ಭಾರತ ಸರ್ಕಾರವು 2021-22ನೇ ಸಾಲಿನ (ಸರಣಿ VIII) ಚಂದಾದಾರಿಕೆಗಾಗಿ ಸವರನ್ ಗೋಲ್ಡ್ ಬಾಂಡ್‌ಗಳನ್ನು ತೆರೆಯುವ ದಿನಾಂಕಗಳನ್ನು ಪ್ರಕಟಿಸಿದೆ. ನವೆಂಬರ್ 29ರಿಂದ ಡಿಸೆಂಬರ್ 3ರ ಅವಧಿಯಲ್ಲಿ ಐದು ದಿನಗಳ ಚಂದಾದಾರಿಕೆಗಾಗಿ ಸರಣಿಯು ತೆರೆದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಭಾರತ ಸರ್ಕಾರದ ಪರವಾಗಿ ಬಾಂಡ್‌ಗಳನ್ನು ವಿತರಿಸುತ್ತದೆ. ಚಂದಾದಾರಿಕೆಯ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ ಆರ್ಬಿಐನ ಸೂಚನೆಯಂತೆ ಪ್ರತಿ ಗ್ರಾಂಗೆ 4,791 ರೂಪಾಯಿಗೆ ನಿಗದಿಪಡಿಸಲಾಗಿದೆ. ಆರ್‌ಬಿಐ ಜೊತೆಗಿನ ಸಮಾಲೋಚನೆ ನಂತರ ಸರ್ಕಾರವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ವಿತರಿಸುವ ಬೆಲೆಯಿಂದ ಪ್ರತಿ ಗ್ರಾಂಗೆ 50 ರಿಯಾಯಿತಿ ನೀಡಲು ನಿರ್ಧರಿಸಿದೆ ಮತ್ತು ಪಾವತಿಯನ್ನು ಡಿಜಿಟಲ್ ವಿಧಾನದ ಮೂಲಕ ಮಾಡಬೇಕಾಗುತ್ತದೆ.
ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 4,741 ರೂಪಾಯಿ ಆಗಿರುತ್ತದೆ. ಚಿನ್ನದ ಬಾಂಡ್‌ಗಳು ಎಂಟು ವರ್ಷಗಳ ಅವಧಿಯನ್ನು ಹೊಂದಿದ್ದು, ಐದನೇ ವರ್ಷದ ನಂತರ ನಿರ್ಗಮನ ಆಯ್ಕೆಯನ್ನು ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಚಲಾಯಿಸಬಹುದು. ಹೂಡಿಕೆದಾರರಿಗೆ ನಾಮಿನಲ್ ಮೌಲ್ಯದ ಮೇಲೆ ಅರೆ-ವಾರ್ಷಿಕವಾಗಿ ಪಾವತಿಸಬಹುದಾದ ವಾರ್ಷಿಕ ಶೇ 2.50ರಷ್ಟು ನಿಗದಿತ ದರದಲ್ಲಿ ಪರಿಹಾರವನ್ನು ನೀಡಲಾಗುತ್ತದೆ ಮತ್ತು ಕನಿಷ್ಠ ಅನುಮತಿಸುವ ಹೂಡಿಕೆಯು 1 ಗ್ರಾಂ ಚಿನ್ನವಾಗಿರುತ್ತದೆ.
ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಚಿನ್ನದ ಖರೀದಿಗೆ ಬಳಸುವ ದೇಶೀಯ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯಕ್ಕೆ ಬದಲಾಯಿಸುವ ಉದ್ದೇಶದಿಂದ ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು 2015ರ ನವೆಂಬರ್ನಲ್ಲಿ ಪ್ರಾರಂಭಿಸಲಾಯಿತು.
MCXನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ 10 ಗ್ರಾಂಗೆ ₹47,728 ಕ್ಕೆ ಏರಿದೆ. ಏರಿಕೆಯ ಹೊರತಾಗಿಯೂ, ಅಮೆರಿಕ ವಿತ್ತೀಯ ನೀತಿಯ ನಿರೀಕ್ಷೆಗಿಂತ ಮುಂಚೆಯೇ ಬಿಗಿಯಾಗುವ ಭಯವು ಬೆಲೆಬಾಳುವ ಲೋಹದ ಮೇಲೆ ತೂಗುವುದರಿಂದ ಈ ತಿಂಗಳ ಗರಿಷ್ಠ ಮಟ್ಟದಿಂದ ಪ್ರತಿ 10 ಗ್ರಾಂ ಚಿನ್ನ 1,000ಕ್ಕಿಂತ ಕಡಿಮೆಯಿದೆ.
ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?