Passport power index 2022: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ; ಪಾಸ್​ಪೋರ್ಟ್ ಶ್ರೇಯಾಂಕದಲ್ಲಿ ಏಳು ಸ್ಥಾನ ಮೇಲೇರಿದ ಭಾರತ

60 ದೇಶಗಳನ್ನು ಪ್ರವೇಶಿಸುವುದಕ್ಕೆ ವೀಸಾದ ಅಗತ್ಯ ಇಲ್ಲದೆ ಭಾರತ ಪಾಸ್​ಪೋರ್ಟ್ ಈಗ ಶ್ರೇಯಾಂಕದಲ್ಲಿ 83ನೇ ಸ್ಥಾನವನ್ನು ತಲುಪಿದೆ. ಮೊದಲ ಸ್ಥಾನದಲ್ಲಿ ಜಪಾನ್, ಸಿಂಗಾಪೂರ್ ಜಂಟಿಯಾಗಿ ಇವೆ.

Passport power index 2022: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ; ಪಾಸ್​ಪೋರ್ಟ್ ಶ್ರೇಯಾಂಕದಲ್ಲಿ ಏಳು ಸ್ಥಾನ ಮೇಲೇರಿದ ಭಾರತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 12, 2022 | 11:59 AM

ಪಾಸ್​ಪೋರ್ಟ್​ ಶ್ರೇಯಾಂಕದಲ್ಲಿ ಭಾರತವು ಸುಧಾರಣೆ ಕಂಡಿದೆ. 2022ರಲ್ಲಿ ಭಾರತದ ಪಾಸ್​ಪೋರ್ಟ್ ಸಾಮರ್ಥ್ಯ ವೃದ್ಧಿಯಾಗಿದ್ದು, ಇದೀಗ 60 ದೇಶಗಳಿಗೆ ಮುಂಚಿತವಾಗಿ ವೀಸಾ ಇಲ್ಲದೆ ಭಾರತದ ಪಾಸ್​ಪೋರ್ಟ್​ ಹೊಂದಿರುವವರು ತೆರಳಬಹುದಾಗಿದೆ. ಆ ಮೂಲಕವಾಗಿ ಈ ಹಿಂದೆ ಇದ್ದ 90ನೇ ಸ್ಥಾನದಿಂದ ಏಳು ಸ್ಥಾನ ಮೇಲಕ್ಕೆ ಏರಿ 83ನೇ ಸ್ಥಾನವನ್ನು ತಲುಪಿದೆ. 2021ನೇ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಈಗ ಒಮನ್ ಮತ್ತು ಅರ್ಮೇನಿಯಾ ದೇಶಗಳು ವೀಸಾ ಇಲ್ಲದ ಭಾರತ ಪಾಸ್​ಪೋರ್ಟ್ ಮೂಲಕ ತೆರಳಬಹುದಾದದ ದೇಶಗಳಾಗಿ ಸೇರ್ಪಡೆ ಆಗಿವೆ. ಹೊಸ ದೇಶಗಳಿಗೆ ಹೀಗೆ ವೀಸಾ ಅಗತ್ಯ ಇಲ್ಲದೆ ಪ್ರಯಾಣಿಸಬಹುದಾದ್ದರಿಂದ ಪಾಸ್​ಪೋರ್ಟ್ ಶ್ರೇಯಾಂಕದಲ್ಲಿ ಮೇಲಕ್ಕೆ ಏರಿದೆ. 1.28 ಕೋಟಿ ಪಾಸ್​ಪೋರ್ಟ್​ಗಳನ್ನು 2019ರಲ್ಲಿ ಪಾಸ್​ಪೋರ್ಟ್ ವಿತರಣೆ ಪ್ರಾಧಿಕಾರದಿಂದ ಭಾರತದಲ್ಲಿ ಮತ್ತು ವಿದೇಶದಲ್ಲಿ ನೀಡಲಾಗಿದೆ. ಈ ಮೂಲಕ ಚೀನಾ ಮತ್ತು ಅಮೆರಿಕ ನಂತರದಲ್ಲಿ ಜಾಗತಿಕವಾಗಿ ಅತಿಹೆಚ್ಚು ಪಾಸ್​ಪೋರ್ಟ್ ವಿತರಿಸಿದ ದೇಶ ಭಾರತ ಎನಿಸಿಕೊಂಡಿದೆ.

