AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಸೆನ್ಸೆಕ್ಸ್ 237 ಪಾಯಿಂಟ್ಸ್ ಕುಸಿತ; ಮಾರುತಿ ಸುಜುಕಿ ಷೇರು ತಲಾ 148 ರೂಪಾಯಿ ಇಳಿಕೆ

ಭಾರತದ ಷೇರು ಮಾರುಕಟ್ಟೆ ಸೂಷ್ಯಣಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 13ನೇ ತಾರೀಕಿನ ಬುಧವಾರದಂದು ಇಳಿಕೆ ದಾಖಲಿಸಿದೆ.

Closing Bell: ಸೆನ್ಸೆಕ್ಸ್ 237 ಪಾಯಿಂಟ್ಸ್ ಕುಸಿತ; ಮಾರುತಿ ಸುಜುಕಿ ಷೇರು ತಲಾ 148 ರೂಪಾಯಿ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 13, 2022 | 5:24 PM

Share

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ಸೆಷನ್ ಆದ ಏಪ್ರಿಲ್ 13ನೇ ತಾರೀಕಿನ ಬುಧವಾರ ಕೂಡ ಇಳಿಕೆ ಕಂಡಿದ್ದು, ನಿಫ್ಟಿ 17,500 ಪಾಯಿಂಟ್ಸ್​ಗಿಂತ ಕೆಳಗೆ ಇಳಿದಿದೆ. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 237.44 ಪಾಯಿಂಟ್ಸ್ ಅಥವಾ ಶೇ 0.41ರಷ್ಟು ಕುಸಿದು, 58,338.93 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 54.60 ಪಾಯಿಂಟ್ಸ್ ಅಥವಾ ಶೇ 0.31ರಷ್ಟು ಇಳಿಕೆಯಾಗಿ, 17,475.70 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಆಗಿದೆ. ಇಂದಿನ ಸೆಷನ್​ನಲ್ಲಿ 1811 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1494 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 136 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ರಿಯಾಲ್ಟಿ, ವಾಹನ ಮತ್ತು ಬ್ಯಾಂಕ್ ಈ ವಲಯವನ್ನು ಹೊರತುಪಡಿಸಿ ಉಳಿದವು ಏರಿಕೆಯಲ್ಲೇ ವ್ಯವಹಾರ ಮುಗಿಸಿವೆ. ಎಫ್​ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ಲೋಹ ಹಾಗೂ ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 0.5ರಷ್ಟು ಮೇಲೇರಿವೆ. ಬಿಎಸ್​ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇ 0.2ರಷ್ಟು ಕುಸಿದರೆ, ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇ 0.27ರಷ್ಟು ಹೆಚ್ಚಳ ಕಂಡಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಒಎನ್​ಜಿಸಿ ಶೇ 2.55 ಅಪೋಲೋ ಹಾಸ್ಪಿಟಲ್ ಶೇ 2.55 ಐಟಿಸಿ ಶೇ 1.79 ಸನ್​ ಫಾರ್ಮಾ ಶೇ 1.68 ಯುಪಿಎಲ್ ಶೇ 1.61

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಮಾರುತಿ ಸುಜುಕಿ ಶೇ -1.95 ಎಚ್​ಡಿಎಫ್​ಸಿ ಶೇ -1.95 ಎಚ್​ಡಿಎಫ್​ಸಿ ಬ್ಯಾಂಕ್ ಶೇ -1.91 ಡಾ ರೆಡ್ಡೀಸ್ ಲ್ಯಾಬ್ಸ್ ಶೇ -1.67 ಟಾಟಾ ಮೋಟಾರ್ಸ್ ಶೇ -1.65​

ಇದನ್ನೂ ಓದಿ: Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