ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್, ಹೂಡಿಕೆದಾರರಿಗೆ ಉಪಯುಕ್ತವಾಗುವ ಕೆಲ ಪರಿಕರಗಳು

SIP investment, some important tools that can be useful: ಎಸ್​ಐಪಿ ಮೂಲಕ ಮ್ಯೂಚುವಲ್ ಫಂಡ್​​ಗಳಲ್ಲಿ ಹೂಡಿಕೆ ಮಾಡುವುದು ಬಹಳ ಟ್ರೆಂಡಿಂಗ್​ನಲ್ಲಿದೆ. ಹೆಚ್ಚು ಅವಲೋಕನೆಯ ಅವಶ್ಯಕತೆ ಇಲ್ಲದ ಈ ಸಿಪ್ ಮಾದರಿಯಲ್ಲಿ ಹಲವು ಟೂಲ್​ಗಳ ಬಳಕೆಗೆ ಅವಕಾಶಗಳಿವೆ. ಕೆಲ ಪ್ರಮುಖ ಸಿಪ್ ಸಾಧನಗಳ ಪರಿಚಯ ಇಲ್ಲಿದೆ.

ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್, ಹೂಡಿಕೆದಾರರಿಗೆ ಉಪಯುಕ್ತವಾಗುವ ಕೆಲ ಪರಿಕರಗಳು
ಹಣ
Image Credit source: Getty Images

Updated on: Aug 20, 2026 | 10:10 PM

ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಬಹಳ ಸರಳ ಮತ್ತು ಪರಿಣಾಮಕಾರಿಯಾಗಿರುವ ಹೂಡಿಕೆ ವಿಧಾನವಾಗಿದೆ. ನಿಯಮಿತವಾಗಿ ಹೂಡಿಕೆ ಮಾಡಬೇಕಿರುವುದು ಇದರ ಪ್ರಮುಖ ಗುಣ. ಸಾಧಾರಣ SIP ಕ್ಯಾಲ್ಕುಲೇಟರ್‌ಗಳು ಕೇವಲ ತಿಂಗಳ ಹೂಡಿಕೆ ಮತ್ತು ಅಂದಾಜು ಆದಾಯವನ್ನು ಮಾತ್ರ ತೋರಿಸುತ್ತವೆ. ಆದರೆ ದೀರ್ಘಾವಧಿಯ ನಿಜವಾದ ಆರ್ಥಿಕ ಯೋಜನೆಯಲ್ಲಿ ಹಣದುಬ್ಬರ, ವೇತನ ಏರಿಕೆ ಮತ್ತು ಫಂಡ್ ಶುಲ್ಕಗಳಂತಹ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಇವುಗಳನ್ನು ನಿಖರವಾಗಿ ಅಳೆಯಲು ಧನ್ ಡಾಟ್ ಕೋ ವೆಬ್​ಸೈಟ್​ನ ಈ ಕೆಳಗಿನ ಕೆಲ ಟೂಲ್‌ಗಳು ನೆರವಾಗುತ್ತವೆ:

1. ಲಂಪ್ಸಮ್ ಹೂಡಿಕೆ ಜೊತೆಗೆ SIP ಕ್ಯಾಲ್ಕುಲೇಟರ್

ಎಸ್​ಐಪಿ ಆರಂಭಿಸಬೇಕೆಂದು ಹೊರಡುವಾಗ ನಿಮ್ಮ ಕೈಯಲ್ಲಿ ಒಂದಷ್ಟು ಲಂಪ್ಸಮ್ ಆದ ಉಳಿತಾಯ ಹಣ ಇದ್ದಿರಬಹುದು. ಅದು ಎಫ್​ಡಿಯಲ್ಲಿದ್ದ ಹಣವೋ ಇನ್ನೇನೋ ಆಗಿರಬಹುದು. ಈ ಹಣವನ್ನು ಮ್ಯುಚುವಲ್ ಫಂಡ್​ನಲ್ಲಿ ಆರಂಭಿಕ ಹೂಡಿಕೆಯಂತೆ ಹಾಕಬಹುದು. ಆ ಬಳಿಕ ಪ್ರತೀ ತಿಂಗಳು ಎಸ್​ಐಪಿ ಮಾಡಬಹುದು. ಈ ಟೂಲ್​ನ ಲಿಂಕ್ ಇಲ್ಲಿದೆ: dhan.co/mutual-fund-calculators/sip-calculator-with-initial-investment/

ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಚಿತ ಎಐ ಪ್ಲಸ್ ಪ್ಲಾನ್; ಏನಿದರಿಂದ ಲಾಭ? ಕ್ಲೇಮ್ ಹೇಗೆ?

