ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜೂನ್ 21ನೇ ತಾರೀಕಿನ ಮಂಗಳವಾರದಂದು ಭಾರೀ ಏರಿಕೆ ದಾಖಲಿಸಿವೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ 934.23 ಪಾಯಿಂಟ್ಸ್ ಅಥವಾ ಶೇ 1.81ರಷ್ಟು ಹೆಚ್ಚಳವಾಗಿ, 52,532.07 ಪಾಯಿಂಟ್ಸ್ನೊಂದಿಗೆ ಮುಕ್ತಾಯ ಕಂಡಿದೆ. ಇನ್ನು ನಿಫ್ಟಿ 288.60 ಪಾಯಿಂಟ್ಸ್ ಅಥವಾ ಶೇ 1.88ರಷ್ಟು ಹೆಚ್ಚಳವಾಗಿ 15,638.80 ಪಾಯಿಂಟ್ಸ್ನಲ್ಲಿ ವಹಿವಾಟು ಚುಕ್ತಾ ಮಾಡಿತು. ಇಂದಿನ ವಹಿವಾಟಿನಲ್ಲಿನ 2428 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 819 ಕಂಪೆನಿಯ ಷೇರುಗಳು ಇಳಿಕೆ ಕಂಡವು ಮತ್ತು 125 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಗಳಿಕೆಯನ್ನು ದಾಖಲಿಸಿದವು. ಮಾಹಿತಿ ತಂತ್ರಜ್ಞಾನ, ಲೋಹ, ತೈಲ ಮತ್ತು ಅನಿಲ, ವಿದ್ಯುತ್, ರಿಯಾಲ್ಟಿ ಹಾಗೂ ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ಶೇ 3ರಿಂದ ಶೇ 6ರಷ್ಟು ಏರಿಕೆ ದಾಖಲಿಸಿದವು. ಇನ್ನು ಬಿಎಸ್ಇ ಮಿಡ್ಕ್ಯಾಪ್ ಶೇ 2.4ರಷ್ಟು ಮೇಲೇರಿದರೆ, ಸ್ಮಾಲ್ಕ್ಯಾಪ್ ಶೇ 3ರಷ್ಟು ಹೆಚ್ಚಳವಾಯಿತು.
ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 10 ಪೈಸೆಯಷ್ಟು ಕುಸಿಯಿತು. ಸೋಮವಾರ ದಿನದ ಕೊನೆಗೆ 77.98 ಇದ್ದದ್ದು, ಇವತ್ತಿಗೆ 78.08ರಲ್ಲಿ ಮುಕ್ತಾಯ ಕಂಡಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟೈಟನ್ ಶೇ 5.93
ಹಿಂಡಾಲ್ಕೋ ಶೇ 5.52
ಜೆಎಸ್ಡಬ್ಲ್ಯು ಸ್ಟೀಲ್ ಶೇ 4.70
ಕೋಲ್ ಇಂಡಿಯಾ ಶೇ 4.50
ಅದಾನಿ ಪೋರ್ಟ್ಸ್ ಶೇ 3.91
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಅಪೋಲೋ ಹಾಸ್ಪಿಟಲ್ ಶೇ -0.09
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್