ಪ್ರಿಂಟ್ ಅಪ್ಲಿಕೇಷನ್ ರಶೀದಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಪಾಸ್‌ಪೋರ್ಟ್ ಕಚೇರಿಗೆ ನಿಮ್ಮ ಭೇಟಿಯ ಸಮಯದಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ವಿವರಗಳೊಂದಿಗೆ ಎಸ್ಸೆಮ್ಮೆಸ್ ಅನ್ನು ಅಪಾಯಿಂಟ್‌ಮೆಂಟ್ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ. 7. ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಸಮಯವನ್ನು ಬುಕ್ ಮಾಡಿದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಮೂಲ ದಾಖಲೆಗಳೊಂದಿಗೆ ಭೇಟಿ ನೀಡಿ.

ಇದನ್ನೂ ಓದಿ: E- Passports: ಮೈಕ್ರೋಚಿಪ್​ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್​ಪೋರ್ಟ್​; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!