ವೀಸಾ ಆನ್ ಅರೈವಲ್ ಆಧಾರದ ಮೇಲೆ ಪಾಸ್​ಪೋರ್ಟ್ ಶ್ರೇಯಾಂಕ ನಿಗದಿ ಆಗುತ್ತದೆ. ಆದರೆ ಈ ವಿಚಾರದಲ್ಲಿ ಬಹಳ ದೊಡ್ಡ ತಾರತಮ್ಯ ಇದೆ. ಸ್ವೀಡನ್ ಮತ್ತು ಅಮೆರಿಕದಂಥ ದೇಶಗಳ ಪಾಸ್​ಪೋರ್ಟ್​ ಹೊಂದಿರುವವರು 180ಕ್ಕೂ ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆಯೇ ತೆರಳಬಹುದು. ಅದ ಅಂಗೋಲಾ, ಕ್ಯಾಮರೂನ್, ಲಾವೋಸ್​ನಂಥ ದೇಶಗಳ ಪಾಸ್​ಪೋರ್ಟ್ ಹೊಂದಿರುವವರು 50 ದೇಶಗಳಿಗೆ ಮಾತ್ರ ಹೀಗೆ ಹೋಗಬಹುದು. ದಾಖಲೆಗಳ ಪ್ರಕಾರವಾಗಿ ಜಪಾನ್ ಮತ್ತು ಸಿಂಗಾಪೂರ್ ಪಾಸ್​ಪೋರ್ಟ್​ ಇರುವವರು ಮುಂಚಿತವಾಗಿಯೇ ವೀಸಾ ಪಡೆಯದೆ ಅತಿ ಹೆಚ್ಚು ದೇಶಗಳಿಗೆ ಹೋಗಬಹುದು. ಏಷ್ಯಾ ಖಂಡದ ಜಪಾನ್ ಹಾಗೂ ಸಿಂಗಾಪೂರ್ ಪಾಸ್​ಪೋರ್ಟ್ ಮೂಲಕ 192 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು. ಅದೇ ಅಫ್ಘಾನಿಸ್ತಾನ ವೀಸಾದ ಮೂಲಕ 26 ದೇಶಗಳಿಗೆ ಮಾತ್ರ ವೀಸಾ ಆನ್ ಅರೈವಲ್ ಹೋಗಬಹುದು.

ಹೊಸ ಶ್ರೇಯಾಂಕದ ಪಟ್ಟಿಯಲ್ಲಿ ಜರ್ಮನಿ ಹಾಗೂ ದಕ್ಷಿಣ ಕೊರಿಯಾ ಜಂಟಿಯಾಗಿ ಎರಡನೇ ಸ್ಥಾನದಲ್ಲಿವೆ. 190 ದೇಶಗಳಿಗೆ ವೀಸಾ ಇಲ್ಲದೆ ಈ ದೇಶಗಳ ಪಾಸ್​ಪೋರ್ಟ್​ ಹೊಂದಿರುವವರು ಹೋಗಬಹುದು. ಫಿನ್​ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ 189 ಅಂಕದೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿವೆ. 2020ನೇ ಇಸವಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದ್ದ ಯು.ಎಸ್. ಹಾಗೂ ಯು.ಕೆ. ಚೇತರಿಸಿಕೊಂಡಿವೆ. ಎರಡೂ ದೇಶಗಳು ಈಗ 186 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿವೆ. ಹೆನ್ಲೆ ಪಾಸ್​ಪೋರ್ಟ್ ಸೂಚ್ಯಂಕದಲ್ಲಿ ಯುಎಇ ಮೇಲ್ಮುಖದ ಪಯಣ ಮುಂದುವರಿಸಿದೆ. ಈ ಸೂಚ್ಯಂಕದ ಇತಿಹಾಸದಲ್ಲೇ ಅರಬ್ ದೇಶವೊಂದು 15ನೇ ಸ್ಥಾನ ತಲುಪಿಕೊಂಡಿದ್ದಿಲ್ಲ. 175 ಅಂಕಗಳ ಮೂಲಕ ಆ ಸಾಧನೆ ಮಾಡಿದೆ ಯುಎಇ.

ಇದನ್ನೂ ಓದಿ: E- Passports: ಮೈಕ್ರೋಚಿಪ್​ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್​ಪೋರ್ಟ್​; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್