Gold Price Today: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850 ರೂಪಾಯಿ!
Gold Rate Today: ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,48,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,9300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,89,300 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು: ಚಿನ್ನ ಖರೀದಿಸುವಾಗ ದರ ಸ್ವಲ್ಪ ಮಟ್ಟಿಗಾದರೂ ಇಳಿಕೆ ಆಗಿರಲಿ ಎಂಬ ಆಸೆ ಇರುವುದು ತಪ್ಪಲ್ಲ. ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗಿರುವಾಗ ದರ ಇಳಿಕೆಯತ್ತ ಸಾಗಿದ್ದರೆ ಸಮಾಧಾನದ ವಿಷಯ. ನೀವು ಅದೆಷ್ಟೋ ವರ್ಷಗಳಿಂದ ಚಿನ್ನ ಖರೀದಿಸಬೇಕು ಅಂದುಕೊಂಡು ಹಣವನ್ನು ಕೂಡಿಡುತ್ತಾ ಬಂದಿರುತ್ತೀರಿ. ಮನೆಯಲ್ಲಿ ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನ ಖರೀದಿಸುವ ಆಸೆ ಇರುತ್ತದೆ. ಹಾಗಿರುವಾಗ ಇಂದು ಶನಿವಾರ (ನವೆಂಬರ್ 27) ಚಿನ್ನ (Gold price), ಬೆಳ್ಳಿಗೆ ಎಷ್ಟಿದೆ ಬೆಲೆ? ಎಂಬ ಮಾಹಿತಿ ತಿಳಿಯಿರಿ. ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ. ಇಂದು ಚಿನ್ನ, ಬೆಳ್ಳಿ ದರದಲ್ಲಿ (Silver Price) ಏರಿಕೆಯಾಗಿದೆ. ಹೀಗಿರುವಾಗ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಂದು ಎಷ್ಟು ಏರಿಕೆ ಆಗಿದೆ? ಎಂಬೆಲ್ಲಾ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price) ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,48,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,930 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,89,300 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 63,100 ರೂಪಾಯಿ ನಿಗದಿಯಾಗಿದೆ. ಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price) ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,420 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,200 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 4,600 ರೂಪಾಯಿಯಷ್ಟು ಏರಿಕೆ ಆಗಿದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿಯಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 67,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಹೈದರಾಬಾದ್ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price) ಹೈದರಾಬಾದ್ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ಬೆಲೆ 4,48,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,930 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,89,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 17,000 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಆಗಿದ್ದು, ಕೆಜಿ ಬೆಳ್ಳಿಗೆ 67,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?
Published On - 7:29 am, Sat, 27 November 21