2. ಬೆಲೆಯೇರಿಕೆ ಪರಿಗಣನೆಯೊಂದಿಗೆ ಸ್ಟೆಪ್-ಅಪ್ SIP ಕ್ಯಾಲ್ಕುಲೇಟರ್

ಪ್ರತಿ ವರ್ಷ ಆದಾಯ ಹೆಚ್ಚಿದಂತೆ SIP ಮೊತ್ತವನ್ನು ಹೆಚ್ಚಿಸುವುದಕ್ಕೆ ಸ್ಟೆಪಪ್ ಎಸ್​ಐಪಿ (Step-Up) ಎನ್ನುತ್ತಾರೆ. ಇದರ ಜೊತೆಗೆ, ಹಣದುಬ್ಬರದ ಅಂಶವನ್ನೂ ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ. ಹಣದುಬ್ಬರ ಕಳೆದರೆ ಎಷ್ಟು ರಿಟರ್ನ್ ಸಿಗುತ್ತದೆ ಎಂಬುದು ಮುಖ್ಯ. ಇದು ಭವಿಷ್ಯದಲ್ಲಿ ಸಿಗುವ ಹಣದ ನಿಜವಾದ ಕೊಳ್ಳುವ ಶಕ್ತಿ (Purchasing Power) ಎಷ್ಟಿರುತ್ತದೆ ಎಂಬುದರ ಸ್ಪಷ್ಟ ಚಿತ್ರಣ ನೀಡುತ್ತದೆ. ಈ ಟೂಲ್​ನ ಲಿಂಕ್: dhan.co/mutual-fund-calculators/step-up-sip-calculator-with-inflation/

3. ಎಕ್ಸ್‌ಪೆನ್ಸ್ ರೇಷಿಯೋ ಕ್ಯಾಲ್ಕುಲೇಟರ್

ಮ್ಯೂಚುಯಲ್ ಫಂಡ್ ಕಂಪನಿಗಳು ನಿರ್ವಹಣಾ ವೆಚ್ಚವಾಗಿ ವಿಧಿಸುವ ‘ಎಕ್ಸ್‌ಪೆನ್ಸ್ ರೇಷಿಯೋ’ ದೀರ್ಘಾವಧಿಯಲ್ಲಿ ನಿಮ್ಮ ಒಟ್ಟು ಲಾಭದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಡೈರೆಕ್ಟ್ ಪ್ಲಾನ್‌ಗಳು ಮತ್ತು ಸೂಚ್ಯಂಕ (Index) ಫಂಡ್‌ಗಳನ್ನು ಆಯ್ಕೆ ಮಾಡಲು ಇದು ಸಹಾಯ ಮಾಡುತ್ತದೆ. ಈ ಟೂಲ್​ನ ಲಿಂಕ್ ಇಲ್ಲಿದೆ: dhan.co/mutual-fund-calculators/expense-ratio-calculator/

4. SIP ಪೋರ್ಟ್‌ಫೋಲಿಯೋ ರಿಬ್ಯಾಲೆನ್ಸಿಂಗ್ ಕ್ಯಾಲ್ಕುಲೇಟರ್

ಮಾರುಕಟ್ಟೆಯ ಏರಿಳಿತಗಳಿಂದಾಗಿ ನಿಮ್ಮ ಈಕ್ವಿಟಿ (ಷೇರು) ಮತ್ತು ಡೆಟ್ (ಸಾಲದ ಸಾಧನ) ಹೂಡಿಕೆಗಳ ಶೇಕಡಾವಾರು ಪ್ರಮಾಣ ಬದಲಾಗುತ್ತದೆ. ನಿಮ್ಮ ರಿಸ್ಕ್ ಮಟ್ಟಕ್ಕೆ ತಕ್ಕಂತೆ ಪೋರ್ಟ್‌ಫೋಲಿಯೋವನ್ನು ಮರುಹೊಂದಿಸಲು (Rebalance) ಮತ್ತು ಮುಂದಿನ SIP ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿಯಲು ಈ ಟೂಲ್ ನೆರವಾಗುತ್ತದೆ.

ಇದನ್ನೂ ಓದಿ: ಮೊಬೈಲ್‌ಗೆ ಹಣ ಕಡಿತಗೊಂಡ ಮೆಸೇಜ್ ಬಂದ್ರೂ ಎಟಿಎಂನಿಂದ ಹಣ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ

5. ಗುರಿ ಆಧಾರಿತ ಟಾರ್ಗೆಟ್ ಕಾರ್ಪಸ್ ಕ್ಯಾಲ್ಕುಲೇಟರ್

ಇದು ನಿಮ್ಮ ಭವಿಷ್ಯದ ನಿರ್ದಿಷ್ಟ ಆರ್ಥಿಕ ಗುರಿಯಿಂದ (ಉದಾ: ಮಗಳ ಶಿಕ್ಷಣ, ಮನೆ ಖರೀದಿ, ನಿವೃತ್ತಿ) ಹಿಮ್ಮುಖವಾಗಿ ಲೆಕ್ಕಚಾರ ಮಾಡುತ್ತದೆ. ಉದಾಹರಣೆಗೆ, 15 ವರ್ಷಗಳ ನಂತರ ಹಣದುಬ್ಬರವನ್ನು ಒಳಗೊಂಡಂತೆ ನಿಮಗೆ ಎಷ್ಟು ಕೋಟಿ ರೂ. ಬೇಕು ಮತ್ತು ಅದನ್ನು ತಲುಪಲು ಈಗಿನಿಂದ ಪ್ರತಿ ತಿಂಗಳು ಎಷ್ಟು SIP ಮಾಡಬೇಕು ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಇದರ ಲಿಂಕ್: dhan.co/mutual-fund-calculators/sip-goal-calculator/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us